ನವದೆಹಲಿ:ರಾಷ್ಟ್ರಪತಿ, ಪ್ರಧಾನಮಂತ್ರಿ, ಸಿಜೆಐರಿಂದ ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳವರೆಗೆ 10 ಸಾವಿರಕ್ಕೂ ಅಧಿಕ ಭಾರತೀಯರ ಡೇಟಾ ಕಳ್ಳತನ ಮಾಡುತ್ತಿರುವ ಚೀನಾದ ಡಿಜಿಟಲ್ ಬೇಹುಗಾರಿಕೆ ನಿಗಾದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಇರುವ ಮಾಹಿತಿ ಬಹಿರಂಗವಾಗಿದೆ. ಮಾತ್ರವಲ್ಲ, ಹಲವು ರಾಜ್ಯಗಳ ಸಿಎಂಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಕೂಡ ಚೀನಾ ಪಟ್ಟಿಯಲ್ಲಿದ್ದಾರೆ.
ಚೀನಾ ತನ್ನ ಡಿಜಿಟಲ್ ಬೇಹುಗಾರಿಕೆ ಜಾಲದ ಮೂಲಕ ದೇಶದ ಪ್ರಮುಖ ಗಣ್ಯರ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚೀನಾದ ಶೆಂಝೇನ್​ನಲ್ಲಿರುವ ಜೆನ್​ಹುವಾ ಎಂಬ ಐಟಿ ಸಂಸ್ಥೆ ವಿಶ್ವಾದ್ಯಂತ ಸುಮಾರು 25 ಲಕ್ಷ ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 10 ಸಾವಿರ ಭಾರತೀಯರಲ್ಲಿ 375 ಸರ್ಕಾರಿ ಅಧಿಕಾರಿಗಳಾಗಿದ್ದರೆ ಉಳಿದವರು ಸಮಾಜದ ಪ್ರಮುಖ ವ್ಯಕ್ತಿಗಳೆಂದು ಹೇಳಲಾಗುತ್ತಿದೆ. ಎಸಿಎಸ್ ರವಿಕುಮಾರ್ ಈ ಪಟ್ಟಿಯಲ್ಲಿರುವ ಕರ್ನಾಟಕದ ಪ್ರಮುಖ ಅಧಿಕಾರಿಯಾಗಿದ್ದಾರೆ.
ಪ್ರಧಾನಿ ಕಚೇರಿಯ ಆರು ಹಿರಿಯ ಅಧಿಕಾರಿಗಳ ಮೇಲೆ ಚೀನಾ ಸಂಸ್ಥೆ ಕಣ್ಣಿಟ್ಟಿದೆ. ದೇಶದ ಭದ್ರತೆ ಸಹಿತ ಮಹತ್ವದ ವಿಷಯಗಳನ್ನು ಪ್ರಧಾನಿ ಕಚೇರಿ ನಿರ್ವಹಿಸುತ್ತದೆ. ಇಲ್ಲಿನ ಅಧಿಕಾರಿಗಳಿಗೆ ಹಲವು ಸೂಕ್ಷ್ಮ ಮಾಹಿತಿಗಳು ತಿಳಿದಿರುತ್ತವೆ. ಅಂಥ ಅಧಿಕಾರಿಗಳ ಮೇಲೆ ಚೀನಾ ಬೇಹುಗಾರಿಕೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಹೊಂದಿರುವ ಖಾತೆಗಳ ಹಿರಿಯ ಅಧಿಕಾರಿಗಳು, 23 ಮುಖ್ಯ ಕಾರ್ಯದರ್ಶಿಗಳು, 15 ಡಿಜಿಪಿಗಳು ನಿಗಾ ಪಟ್ಟಿಯಲ್ಲಿ ದ್ದಾರೆ ಎಂದು ಇಂಗ್ಲಿಷ್ ದೈನಿಕ ವರದಿ ಮಾಡಿದೆ.ಇದನ್ನೂ ಓದಿ:WEB EXCLUSIVE|ಪ್ರಕೃತಿ ಶಿಬಿರಗಳು ಜೆಎಲ್​ಆರ್ ತೆಕ್ಕೆಗೆ ?ವನ್ಯಜೀವಿ ಪ್ರಿಯರಿಂದ ಆಕ್ಷೇಪ
ಸರ್ಕಾರದ ಜತೆ ನಂಟು :ಜೆನ್​ಹುವಾ ನೆಪಕ್ಕೆ ಮಾತ್ರ ಐಟಿ ಸಂಸ್ಥೆಯಾಗಿದ್ದು, ಅಲ್ಲಿನ ಕಮ್ಯುನಿಸ್ಟ್ ಸರ್ಕಾರದ ಜತೆ ನೇರ ನಂಟು ಹೊಂದಿದೆ. ಭಾರತ ಸಹಿತ ವಿವಿಧ ದೇಶಗಳ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕಿ ಅಲ್ಲಿನ ಸರ್ಕಾರಕ್ಕೆ ನೀಡುತ್ತಿರುವ ಶಂಕೆ ಇದೆ. ಐಟಿ ಕಂಪನಿ ಸೋಗಿನಲ್ಲಿ ಚೀನಾ ಸರ್ಕಾರವೇ ಗೂಢಚಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನವೂ ಇದೆ.
