ನವದೆಹಲಿ:ಇದ್ದಕ್ಕಿದ್ದಂತೆ ಕೋವಿಡ್​ 19 ಸೋಂಕು ಪ್ರಕರಣ ಹೆಚ್ಚಾಗಿರುವುದು ಮತ್ತೊಂದು ಆತಂಕದ ಅಲೆ ಏಳುವ ಅನುಮಾನ ಮೂಡುವಂತೆ ಮಾಡಿದೆ. ಚೀನಾದಲ್ಲಿ ಇಂದು ಎರಡು ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು ದೈನಂದಿನ ಪ್ರಕರಣ ವರದಿಯಾಗಿದೆ.
ಚೀನಾದ ಸುಮಾರು 12 ಪಟ್ಟಣಗಳಲ್ಲಿ ಒಟ್ಟು 1 ಸಾವಿರಕ್ಕೂ ಅಧಿಕ ದೈನಂದಿನ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ಎರಡು ವರ್ಷಗಳಲ್ಲೇ ಅತ್ಯಧಿಕ ದೈನಂದಿನ ಪ್ರಕರಣ ಎಂಬುದಾಗಿ ಅಲ್ಲಿನ ಅಧಿಕೃತ ಮೂಲಗಳೇ ಹೇಳಿವೆ. ಈಗ ಹೊಸದಾಗಿ ಪತ್ತೆಯಾಗಿರುವ ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ 703 ಅಸಿಂಪ್ಟಮ್ಯಾಟಿಕ್ ಹಾಗೂ 397 ಸಿಂಪ್ಟಮ್ಯಾಟಿಕ್​ ಪ್ರಕರಣಗಳಾಗಿವೆ.
ಮತ್ತೊಂದೆಡೆ ಕರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಚೀನಾದ ಚಾಂಗ್​ಚುನ್​ ಕೈಗಾರಿಕಾ ಪ್ರದೇಶದ 90 ಲಕ್ಷ ನಿವಾಸಿಗಳಿರುವಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ವಿಧಿಸಲಾಗಿದೆ. ಇಲ್ಲಿನ ನಿವಾಸಿಗರು ಸೂಕ್ತ ಕಾರಣವಿಲ್ಲದೆ ಮನೆಯಿಂದ ಹೊರಗೆ ಹೋಗುವಂತಿಲ್ಲ ಹಾಗೂ ಅವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಿದೆ. ಎಲ್ಲರೂ ಮನೆಯಲ್ಲೇ ಇರುವಂತೆ ಹೇಳಲಾಗಿದ್ದು, ಪ್ರತಿ ಮನೆಯ ಒಬ್ಬ ವ್ಯಕ್ತಿಗಷ್ಟೇ ಹೊರಗೆ ಬಂದು ಆಹಾರ ಇತ್ಯಾದಿ ಅತ್ಯಗತ್ಯ ಪದಾರ್ಥ ಕೊಂಡುಹೋಗಲು ಅನುಮತಿ ನೀಡಲಾಗಿದೆ.
https://www.vijayavani.net/son-who-came-to-final-rites-of-father-is-brain-dead/
ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
