ನವದೆಹಲಿ:ಲಡಾಖ್ ಪೂರ್ವಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಬಹುತೇಕ ಶಮನಗೊಳ್ಳುವ ಹಂತ ತಲುಪುತ್ತಿದೆ. ಪ್ಯಾಂಗಾಂಗ್​ ತ್ಸೊ ಸರೋವರದ ಫಿಂಗರ್​ 4ರ ಬಳಿ ಬೀಡುಬಿಟ್ಟಿದ್ದ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರು ಭಾಗಶಃ ಹಿಂದಕ್ಕೆ ಸರಿದಿದ್ದಾರೆ.
ಫಿಂಗರ್​ 4ರ ಬಳಿ ಪಿಎಲ್​ಎ ಯೋಧರು ನಿರ್ಮಿಸಿದ್ದ ಟೆಂಟ್​ಗಳೆಲ್ಲವನ್ನೂ ತೆರವುಗೊಳಿಸಲಾಗಿದೆ. ಆದರೆ, ಸರೋವರದ ಏಣುಗಳಲ್ಲಿ ನಿರ್ಮಿಸಲಾಗಿದ್ದ ಬಯಲು ಶಿಬಿರಗಳು ಇನ್ನೂ ಹಾಗೆಯೇ ಇವೆ. ಈ ಪ್ರದೇಶವನ್ನು ಶುಕ್ರವಾರ ಹಾದು ಹೋಗಿರುವ ಖಾಸಗಿ ಉಪಗ್ರಹ ಸ್ಕೈಸ್ಯಾಟ್​ನಿಂದ ತೆಗೆದ ಚಿತ್ರಗಳು ಇದನ್ನು ಖಚಿತಪಡಿಸಿವೆ.
ಇದನ್ನೂ ಓದಿ:ಬರೊಬ್ಬರಿ 38 ವರ್ಷಗಳ ಬಳಿಕ.. ಬ್ಯಾಂಕ್ ದರೋಡೆ ಮಾಡಿದ ಕೊಲೆಗಾರನನ್ನು ಬಂಧಿಸಿದ ಗುಜರಾತ್
ಲಡಾಖ್​ ಬಿಕ್ಕಟ್ಟಿಗೆ ಕಾರಣವಾಗಿದ್ದ ಘರ್ಷಣೆ ನಡೆದಿದ್ದ ಸ್ಥಳಗಳಿಂದ ಚೀನಾ ಮತ್ತು ಭಾರತದ ಯೋಧರು ಸಂಪೂರ್ಣವಾಗಿ ಹಿಂದಕ್ಕೆ ಸರಿಯುತ್ತಿರುವ ಬೆನ್ನಲ್ಲೇ ಈ ಒಂದು ಬೆಳವಣಿಗೆ ಕಂಡು ಬಂದಿದೆ. ಈ ಪ್ರದೇಶದಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂದೆಗೆಯುವ ಬಗ್ಗೆ ಭಾರತ ಮತ್ತು ಚೀನಾದ ಕೋರ್​ ಕಮಾಂಡರ್​ಗಳ ಮಟ್ಟದ 4ನೇ ಸುತ್ತಿನ ಸಭೆ ಮುಂದಿನ ವಾರ ಮುಂದುವರಿಯಲಿದೆ. ವಾಸ್ತವ ಗಡಿರೇಖೆಯ ಮುಂಚೂಣಿ ನೆಲೆಗಳಿಗಿಂತ ಹಿಂಬದಿಯಲ್ಲಿ ನಿಯೋಜನೆಗೊಳಿಸಿರುವ ಸೇನೆಯನ್ನು ಹಿಂತೆಗೆಯುವ ಬಗ್ಗೆ ಈ ಸುತ್ತಿನಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.
ಎಲ್​ಎಸಿಯಿಂದ ಎರಡೂ ಬದಿಗಳಲ್ಲಿ ಮೂರು ಕಿ.ಮೀ. ಅಂತರದ ಮೀಸಲು ಪ್ರದೇಶವನ್ನು ಸೃಷ್ಟಿಸುವಲ್ಲಿ ಭಾರತ ಮತ್ತು ಚೀನಾ ಯಶಸ್ವಿಯಾಗಿವೆ. ಗಲ್ವಾನ್​ ಕಣಿವೆ, ಗೋಗ್ರಾ ಮತ್ತು ಹಾಟ್​ಸ್ಪ್ರಿಂಗ್​ಗಳಲ್ಲಿ ಈಗಾಗಲೆ ಮೀಸಲು ಪ್ರದೇಶವನ್ನು ಸೃಷ್ಟಿಸಲಾಗಿದೆ.
ಲಾಕ್​ಡೌನ್​ ಜಾರಿ ಮಾಡಲು ತಜ್ಞರ ಶಿಫಾರಸು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
