ನವದೆಹಲಿ:ಭೂತಾನ್​ನ ಗಡಿ ಪ್ರದೇಶ ತನ್ನದೆಂದು ಹೇಳಿಕೊಳ್ಳುವ ಜತೆಗೆ ಲಡಾಖ್​ ಪೂರ್ವಭಾಗದಲ್ಲಿ ಭಾರತೀಯ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಚೀನಾದ ಕ್ರಮ ಜಾಗತಿಕ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
ಗುರುವಾರ ಈ ಹೇಳಿಕೆ ನೀಡಿರುವ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ, ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನೇತೃತ್ವದ ಆಡಳಿತ ತಾವು ಮಾಡುವ ಕೆಲಸವನ್ನು ನೋಡಿಕೊಂಡು ಇತರೆ ರಾಷ್ಟ್ರಗಳು ಸುಮ್ಮನೆ ಕೂರುತ್ತವೋ ಹೇಗೆ ಎಂದು ಪರೀಕ್ಷಿಸುತ್ತಿರುವಂತೆ ಇದೆ ಎಂದು ಹೇಳಿದ್ದಾರೆ.
ಚೀನಾ ಇತ್ತೀಚೆಗೆ ಭೂತಾನ್​ನ ಸಾಕ್​ಟೆಂಡ್​ ವನ್ಯಜೀವಿ ರಾಷ್ಟ್ರೀಯ ಸಂರಕ್ಷಣಾ ವಲಯ ತನ್ನದೆಂದು ಹೇಳಿಕೊಂಡಿತ್ತು. ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಅದು, ಭೂತಾನ್​ನ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ವಲಯಕ್ಕೆ ಮಂಡಳಿಯ ಧನಸಹಾಯ ನೀಡಲು ವಿರೋಧ ವ್ಯಕ್ತಪಡಿಸಿತ್ತು.
ಇದನ್ನೂ ಓದಿ:ಮಹಿಳೆಯರಿಗೆ ಭಾರಿ ಉಡುಗೊರೆ; ರಕ್ಷಾ ಬಂಧನ ದಿನದಂದು ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
1989ರಿಂದಲೂ ಚೀನಾ ಇದನ್ನೇ ಪ್ರತಿಪಾದಿಸಿಕೊಂಡು ಬರುತ್ತಿದೆ. ಆದರೆ, ಕ್ಸಿ ಜಿನ್​ಪಿಂಗ್​ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಇದು ಹೆಚ್ಚಾಗಿದೆ ಎಂದು ಸದನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾವು ತನ್ನ ಪ್ರಭಾವ ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅವರು ಚೀನಾ ನಂಬಿಕೆಯ ಸಾಮಾಜವಾದವನ್ನು ಎಲ್ಲೆಡೆ ಪಸರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ತಮ್ಮ ವ್ಯಾಪ್ತಿಯನ್ನು ಭೂತಾನ್​ಗೂ ವಿಸ್ತರಿಸಲು ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿದೆ. ಭಾರತದಲ್ಲಿ ಅದರದ್ದೇ ಆದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ. ಇದೆಲ್ಲವನ್ನೂ ಗಮನಿಸಿದಾಗ ಚೀನಾ ಜಾಗತಿಕ ಸಮುದಾಯದ ಸಹನೆಯನ್ನು ಕೆಣಕುತ್ತಿರುವಂತೆ ಕಾಣುತ್ತಿದೆ. ಈ ರೀತಿಯ ಬೆದರಿಕೆಗಳಿಗೆ ಸೋತು ಜಾಗತಿಕ ಸಮುದಾಯ ಸುಮ್ಮನಾಗಿಬಿಡುತ್ತದೆಯೋ ಹೇಗೆ ಎಂಬುದನ್ನು ಅವರು ಪರೀಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಇಂಥ ಬೆದರಿಕೆ ತಂತ್ರಗಳಿಗೆ ಮಣಿಯದೆ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಇಡಿ ಜಗತ್ತು ಸಿದ್ಧವಾಗಿದೆ ಎಂಬ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದ್ದು, ಆ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ಮಾಡಬೇಕಿದೆ ಎಂದು ಸಲಹ ನೀಡಿದ್ದಾರೆ.
ಮೂರು ವಿಶೇಷ ವಿಮಾನ, ಐಷಾರಾಮಿ ರೆಸಾರ್ಟ್​, ಪಂಚಾತಾರಾ ಹೋಟೆಲ್​; ಇವರಿಗೆ ಇನ್ನೂ 15 ದಿನ ರಾಜವೈಭೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 4 =
Remember me
