ನವದೆಹಲಿ:ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಪ್ರವಾಹೋಪಾದಿಯಲ್ಲಿ ಭಾರತದ ಮೇಲೆ ಮುಗಿ ಬೀಳಲು ಹಾತೊರೆಯುತ್ತಿದೆ. ಮುಂಚೂಣಿ ನೆಲೆಗಳಲ್ಲಿರುವ ಸೇನಾಪಡೆಗಳಿಗೆ ಬೆಂಬಲವಾಗಿ ಗಲ್ವಾನ್​ ಕಣಿವೆಯಿಂದ 5 ಕಿ.ಮೀ. ದೂರದಲ್ಲಿ ಪಿಎಲ್​ಎನ ಬೃಹತ್​ ಸೇನಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇದೀಗ ಈ ಯೋಧರು ಪ್ರವಾಹದ ಭೀತಿಗೆ ಸಿಲುಕಿಕೊಂಡಿದ್ದಾರೆ.
ಬ್ಯಾಕ್​ಅಪ್​ ಯೋಜನೆಯನ್ವಯ ಈ ಯೋಧರನ್ನು ಅಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ, ಇವರು ಶಿಬಿರಗಳನ್ನು ಹಾಕಿಕೊಂಡಿರುವ ಪ್ರದೇಶದಲ್ಲಿನ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಪಂಡಿತರೊಬ್ಬರ ಐದು ಕೋಟಿ ಗುಳುಂ ಮಾಡಿ ಬಲೆಗೆ ಬಿದ್ದ ದೂರದರ್ಶನ ಮಾಜಿ ಉದ್ಯೋಗಿ
ಹಿರಿಯ ಮಿಲಿಟರಿ ಕಮಾಂಡರ್​ ಅವರ ಪ್ರಕಾರ ಹಿಮ ತುಂಬಾ ವೇಗವಾಗಿ ಕರಗುತ್ತಿದೆ. ಇದರಿಂದಾಗಿ ಅಕ್ಸಾಯ್​ಚಿನ್​ ಪ್ರದೇಶದಿಂದ ಉಗಮಿಸುವ ಹಿಮಗಡ್ಡೆಗಳಿಂದ ಕೂಡಿರುವ ಗಲ್ವಾನ್​ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದು ಯೋಧರ ಪಾಲಿಗೆ ಮೃತ್ಯಕೂಪವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಡ್ರೋನ್​ ಮತ್ತು ಉಪಗ್ರಹದ ಚಿತ್ರಗಳನ್ನು ಆಧರಿಸಿ ಅವರು ಈ ಮಾಹಿತಿ ನೀಡಿದ್ದಾರೆ.
ಜೂ.15ರಂದು ಗಲ್ವಾನ್​ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ, ಚೀನಾ ಇದುವರೆಗೂ ಈ ಘರ್ಷಣೆಯಲ್ಲಿ ಮಡಿದಿರುವ ತನ್ನ ಯೋಧರ ಬಗ್ಗೆ ಮಾಹಿತಿ ನೀಡಿಲ್ಲ. ಬಿಕ್ಕಟ್ಟು ಪರಿಹರಿಸಲು ಉಭಯ ರಾಷ್ಟ್ರಗಳು ಮಿಲಿಟರಿ ಎಂದು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಆದರೂ, ಯಾವುದೇ ಪರಿಹಾರ ದೊರೆತಿಲ್ಲ.
25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × four =
Remember me
