ಪಟನಾ:ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ)ಯ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರ ಇಂದು ಪಟನಾದ ದಿಘಾ ಘಾಟ್​ನಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಪುತ್ರ ಚಿರಾಗ್​ ಪಾಸ್ವಾನ್​ ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬೆನ್ನಿಗೆ ​ ಪಿತೃ ವಿಯೋಗದ ವೇದನೆಯೊಂದಿಗೆ ಕುಸಿಯುವ ಸ್ಥಿತಿ ತಲುಪಿದ್ದರು.
ಚಿರಾಗ್ ಅಬೋಧಾವಸ್ಥೆಗೆ ಜಾರಿದಾಗ ಕುಸಿಯದಂತೆ ತಡೆದ ಅವರ ಸೋದರ ಸಂಬಂಧಿಗಳು, ಅಂತ್ಯಸಂಸ್ಕಾರ ಪೂರ್ಣಗೊಳಿಸುವಲ್ಲಿ ನೆರವಾದರು. ಚಿರಾಗ್​ ಆರೋಗ್ಯವಾಗಿದ್ದಾರೆ. ಮಾನಸಿಕ ಒತ್ತಡ ಫಲವಾಗಿ ಅವರಿಗೆ ಡಿಹೈಡ್ರೇಶನ್ ಆಗಿದೆ. ಕೆಲವು ಗಂಟೆಗಳಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:PHOTOS: ಕತಾರ್​​ನಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ ಶಿಬಿರ; ಸತ್ಕಾರ್ಯಕ್ಕೆ ಜತೆಯಾದ ಹಲವು ಸಂಘಗಳು
ಮೂವತ್ತೇಳು ವರ್ಷದ ಚಿರಾಗ್ ತಂದೆಯನ್ನು ಬಹಳ ಹಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ರಾಷ್ಟ್ರಮಟ್ಟದ ಲಾಕ್​ಡೌನ್ ಆಗಿದ್ದಾಗ ತಂದೆಯ ಕೂದಲು ಕತ್ತರಿಸುವ ಕೆಲಸವನ್ನೂ ಮಾಡಿ ದೇಶದ ಗಮನಸೆಳೆದಿದ್ದರು. ತಂದೆಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಚಿರಾಗ್​, ಇತ್ತೀಚೆಗೆ ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಿಗೆ ಎನ್​ಡಿಎ ಮೈತ್ರಿಯಿಂದ ಹೊರಬಂದು ಜೆಡಿಯು ವಿರುದ್ಧ ಎಲ್​ಜೆಪಿ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಘೋಷಿಸಿ ಎಲ್ಲರನ್ನೂ ದಂಗುಬಡಿಸಿದ್ದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಚಿರಾಗ್​, ಒಂಟಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು.
ಇದನ್ನೂ ಓದಿ:ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​
ಇಷ್ಟಾಗ್ಯೂ, ರಾಜಕೀಯ ದ್ವೇಷದ ಹೊರತಾಗಿಯೂ ನಿತೀಶ್ ಕುಮಾರ್ ಇಂದು ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ರಾಮವಿಲಾಸ್ ಪಾಸ್ವಾನ್ ಅವರು ಅಕ್ಟೋಬರ್ 8ರಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾಗಿದ್ದರು. (ಏಜೆನ್ಸೀಸ್)
#WATCHBihar: Last rites ceremony of Ram Vilas Paswan being performed by his son Chirag Paswan, at Digha ghat in Patna.
Bihar CM Nitish Kumar, Union Ministers Ravi Shankar Prasad & Nityanand Rai, Deputy CM Shushil Modi & RJD leader Tejashwi Yadav also present.pic.twitter.com/jk0Mu12sC3
— ANI (@ANI)October 10, 2020

ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
