ಬೆಂಗಳೂರು:ಟಿಕ್​ ಟಾಕ್ ಆ್ಯಪ್​ ನಿಷೇಧಕ್ಕೆ ಒಳಗಾದ ಕೂಡಲೇ ಪರ್ಯಾಯ ಆ್ಯಪ್ ಯಾವುದೆಂದು ಹುಡುಕಿದ್ರು ಭಾರತೀಯರು. ಇನ್ನೊಂದೆಡೆ ಟಿಕ್​ಟಾಕ್ ಬ್ಯಾನ್ ಆದ ಕಾರಣ, ಜನ ಮೆಚ್ಚುಗೆಗಾಗಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳು ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು. ಇವೆಲ್ಲದರ ನಡುವೆ ಗಮನ ಸೆಳೆಯಿತು ಬೆಂಗಳೂರಿನ ಚಿಂಗಾರಿ.
ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಚಿಂಗಾರಿ ಆ್ಯಪ್​ – ಶಾರ್ಟ್​ ವಿಡಿಯೋ ಆ್ಯಪ್ ಆಗಿ ಗಮನಸೆಳೆದಿದೆ. ಬೆಂಗಳೂರಿನ ಚಿಂಗಾರಿ ಆ್ಯಪ್​ ನಲ್ಲಿ ಟಿಕ್​ಟಾಕ್​ನಲ್ಲಿರುವಂಥದ್ದೇ ಫೀಚರ್​ ಇದ್ದ ಕಾರಣ ಬಹುಬೇಗನೆ ಎಲ್ಲರ ಮೆಚ್ಚುಗೆ ಪಾತ್ರವಾಯಿತದು. ಗೂಗಲ್ ಪ್ಲೇಸ್ಟೋರ್​ನಲ್ಲಿ 25 ಲಕ್ಷಕ್ಕೂ ಅಧಿಕ ಡೌನ್​ಲೋಡ್ ಆಗಿದೆ. ಜೂನ್ 27ರಂದು ಅಪ್ಡೇಟ್ ಆಗಿರುವ ಆ್ಯಪ್​, ಜೂನ್ 29ರಂದು ಚೀನಾ ಮೂಲದ 59 ಆ್ಯಪ್​ಗಳು ಬ್ಯಾನ್​ ಆಗುತ್ತಿದ್ದಂತೆ ಟಿಕ್​ಟಾಕ್​ಗೆ ಪರ್ಯಾಯವೆಂಬಂತೆ ಬೇಡಿಕೆ ಪಡೆದುಕೊಂಡಿದೆ.
ಇದನ್ನೂ ನೋಡಿ:ಟಿಕ್​ಟಾಕ್​ಗಾಗಿ ಕಣ್ಣೀರಿಟ್ಟ ಮಹಿಳೆ
ಈ ಆ್ಯಪನ್ನು ವಿಶ್ವಾತ್ಮ ನಾಯಕ್​ ಮತ್ತು ಸಿದ್ಧಾರ್ಥ ಗೌತಮ್ ಎಂಬ ಇಬ್ಬರು ಪ್ರೋಗ್ರಾಮರ್​ಗಳು ಇದನ್ನು ಅಭಿವೃದ್ಧಿಪಡಿಸಿದ್ದು, ಒಂದೇ ತಿಂಗಳಲ್ಲಿ 1 ಲಕ್ಷ ಡೌನ್​ಲೋಡ್ ದಾಟಿತ್ತು. ಇದು ಇಂಗ್ಲಿಷ್​, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ , ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗುಭಾಷೆಯಲ್ಲಿ ಲಭ್ಯವಿದೆ. ಚಿಂಗಾರಿಯ ಸಹಸಂಸ್ಥಾಪಕ ಸುಮಿತ್ ಘೋಷ್​ ಅವರು ಆಂಗ್ಲ ಭಾಷಾ ಟಿವಿ ಚಾನೆಲ್ ಜತೆಗೆ ಮಾತನಾಡುತ್ತ, ಚಿಂಗಾರಿ ಆ್ಯಪ್ ಗಂಟೆಗೆ 3-4 ಲಕ್ಷ ಡೌನ್​ಲೋಡ್ ಆಗತೊಡಗಿದೆ ಈಗ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಟಿಕ್​​​ಟಾಕ್​ ನಿಷೇಧವನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿದ ಸಂಸದೆ ನುಸ್ರತ್​ ಜಹಾನ್​

#ChineseAppsBanned– Listen in to what@sumitgh85(Co-founder, Chingari) had to say.
Watch#ChinaFileswith@shreyadhoundialpic.twitter.com/9CVnGmH6Yp
— News18 (@CNNnews18)June 30, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − two =
Remember me
