ನವದೆಹಲಿ: ಬಿಹಾರದ ಲೋಕ ಜನಶಕ್ತಿ ಪಕ್ಷದ ಐವರು ಸಂಸದರು ಹಾಜಿಪುರ ಕ್ಷೇತ್ರದ ಸಂಸದ, ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್​ ವಿಲಾಸ್​ ಪಾಸ್ವಾನ್​ರ ಸೋದರ ಸಂಬಂಧಿ ಪಶುಪತಿನಾಥ ಕುಮಾರ್​ ಪರಸ್​ ಅವರನ್ನು ತಮ್ಮ ಪಕ್ಷದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಬಿಹಾರ ರಾಜಕಾರಣ ಹೊಸ ತಿರುವು ಪಡೆದುಕೊಂಡಿದೆ. ಬಿಜೆಪಿ ಮಿತ್ರನಂತಿದ್ದುಕೊಂಡೇ ಎನ್​ಡಿಎ ಮಿತ್ರ ಪಕ್ಷ ಜೆಡಿಯು ಮುಖಂಡ ನಿತಿಶ್​ ಕುಮಾರ್​ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ರಾಮ್​ ವಿಲಾಸ್​ ಪಾಸ್ವಾನ್​ ಪುತ್ರ ಚಿರಾಗ್​ ಪಾಸ್ವಾನ್​ ಈಗ ಸ್ವಪಕ್ಷದ ಸಂಸದೀಯರಿಂದಲೇ ಮೂಲೆಗುಂಪಾಗಿದ್ದಾರೆ. ಚಿರಾಗ್​ರನ್ನು ರಸಲು ಬಿಜೆಪಿ ಕೂಡ ಮುಂದಾಗಿಲ್ಲ.
ಕೇಂದ್ರ ಸಚಿವ ಸಂಪುಟ ಪುನರ್​ ರಚನೆ ಸಾಧ್ಯತೆ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿದ್ದು, ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಜೆಡಿಯು ಮತ್ತು ಎಲ್​ಜೆಪಿ ಎರಡೂ ಪಕ್ಷದ ಸಂಸದರಿಗೆ ಆದ್ಯತೆ ಸಿಗಲಿದೆ ಎನ್ನಲಾಗಿದೆ.
ಏತನ್ಮಧ್ಯೆ, ನಿತಿಶ್​ ಕುಮಾರ್​ರನ್ನು ವಿಕಾಸ್​ ಪುರುಷ ಎಂದು ಬಣ್ಣಿಸಿರುವ ಪಶುಪತಿನಾಥ್​ ಪರಸ್​, ಬಿಹಾರದಲ್ಲೂ ಎನ್​ಡಿಎ ಜತೆ ಕೈಜೋಡಿಸಲು ಸಜ್ಜಾಗಿದ್ದಾರೆ. “ನಾನು ಪಕ್ಷ$$$ವಿಭಜಿಸುವ ಕೆಲಸ ಮಾಡಿಲ್ಲ. ಬದಲಿಗೆ, ಪಕ್ಷ ಕಾಪಾಡಿದ್ದೇನೆ. ಕಳೆದ ಚುನಾವಣೆಯಿಂದ ಹಿಡಿದು ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಶೇ.99ರಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ’ ಎಂದು ಪರಸ್​ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಪ್ರಬುದ್ಧತೆ ಇಲ್ಲದಿದ್ದರೂ, ನಿತೀಶ್​ ವಿರುದ್ಧ ಬಂಡಾಯ ಸಾರಿದ್ದಕ್ಕೆ ಚಿರಾಗ್​ ತಮ್ಮ ಸಂಬಂಧಿಯಿಂದಲೇ ಸರಿಯಾದ ಏಟನ್ನೇ ತಿಂದಿದ್ದಾರೆ ಎಂದು ಬಿಹಾರ ಬಿಜೆಪಿ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. 2020ರ ಬಿಹಾರ ಚುನಾವಣೆಗೆ ಮುನ್ನ ಎನ್​ಡಿಎ ಮೈತ್ರಿ ತೊರೆದಿದ್ದ ಎಲ್​ಜೆಪಿ, ನಂತರ ಪ್ರತ್ಯೇಕವಾಗಿ ಸ್ಪಧಿರ್ಸಿ, ಹೀನಾಯ ಸೋಲು ಕಂಡಿತ್ತು. ಆದರೆ, ಮತಗಳನ್ನು ವಿಭಜಿಸಿ ಜೆಡಿಯು ಸೀಟುಗಳನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿತ್ತು. ಇದು ನಿತೀಶ್​ ಕೆಂಗಣ್ಣಿಗೆ ಗುರಿಯಾಗಿತ್ತು.
