ನವದೆಹಲಿ: ಭಾರತ-ಚೀನಾ ನಡುವೆ ಗಡಿ ಸಂಘರ್ಷ ತಾರಕಕ್ಕೆ ಏರಿದ ಈ ಸಂದರ್ಭದಲ್ಲೇ ಮಾಸ್ಕೋದಲ್ಲಿ ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​(ಎಸ್​ಸಿಒ)ನ ಮಹತ್ವದ ಸಭೆ ನಡೆಯುತ್ತಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆ ಸಭೆಯಲ್ಲಿ ಭಾಗವಹಿಸುತ್ತಿದ್ದು, ಅವರ ಜತೆಗೆ ಮಾತುಕತೆಗೆ ಚೀನಾ ರಕ್ಷಣಾ ಸಚಿವ ಜನರಲ್​ ವೇಯ್​ ಫೆನ್ಘೆ ಮುಂದಾಗಿದ್ದಾರೆ. ಇದಕ್ಕಾಗಿ ಸಮಯಾವಕಾಶ ಕೇಳಿದ್ದಾರೆ.
ಎಸ್​ಸಿಒ ಸದಸ್ಯರಾಷ್ಟ್ರಗಳಾದ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದು, ಭಯೋತ್ಪಾದನೆ ಮತ್ತು ಇತರೆ ಸವಾಲುಗಳನ್ನು ಎದುರಿಸುವ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯ ಬಿಡುವಿನ ವೇಳೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ನಿಗದಿಯಾಗಿವೆ. ಆದರೆ, ಚೀನಾ ರಕ್ಷಣಾ ಸಚಿವರ ಜತೆಗಿನ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿರಲಿಲ್ಲ. ಈಗ ಅವರು ಸಮಯಾವಕಾಶ ಕೇಳಿದ್ದು, ಭಾರತದ ಪ್ರತಿಕ್ರಿಯೆ ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ:ಚೀನಾ ಆಧಿಪತ್ಯ ಅಂತ್ಯಕ್ಕೆ ಪ್ಲ್ಯಾನ್​
ಚೀನಾ ಗಡಿ ಸಂಘರ್ಷ ಮುಂದುವರಿಸಿಕೊಂಡೇ ಇನ್ನೊಂದೆಡೆ ಮಾತುಕತೆಗೆ ಮುಂದಾಗುತ್ತ ಜಗತ್ತಿನೆದುರು ಜಾಣತನ ತೋರುವ ಪ್ರಯತ್ನ ಮಾಡುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಯುರೋಪ್​ನಲ್ಲೂ ಜರ್ಮನಿಯಿಂದ ವಾರ್ನಿಂಗ್ ಪಡೆದುಕೊಂಡಿದೆ. (ಏಜೆನ್ಸೀಸ್)
ಲಡಾಖ್‌ ಗಡಿಯಲ್ಲಿ ಚೀನಾ ಕಿತಾಪತಿ: ಲೇಹ್‌ಗೆ ಸೇನಾ ಮುಖ್ಯಸ್ಥರ ಭೇಟಿ

ರಷ್ಯಾಕ್ಕೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eleven =
Remember me
