ಹೈದರಾಬಾದ್:ಆಂಧ್ರಪ್ರದೇಶದಲ್ಲಿ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಹಣಬಲದಿಂದ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದರೇ ಆರೋಪಿಸಿದ್ದಾರೆ.
ಇದನ್ನೂ ಓದಿ:ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!
ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಮತಾಂತರ ನಡೆಯುತ್ತಿರುವುದು ಸತ್ಯ, ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ಸರ್ಕಾರ ಬರುವುದಕ್ಕೆ ಮುಂಚೆಯೂ ಇಲ್ಲಿ ಮತಾಂತರ ನಡೆಯುತ್ತಿತ್ತು. ಈಗಲೂ ಮಿಷನರಿಗಳು ರಾತ್ರಿ ವೇಳೆಯಲ್ಲಿ ಕಾಲೋನಿಗಳಿಗೆ ಹೋಗಿ ಅಲ್ಲಿನ ಜನರಿಗೆ ತಮ್ಮ ಧರ್ಮಬೋಧನೆ ಮಾಡಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಟಿವಿ ಚರ್ಚೆಯಲ್ಲಿ ಸಂಸದ ರಘು ರಾಮಕೃಷ್ಣ ರಾಜು ಅವರು ಹೇಳಿದರು.
ಕ್ರಿಶ್ಚಿಯನ್ ಧರ್ಮಗುರುಗಳು ವಿದೇಶಗಳಿಂದ ಬರುವ ಅಪಾರ ಹಣದಿಂದ ಜನರನ್ನು ಮತಾಂತರಗೊಳಿಸುತ್ತಿದ್ದಾರೆ. ಆದರೆ ಮತಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ
ಹಾಗಿದ್ದರೆ ಅಕ್ರಮ ಮತಾಂತರಗಳ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ಇದಕ್ಕೆ ನಮ್ಮ ಸರ್ಕಾರ ಏನು ಮಾಡಬೇಕು? ಬೇರೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮತಾಂತರಗಳು ನಡೆಯುತ್ತಿಲ್ಲವೆ ಎಂದು ಮರು ಪ್ರಶ್ನಿಸಿದರು.
ಲಾಕ್​ಡೌನ್​ನಿಂದ ಝೆರಾಕ್ಸ್ ಅಂಗಡಿ ತೆರೆಯದಿದ್ರೂ ಬಂತು ಭಾರಿ ಮೊತ್ತದ ವಿದ್ಯುತ್​ ಬಿಲ್: ಮಾಲೀಕ ಕಂಗಾಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
