ನವದೆಹಲಿ:ಹಲವು ಸುತ್ತಿನ ಮಾತುಕತೆ, ಜಾಗತಿಕ ಒತ್ತಡ ನಡುವೆಯೂ ಚೀನಾ ಮೊಂಡುತನ ಮುಂದುವರಿಸಿದೆ. ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ 14ನೇ ಗಸ್ತು ಪಾಯಿಂಟ್ ಬಳಿಯ ನದಿ ತಿರುವಿನಲ್ಲಿ ಚೀನಾದ ಸೇನೆ ಇನ್ನೂ ಬೀಡುಬಿಟ್ಟಿದೆ.
ಟಾರ್ಪಾಲ್​ನಿಂದ ನಿರ್ವಿುಸಿದ ಟೆಂಟ್​ಗಳು ಇರುವುದು ಉಪಗ್ರಹ ಚಿತ್ರದಿಂದ ಪತ್ತೆಯಾಗಿದೆ. ಭಾರತದ ಗಡಿ ಭಾಗಕ್ಕೆ ಒಳಪಡುವ ನದಿ ದಂಡೆಗುಂಟ ಸಾಗುವ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಚೀನಾ ಶಿಬಿರಗಳು ಇವೆ ಎಂಬುದಕ್ಕೆ ಇದು ಪುರಾವೆ ಆಗಿದೆ. ಟಾರ್ಪಾಲ್ ನಿರ್ವಣಗಳು ದೊಡ್ಡ ಪ್ರಮಾಣದಲ್ಲಿ ಇರುವುದನ್ನು ನೋಡಿದರೆ, ಎಲ್​ಎಸಿಯ 9 ಕಿ.ಮೀ. ಪರಧಿಯಲ್ಲಿ ಕನಿಷ್ಠ 16 ಶಿಬಿರಗಳನ್ನು ಚೀನಾ ಸೇನೆ ಹೊಂದಿದೆ ಎಂಬ ಶಂಕೆ ಉಂಟಾಗುತ್ತದೆ ಮತ್ತು ಇವುಗಳನ್ನು 33 ದಿನಗಳಲ್ಲಿ ನಿರ್ವಿುಸಿದೆ ಎಂದು ಮೂಲಗಳು ತಿಳಿಸಿವೆ.
ಉಪಗ್ರಹಗಳು ರವಾನಿಸಿರುವ ಈ ಮಾಹಿತಿಯನ್ನು ಅವಲೋಕಿಸಿದರೆ, ಜೂನ್ 22ರಂದು ನಡೆದ ಉಭಯ ಸೇನೆಗಳ ಲೆಫ್ಟಿನೆಂಟ್ ಜನರಲ್ ಹಂತದ ಮಾತುಕತೆಯಲ್ಲಿ ಒಪ್ಪಿರುವ ಅಂಶಗಳನ್ನು ಚೀನಾ ಗಾಳಿಗೆ ತೂರಿದೆ. ಆಕ್ಷೇಪಾರ್ಹ ಸ್ಥಳಗಳಿಂದ ಸೇನೆ ಮತ್ತು ನಿರ್ವಣಗಳನ್ನು ಚೀನಾ ತೆರವುಗೊಳಿಸದಿರುವುದು ಸುಸ್ಪಷ್ಟವಾಗಿದೆ. ಗಲ್ವಾನ್ ನದಿಗೆ ಅಡ್ಡಲಾಗಿ ಭಾರತದ ಸೇನೆ ಕಟ್ಟಿದ್ದ ಕಲ್ಲಿನ ಒಡ್ಡಿಗೂ ಹಾನಿಯಾಗಿರುವುದು ಜೂನ್ 25ರಂದು ಸಂಗ್ರಹಿಸಲಾದ ಉಪಗ್ರಹ ಚಿತ್ರದಲ್ಲಿ ಗೋಚರಿಸುತ್ತದೆ. ಬುಲ್ಡೋಜರ್​ಗಳು, ನಿರ್ಮಾಣ ಕಾಮಗಾರಿಯ ವಾಹನಗಳ ಚಿತ್ರಗಳು ಲಭ್ಯವಾಗಿವೆ. ಈ ಒಡ್ಡಿನ ವರೆಗೂ ಭಾರತ ಸೇನೆ ಬಹಳ ಕಾಲದವರೆಗೆ ಗಸ್ತು ತಿರುಗುತ್ತಿತ್ತು. ಆದರೆ, ಈ ಒಡ್ಡನ್ನು ಚೀನಾ ಅತಿಕ್ರಮಿಸಿದೆ.
