ನವದೆಹಲಿ:ಕಳೆದ ಕೆಲವು ವಾರಗಳಲ್ಲಿ, ಚೀನಾ ಸರ್ಕಾರದ ಬೆಂಬಲ ಹೊಂದಿರುವ ಹ್ಯಾಕರ್​​ಗಳು ಭಾರತದ ಎರಡೂ ಕರೊನಾ ಲಸಿಕೆ ತಯಾರಿಕಾ ಕಂಪೆನಿಗಳ ಐಟಿ ಸಿಸ್ಟಮ್​ಗಳನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಸೈಫರ್ಮಾ ಎಂಬ ಸೈಬರ್ ಇಂಟೆಲಿಜೆನ್ಸ್ ಕಂಪೆನಿ ವರದಿ ನೀಡಿದೆ. ಚೀನಾದ ಸ್ಟೋನ್ ಪಾಂಡ ಎಂದೂ ಕರೆಯಲಾಗುವ ಎಪಿಟಿ10 ಹ್ಯಾಕಿಂಗ್ ಗುಂಪು ಭಾರತದ ಸೀರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್​​ಗಳನ್ನು ಟಾರ್ಗೆಟ್​ ಮಾಡಿಕೊಂಡಿವೆ ಎನ್ನಲಾಗಿದೆ.
ಗೋಲ್ಡ್​ಮನ್ ಸಾಚ್ಸ್ ನಡೆಸುವ ಸೈಫರ್ಮಾ ಕಂಪೆನಿಯ ಮುಖ್ಯ ಅಧಿಕಾರಿ ಕುಮಾರ್ ರಿತೇಶ್ ಈ ಬಗ್ಗೆ ಮಾಹಿತಿ ನೀಡಿದ್ದು, “ಇದರ ಹಿಂದಿನ ನಿಜವಾದ ಉದ್ದೇಶ ಬೌದ್ಧಿಕ ಆಸ್ತಿಯನ್ನು ಹೊರಹಾಕುವುದು ಮತ್ತು ಭಾರತೀಯ ಔಷಧೀಯ ಕಂಪನಿಗಳ ಮೇಲೆ ಸ್ಪರ್ಧಾತ್ಮಕ ಲಾಭವನ್ನು ಪಡೆಯುವುದೇ ಆಗಿದೆ” ಎಂದಿದ್ದಾರೆ. ಈ ಹ್ಯಾಕರ್​ಗಳು ಭಾರತದ ಸೀರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್​​ನ ಐಟಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿಯಲ್ಲಿರುವ ಅಂತರಗಳು ಮತ್ತು ದುರ್ಬಲತೆಗಳನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಲಸಿಕೆಗೆ ಸಂಬಂಧಿಸಿದ ಯಾವ ಮಾಹಿತಿಯನ್ನು ಎಪಿಟಿ10 ಭಾರತೀಯ ಕಂಪೆನಿಗಳಿಂದ ಕದ್ದಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ
ಎಪಿಟಿ10 ಆಸ್ಟ್ರಜೆನೆಕಾದ ಕರೊನಾ ಲಸಿಕೆಯನ್ನು ಭಾರತ ಸೇರಿ ಹಲವಾರು ದೇಶಗಳಿಗಾಗಿ ತಯಾರಿಸುತ್ತಿರುವ ಸೀರಮ್ ಇನ್ಸ್​ಟಿಟ್ಯೂಟ್ಅನ್ನು ಬೇಕೆಂತಲೇ ಟಾರ್ಗೆಟ್ ಮಾಡುತ್ತಿದೆ. ಅದರ ಹಲವು ಪಬ್ಲಿಕ್ ಸರ್ವರ್​ಗಳು ದುರ್ಬಲವಾಗಿ ನಡೆಯುತ್ತಿರುವುದನ್ನು ಅವರು ಕಂಡುಕೊಂಡಿದ್ದಾರೆ. ದುರ್ಬಲ ವೆಬ್ ಅಪ್ಲಿಕೇಶನ್ ಮತ್ತು ದುರ್ಬಲ ಕಂಟೆಂಟ್ ಮ್ಯಾನೇಜ್​ಮೆಂಟ್ ಬಗ್ಗೆ ಅವರು ಮಾತಾಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ ಎಂದು ಡೆಸಿಫೆರ್ ಟೂಲ್​ನ ಮೂಲಕ ಹ್ಯಾಕರ್​ಗಳನ್ನು ಗಮನಿಸುತ್ತಿರುವ ಸೈಫರ್ಮಾ ಮುಖ್ಯಸ್ಥ ರಿತೇಶ್ ಹೇಳಿದ್ದಾರೆ.
ಈ ಮುನ್ನ ನವೆಂಬರ್​ನಲ್ಲಿ ಮೈಕ್ರೋಸಾಫ್ಟ್ ಕಂಪೆನಿಯು, ಭಾರತ, ಅಮೆರಿಕ ಸೇರಿದಂತೆ ಮತ್ತೆ ಕೆಲವು ದೇಶಗಳಲ್ಲಿರುವ ಕರೊನಾ ಲಸಿಕೆ ಕಂಪೆನಿಗಳ ಮೇಲೆ ರಷಿಯಾ ಮತ್ತು ಉತ್ತರ ಕೊರಿಯಾ ದೇಶಗಳು ಸೈಬರ್ ಅಟ್ಯಾಕ್​ ನಡೆಸುತ್ತಿವೆ ಎಂದು ಆರೋಪಿಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

“ದಾಖಲೆ ವೇಗದಲ್ಲಿ ಹೈವೇ ಕಾಮಗಾರಿ… ದಿನಕ್ಕೆ 32.85 ಕಿಲೋಮೀಟರ್ ರಸ್ತೆ ನಿರ್ಮಾಣ”
ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
