ನವದೆಹಲಿ:ಲಡಾಖ್​ನ ಪೂರ್ವಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಇದರ ನಡುವೆ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಫಿಂಗರ್​ 4 ಬಳಿ ಹೆಲಿಪ್ಯಾಡ್​ ನಿರ್ಮಿಸುವ ಜತೆಗೆ ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ತನ್ಮೂಲಕ ಅದು ಒಪ್ಪಂದದನ್ವಯ ಸೇನೆಯನ್ನು ಹಿಂಪಡೆಯುವ ಬದಲಿಗೆ ಯುದ್ಧಕ್ಕೆ ಸಜ್ಜಾಗುತ್ತಿರುವಂತೆ ತೋರುತ್ತಿದೆ.
ಈ ವಿಷಯವನ್ನು ಖಚಿತಪಡಿಸಿರುವ ಭಾರತೀಯ ಸೇನಾಪಡೆಯ ಅಧಿಕಾರಿಯೊಬ್ಬರು, ಪ್ಯಾಂಗಾಂಗ್​ ತ್ಸೊ ಸರೋವರದ ಉತ್ತರ ಭಾಗದಲ್ಲಿ ತಮ್ಮ ಆದಿಪತ್ಯ ಸ್ಥಾಪಿಸಲು ಚೀನಿಯರು ಹುನ್ನಾರ ನಡೆಸಿದ್ದಾರೆ. ಫಿಂಗರ್​ 4ನಲ್ಲಿ ಅವರು ಈಗಾಗಲೆ ಅಭಿವೃದ್ಧಿಪಡಿಸಿಕೊಂಡಿರುವ ಮೂಲಸೌಕರ್ಯಗಳ ಜತೆಗೆ ಹೆಲಿಪ್ಯಾಡ್​ ಒಂದನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಿಎಲ್​ಎ ಯೋಧರು ಈಗ ನಿಯಮಿತವಾಗಿ ಫಿಂಗರ್​ 3 ಪರ್ವತಶ್ರೇಣಿಯವರೆಗೂ ಗಸ್ತು ನಡೆಸುತ್ತಿದ್ದಾರೆ. ನಮಗೆ ಫಿಂಗರ್​ 2 ಭಾಗಕ್ಕೆ ತೆರಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚೀನಿಯರ ಅನುಕೂಲಕ್ಕೆ ಗಡಿ ಭಾಗದ ರಸ್ತೆ ಅಭಿವೃದ್ಧಿ, ಬೆನ್ನಿಗೆ ಚೂರಿ ಇರಿಯುತ್ತಿದೆ ನೇಪಾಳ
ಇದನ್ನು ಗಮನಿಸಿದಾಗ ಚೀನಿಯರು ತಮ್ಮ ಸೇನೆಯನ್ನು ಹಿಂಪಡೆಯುವುದಾಗಲಿ ಅಥವಾ ಏಪ್ರಿಲ್​ನಲ್ಲಿದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಉದ್ದೇಶ ಇದ್ದಂತಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಈ ಭಾಗದಲ್ಲಿ ಭಾರತೀಯ ಸೇನಾಪಡೆ ಕೂಡ ಸಾಕಷ್ಟು ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ಆದರೆ, ಸ್ಥಳೀಯ ಭೌಗೋಳಿಕ ಸಂರಚನೆಯಿಂದಾಗಿ ನೈಸರ್ಗಿಕ ಅಡಚಣೆಗಳು ಸಾಕಷ್ಟು ಇರುವುದರಿಂದ ಈ ಪ್ರದೇಶಕ್ಕೆ ಹೋಗಿಬರುವುದು ಅಷ್ಟು ಸುಲಭವಲ್ಲ. ಒಟ್ಟಾರೆ ಹೇಳುವುದಾದರೆ ನಮ್ಮ ಪಾಲಿಗೆ ಇದು ಅತ್ಯಂತ ಸವಾಲುದಾಯಕ ಪ್ರದೇಶ ಎಂದು ತಿಳಿಸಿದ್ದಾರೆ.
ಪ್ಯಾಂಗಾಂಗ್​ ತ್ಸೊ ಸರೋವರ ಮತ್ತು ಅದರ ಉತ್ತರ ದಡದ ಭಾಗದ ಬಗ್ಗೆ ಭಾರತ ಮತ್ತು ಚೀನಾದ ನಡುವೆ ಅನತಿ ಕಾಲದಿಂದಲೂ ವಿವಾದ ಇದೆ. ಚೀನಾದವರು ಫಿಂಗರ್​ 8ರ ಬಳಿ ಶಾಶ್ವತವಾದ ನೆಲೆಯನ್ನು ಕಲ್ಪಿಸಿಕೊಂಡಿದ್ದಾರೆ. ಇದೀಗ ಅವರು ಫಿಂಗರ್​ 4 ಭಾಗಕ್ಕೂ ಬಂದಿದ್ದು, ಪರ್ವತಶ್ರೇಣಿ ಹಾಗೂ ದಡದ ಸುತ್ತ ಶಾಶ್ವತ ಶಿಬಿರಗಳು, ಪಿಲ್​ಬಾಕ್ಸ್​ಗಳು, ಬಂಕರ್​ಗಳು ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ನೇಪಾಳವನ್ನು ಚೀನಿಯರಿಗೆ ಒತ್ತೆ ಇಟ್ಟಿರುವ ಕೆ.ಪಿ. ಓಲಿ ವಿರುದ್ಧ ರಾಜಕೀಯ ಬಂಡಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