ಟಿ-ಶರ್ಟ್ ಸುಟ್ಟು ಜೊಮ್ಯಾಟೊ ಉದ್ಯೋಗಿಗಳ ಪ್ರತಿಭಟನೆ: ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಉದ್ಯೋಗಿಗಳು ಸಂಸ್ಥೆಯಿಂದ ನೀಡಿದ್ದ ‘ಜೊಮ್ಯಾಟೊ’ ಹೆಸರಿರುವ ಟಿ-ಶರ್ಟ್​ಗಳನ್ನು ಸುಟ್ಟು ಕೋಲ್ಕತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೆಲವರು ಉದ್ಯೋಗವನ್ನೂ ತ್ಯಜಿಸಿದ್ದಾರೆ. ಜೊಮ್ಯಾಟೊ ಕಂಪನಿಯಲ್ಲಿ ಚೀನಾದ ಹೂಡಿಕೆ ಇರುವ ಕಾರಣ ಅವರು ಈ ಪ್ರತಿಭಟನೆ ನಡೆಸಿದರು. ಜತೆಗೆ ಜೊಮ್ಯಾಟೊ ಮೂಲಕ ಆಹಾರ ತರಿಸಿಕೊಳ್ಳದಂತೆ ಗ್ರಾಹಕರಿಗೆ ಮನವಿಯನ್ನೂ ಮಾಡಿದ್ದಾರೆ. ‘ಭಾರತದಿಂದಲೇ ಲಾಭ ಮಾಡಿಕೊಳ್ಳುತ್ತಿರುವ ಚೀನಾ, ನಮ್ಮ ಸೈನಿಕರ ಮೇಲೆ ದಾಳಿ ಮಾಡುತ್ತಿದೆ. ದೇಶದ ಭೂಮಿ ಕಬಳಿಸಲು ಎಂದಿಗೂ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ದಿನದಲ್ಲೇ ಹೊಸ ಸೇತುವೆ ನಿರ್ಮಾಣ:ಗಡಿಯಿಂದ 65 ಕಿ.ಮೀ. ದೂರದಲ್ಲಿ ಕುಸಿದು ಬಿದ್ದಿದ್ದ ಸೇತುವೆಯನ್ನು ಭಾರತದ ಗಡಿ ರಸ್ತೆ ಅಭಿವೃದ್ಧಿ ಸಂಸ್ಥೆ (ಬಿಆರ್​ಒ) ಐದು ದಿನಗಳಲ್ಲೇ ನಿರ್ಮಾಣ ಮಾಡಿದೆ. ಉತ್ತರಾಖಂಡದ ಪಿತೋರಗಢ ಜಿಲ್ಲೆಯಲ್ಲಿ ಮುನ್ಸಿಯಾರಿ ಪಟ್ಟಣದ ಬಳಿ ಇದ್ದ ಹಳೆಯ ಸೇತುವೆ ಜೂನ್ 22ರಂದು ಕುಸಿದು ಬಿದ್ದಿತ್ತು. ಇದರ ಸಮೀಪದಲ್ಲೇ ಹೊಸ ಸೇತುವೆಯನ್ನು ಶನಿವಾರ ನಿರ್ವಿುಸಲಾಗಿದೆ. ಈ ಗಡಿಯಲ್ಲಿರುವ ಸೇನೆ ಮತ್ತು ಐಟಿಬಿಪಿ ಯೋಧರಿಗೆ ಪಡಿತರ ಪೂರೈಕೆ ಮಾಡುವ ಮಹತ್ವದ ಮಾರ್ಗದಲ್ಲಿ ಈ ಸೇತುವೆ ಇದೆ . ಗಡಿ ಭಾಗದ 15 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಬಿಆರ್​ಒ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