ಯಾರ್ಯಾರ ಮೇಲೆ ಕಣ್ಣು?:ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ, ಕಿರಿಯ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ, ಮೂಲ ಸೌಕರ್ಯ, ಹಣಕಾಸು, ಕಾನೂನು ಸುವ್ಯವಸ್ಥೆ, ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು, ಸರ್ಕಾರದಿಂದ ಮಾಹಿತಿ ಸಂಗ್ರಹಿಸುವ ಅಧಿಕಾರಿಗಳು, ಮುಖ್ಯ ಚುನಾವಣಾ ಅಧಿಕಾರಿಗಳ ಮೇಲೂ ಚೀನಾ ಕಂಪನಿ ನಿಗಾ ಇಟ್ಟಿದೆ. ಇಷ್ರತ್ ಜಹಾನ್ ಎನ್​ಕೌಂಟರ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಗುಜರಾತ್​ನ ಮಾಜಿ ಡಿಜಿಪಿ ಪಿ.ಪಿ. ಪಾಂಡೆ, 1994ರ ಇಸ್ರೋ ಬೇಹುಗಾರಿಕೆ ಪ್ರಕರಣ ತನಿಖೆ ನಡೆಸಿದ ಡಿಜಿಪಿ ಮ್ಯಾಥ್ಯೂ, ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಗೊಯೆಲ್ ಕೂಡ ಚೀನಾದ ನಿಗಾ ಪಟ್ಟಿಯಲ್ಲಿದ್ದಾರೆಂದು ಹೇಳಲಾಗಿದೆ.
ಎಚ್ಚರಿಕೆಯ ಗಂಟೆ:ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳ ಮೇಲೆ ಚೀನಾ ನಿಗಾ ಇಟ್ಟಿರುವುದು ಭಾರತದ ಭದ್ರತೆಗೆ ಎಚ್ಚರಿಕೆಯ ಗಂಟೆಯಾಗಿದೆ. ಭದ್ರತೆ, ಆರ್ಥಿಕತೆ ಸಹಿತ ಮಹತ್ವದ ಮಾಹಿತಿಗಳು ಚೀನಾದ ಪಾಲಾದರೆ ಭಾರತ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಮುಖ ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನು ಹನಿಟ್ರಾ್ಯಪ್​ನಂಥ ಜಾಲಕ್ಕೆ ಸಿಲುಕಿಸಿ, ಅವರಿಂದ ಮಹತ್ವದ ಮಾಹಿತಿಗಳನ್ನು ಪಡೆಯುವ ಸಾಧ್ಯತೆಯೂ ಇದೆ. ಚೀನಾ ಜತೆ ಗಡಿ ಬಿಕ್ಕಟ್ಟು ನಡೆಯುತ್ತಿರುವ ಬೆನ್ನಲ್ಲೇ ಚೀನಾದ ಡಿಜಿಟಲ್ ಬೇಹುಗಾರಿಕೆ ಬೆಳಕಿಗೆ ಬಂದಿರುವುದು ಮಹತ್ವದ ಸಂಗತಿಯಾಗಿದೆ.
ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ:ಸಂಸತ್​ನ ಮುಂಗಾರು ಅಧಿವೇಶನದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನಾಯಕರು ಚೀನಾ ಬೇಹುಗಾರಿಕೆ ವಿಚಾರ ಪ್ರಸ್ತಾಪಿಸಿದ್ದಾರೆ. ಚೀನಾದ ಬೇಹುಗಾರಿಕೆಗೆ ಭಾರತ ಪ್ರತಿತಂತ್ರ ರೂಪಿಸಬೇಕು. ತಮ್ಮ ಡೇಟಾ, ವ್ಯಕ್ತಿಗತ ಮಾಹಿತಿಗಳ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮಾತನಾಡಿ, ಕರೊನಾ ವೈರಸ್ ಹರಡಿ, ಗಡಿಯಲ್ಲಿ ಉಲ್ಲಂಘನೆ ಮಾಡುತ್ತಿರುವ ಚೀನಾ ಈಗ ಡಿಜಿಟಲ್ ಬೇಹುಗಾರಿಕೆ ನಡೆಸುತ್ತಿದೆ. ಭಾರತ ಈಗ ಚೀನಾದ ಹಿಡಿತದಲ್ಲಿ ಇರುವಂತೆ ತೋರುತ್ತದೆ. ಸರ್ಕಾರಕ್ಕೆ ಈ ಬಗ್ಗೆ ಅರಿವು ಇದೆಯೇ? ಇದರಿಂದ ದೇಶವನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ:ಜೈಲ್​​​ ಬಳಿ ಸಂಜನಾ ಗಲ್ರಾನಿ ಕಿರಿಕ್; ‘ಚಿಕ್ಕದಾಯಿತು..ನಾನು ಹೋಗಲ್ಲ’ ಎಂದು ಕೂಗಾಟ
ಪೂರ್ವ ಲಡಾಖ್​ನಲ್ಲಿ ಚಳಿಗಾಲದಲ್ಲೂ ಯುದ್ಧಕ್ಕೆ ಸಿದ್ಧ ಎಂದು ಭಾರತ ಚೀನಾಕ್ಕೆ ಎಚ್ಚರಿಕೆ ರವಾನಿಸಿದೆ. ‘ಈ ಬಾರಿ ಯುದ್ಧದ ಸ್ಥಿತಿ ನಿರ್ವಣವಾದರೆ, ಹೆಚ್ಚು ತರಬೇತಿ ಹೊಂದಿರುವ, ಸನ್ನದ್ಧರಾಗಿರುವ, ಮಾನಸಿಕವಾಗಿ ಬಲಗೊಂಡಿರುವ ಭಾರತೀಯ ಸೇನೆಯನ್ನು ಚೀನಾ ಎದುರಿಸಲಿದೆ’ ಎಂದು ಸೇನೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಭಾರತೀಯ ಸೇನೆಯ ಸಿದ್ಧತೆ ಸರಿಯಾಗಿಲ್ಲ. ಚಳಿಗಾಲದಲ್ಲಿ ಅದು ಯುದ್ಧ ಎದುರಿಸಲಾಗದು ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್​ ಮಾಡಿರುವ ವರದಿಗೆ ಭಾರತೀಯ ಸೇನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಭಾರತ ಶಾಂತಿ ಪ್ರಿಯ ರಾಷ್ಟ್ರವಾಗಿದ್ದು, ನೆರೆಯ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಬಯಸುತ್ತದೆ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ನಮ್ಮ ನಿಲುವು. ಆದರೆ ಚೀನಾ ಯುದ್ಧ ಸನ್ನಿವೇಶ ಸೃಷ್ಟಿಸಿದರೆ ಅದನ್ನು ಎದುರಿಸಲು ಸಿದ್ಧ ಎಂದು ಸೇನೆ ಸ್ಪಷ್ಟಪಡಿಸಿದೆ.
ನಿರ್ಮಾಣ ಚಟುವಟಿಕೆ ನಿಲ್ಲಿಸದ ಚೀನಾ: ಭಾರತದ ಮೇಲೆ ಗೂಬೆ ಕೂರಿಸುವ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + two =
Remember me