ಗುಜರಾತ್​ ಚುನಾವಣೆಯಲ್ಲಿ ಆಪ್​ ಸ್ಪರ್ಧೆಗುಜರಾತ್​ನ 2022ರ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಕೂಡ ಸ್ಪಧಿರ್ಸಲಿದೆ ಎಂದು ಪಕ್ಷದ ನಾಯಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ. ಸೂರತ್​ ಪಾಲಿಕೆ ಚುನಾವಣೆಯಲ್ಲಿ 27 (ಒಟ್ಟು 120) ಸೀಟುಗಳನ್ನು ಗೆದ್ದ ಬಳಿಕ ಎರಡನೇ ಬಾರಿಗೆ ಗುಜರಾತ್​ಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನಾವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯಥಿರ್ಗಳನ್ನು ಹಾಕಲಿದ್ದೇವೆ. ಕಳೆದ 27 ವರ್ಷಗಳಿಂದ ಬಿಜೆಪಿ ಇಲ್ಲಿ ಆಡಳಿತ ನಡೆಸುತ್ತಿದ್ದು, ಇದನ್ನು ಆಮ್​ ಆದ್ಮಿ ಪಕ್ಷ ತಡೆಯಲಿದೆ’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ನಮ್ಮದೇರಾಜ್ಯದಲ್ಲಿ ಸಿಎಂ ಹುದ್ದೆ ಹಂಚಿಕೆ ಪ್ರಶ್ನೆಯೇ ಇಲ್ಲ. 5 ವರ್ಷವೂ ಶಿವಸೇನೆ ಮುಖಂಡ ಉದ್ಧವ್​ ಠಾಕ್ರೆಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್​ ರಾವತ್​ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಅವರು, ಸಿಎಂ ಹುದ್ದೆಯನ್ನು ಮಿತ್ರಪಕ್ಷಗಳೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ. ಎರಡೂವರೆ ವರ್ಷದ ಬಳಿಕ ಸಿಎಂ ಹುದ್ದೆಗಾಗಿ ಎನ್​ಸಿಪಿ ಮುಖಂಡರು ಬೇಡಿಕೆ ಮುಂದಿರಿಸಲಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿ ವಿವಾದವೆಬ್ಬಿಸಿ ಹೊಸ ರಾಜಕೀಯ ಸಮೀಕರಣ ಸೃಷ್ಟಿಸುವುದು ಬಿಜೆಪಿ ಉದ್ದೇಶ. ಆದರೆ ಇದೆಲ್ಲ ಸಾಧ್ಯವಿಲ್ಲ ಎಂದು ರಾವತ್​ ಹೇಳಿದ್ದಾರೆ.
ಟಿಆರ್​ಎಸ್​ ಮುಖಂಡ ಬಿಜೆಪಿಗೆತೆಲಂಗಾಣದ ಟಿಆರ್​ಎಸ್​ ಸರ್ಕಾರದ ಮಾಜಿ ಆರೋಗ್ಯ ಸಚಿವ ಈಟೆಲಾ ರಾಜೇಂದ್ರ ಕೇಂದ್ರ ಸಚಿವರಾದ ಧಮೇರ್ಂದ್ರ ಪ್ರಧಾನ್​ ಮತ್ತು ಕಿಶನ್​ ರೆಡ್ಡಿ ಸಮ್ಮುಖದಲ್ಲಿ ನವದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೇದಕ್​ ಜಿಲ್ಲೆಯಲ್ಲಿ ಭೂ ಅತಿಕ್ರಮ ಮಾಡಿದ ಆರೋಪದಡಿಯಲ್ಲಿ ರಾಜೇಂದ್ರರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಆರೋಪವನ್ನು ರಾಜೇಂದ್ರ ತಳ್ಳಿ ಹಾಕಿದ್ದರು.ಒಪಿಎಸ್​ಗೆ ಹುದ್ದೆಎಐಎಡಿಎಂಕೆ ಮುಖಂಡ ಪನೀರ್​ಸೆಲ್ವಂ ಅವರನ್ನು ವಿರೋಧ ಪಕ್ಷದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಸಚಿವ ಎಸ್​.ಪಿ. ವೇಲುಮಣಿಯನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ಬಿಜೆಪಿ ಎಚ್ಚರಿಕೆಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸೋತ ಬಳಿಕ ಟಿಎಂಸಿ ಪಕ್ಷಕ್ಕೆ ವಾಪಸಾಗಲು ಅನೇಕರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​, ಕೇವಲ ಅಧಿಕಾರ ಅನುಭವಿಸುವುದಕ್ಕಾಗಿ ಪಕ್ಷದಲ್ಲಿರುವುದು ಅಥವಾ ಪಕ್ಷಕ್ಕೆ ಸೇರುವ ಅಗತ್ಯವಿಲ್ಲ. ರಕ್ತ ಹಾಗೂ ಬೆವರು ಸುರಿಸಿ ಹೋರಾಡುವ ವ್ಯಕ್ತಿಗಳನ್ನು ಮಾತ್ರ ಪಕ್ಷ ಅವಲಂಬಿಸಿದೆಯೇ ವಿನಾ ಅಧಿಕಾರಕ್ಕಾಗಿ ಹಪಹಪಿಸುವವರನ್ನಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಬಿಜೆಪಿ ಸೇರಿದ್ದ ಮುಕುಲ್​ ರಾಯ್​, ಟಿಎಂಸಿಗೆ ವಾಪಸ್​ ಸೇರಿರುವ ಹಿನ್ನೆಲೆಯಲ್ಲಿ ಘೋಷ್​ ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
