ನವದೆಹಲಿ:ಪಾಕಿಸ್ತಾನದಲ್ಲಿ ತಾನು ನಿರ್ಮಿಸುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ ಮತ್ತು ಗ್ವದಾರ್​ ಬಂದರಿನಲ್ಲಿ ಹೊಸದಾಗಿ ನಿರ್ಮಿಸಿರುವ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ನೆಲೆಯ ರಕ್ಷಣೆಯ ನೆಪದಲ್ಲಿ ಪಾಕಿಸ್ತಾನಕ್ಕೆ 4 ಅಟ್ಯಾಕ್​ ಡ್ರೋನ್​ಗಳನ್ನು ಮಾರಾಟ ಮಾಡಲು ಚೀನಾ ಮುಂದಾಗಿದೆ.
ಗ್ವಾದಾರ್​ ಬಂದರು ಬಲೂಚಿನಾಸ್ತಾನದ ನೈಋತ್ಯ ಭಾಗಕ್ಕೆ ಅಂಟಿಕೊಂಡಂತೆ ಇದೆ. ಈ ಪ್ರದೇಶದ ಚೀನಾದ ಮಹತ್ವಾಕಾಂಕ್ಷಿ ಒನ್​ ಬೆಲ್ಟ್​ ಒನ್​ ರೋಡ್​ ಯೋಜನೆಯ ತುಂಬಾ ಮಹತ್ವದ ಭಾಗವಾಗಿದೆ. ಈ ಪ್ರದೇಶದಲ್ಲಿ ಸದಾ ಒಂದಿಲ್ಲೊಂದು ದಾಳಿಗಳು ಸಂಭವಿಸುತ್ತಲೇ ಇರುವುದರಿಂದ, ಅಲ್ಲಿನ ರಕ್ಷಣೆಯ ನೆಪದಲ್ಲಿ ಚೀನಾ ಈ ಡ್ರೋನ್​ಗಳನ್ನು ಪಾಕ್​ಗೆ ಕೊಡುತ್ತಿದೆ.
ಇದನ್ನೂ ಓದಿ:ಭಾರತವನ್ನು ಮಣಿಸುವ ಗುರಿ, ಭೂತಾನ್​ನೊಂದಿಗೆ ಚೀನಾ ಕಿತಾಪತಿ
ವಿಂಗ್​ ಲೂಂಗ್​ 2 ಎಂಬ 48 ಜಿಜೆ-2 ಡ್ರೋನ್​ಗಳನ್ನು ಚೀನಾ ವಿನ್ಯಾಸಗೊಳಿಸಿದೆ. ಪಾಕಿಸ್ತಾನದ ವಾಯುಪಡೆಯ ಬಳಕೆಗೂ ಲಭ್ಯವಾಗುವ ರೀತಿಯಲ್ಲಿ ಈ ಡ್ರೋನ್​ಗಳನ್ನು ಜಂಟಿಯಾಗಿ ತಯಾರಿಸಲು ಚೀನಾ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ.
ಈ ಅಟ್ಯಾಕ್​ ಡ್ರೋನ್​ಗಳಲ್ಲಿ 12 ಗಗನದಿಂದ ಗಗನಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಜೋಡಣೆ ಮಾಡಲಾಗಿರುತ್ತದೆ. ಟರ್ಕಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಯುಎಇ ಬೆಂಬಲಿತ ಬಂಡುಕೋರರು ಚೀನಾದ ಈ ಡ್ರೋನ್​ಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ, ಭಾರತದ ವಿರುದ್ಧ ಉಗ್ರರು ಕೂಡ ಈ ಡ್ರೋನ್​ಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಡಿಫೆನ್ಸ್​ ಸ್ಟ್ಯಾಂಡಿಂಗ್ ಕಮಿಟಿಯ 11 ಸಭೆಗಳಿಗೆ ಹಾಜರಾಗಿಲ್ಲ ರಾಹುಲ್ ಗಾಂಧಿ: ಆದರೂ ಸೇನೆಯನ್ನು ಟೀಕಿಸ್ತಿದ್ದಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
