ಚೆನ್ನೈ:ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈನ ಅಮೆರಿಕ ದೂತಾವಾಸದ ಮುಖ್ಯಸ್ಥರಾಗಿ (ಕಾನ್ಸಲ್ ಜನರಲ್) 2023 ಜುಲೈ31ರಂದು ಅಧಿಕಾರ ವಹಿಸಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾನ್ಸಲ್ ಜನರಲ್ ಹಾಡ್ಜಸ್ ಅವರು, “ಅಮೆರಿಕ-ಭಾರತದ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಣ ಶ್ರೀಮಂತ ವಾಣಿಜ್ಯ ಮತ್ತು ಶೈಕ್ಷಣಿಕ ಸಂಬಂಧಗಳು ಮತ್ತು ಬಾಹ್ಯಾಕಾಶ ವಲಯವೂ ಸೇರಿದಂತೆ ದ್ವಿಪಕ್ಷೀಯ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ. ನಮ್ಮ ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರ ತರುವ ವಿಷಯಗಳಾದ ಅಮೆರಿಕದ ಪೌರರಿಗೆ ಬೆಂಬಲ ನೀಡುವುದು ಹಾಗೂ ಕಾನ್ಸಲರ್‌ ಸೇವೆಗಳನ್ನು ಒದಗಿಸುವುದಕ್ಕೆ ಹೆಮ್ಮೆಯಿದೆ.” ಎಂದಿದ್ದಾರೆ.
“ಅಮೆರಿಕ- ಭಾರತದ ಸಂಬಂಧವು ಎರಡು ಸರ್ಕಾರಗಳ ನಡುವೆ ಮಾತ್ರವಲ್ಲ, ಉಭಯ ದೇಶಗಳ ಜನರ ನಡುವಿನ ಸಂಬಂಧ ಎಂಬುದನ್ನು ನಮ್ಮ ಪ್ರಯತ್ನಗಳು ಎತ್ತಿ ತೋರುತ್ತವೆ. ನಮ್ಮ ಪ್ರಾಂತ್ಯದಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ, ಲಕ್ಷದ್ವೀಪ ಮತ್ತು ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ,” ಎಂದು ಕಾನ್ಸಲ್‌ ಜನರಲ್‌ ಹೇಳಿದರು.
ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ಕಾನ್ಸಲ್‌ ಜನರಲ್‌ ಆಗಿ ಅಧಿಕಾರವಹಿಸಿಕೊಳ್ಳುವ ಮುನ್ನ, ಹಾಡ್ಜಸ್‌ ಅವರು ಕೋಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್(ಕೇರ್) ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು. ಅದಕ್ಕೂ ಮುನ್ನ ಬ್ಯೂರೋ ಫಾರ್ ನಿಯರ್ ಈಸ್ಟ್ರನ್ ಅಫೇರ್ಸ್ ನಲ್ಲಿ ಅಸಿಸ್ಟೆನ್ಸ್ ಕೋಆರ್ಡಿನೇಷನ್ ಅಂಡ್ ಪ್ರೆಸ್ ಅಂಡ್ ಪಬ್ಲಿಕ್ ಡಿಪ್ಲೊಮಸಿ ವಿಭಾಗದ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಹಾಗೂ ಇಸ್ರೇಲಿ-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕಡೆಯದಾಗಿ ವಿದೇಶದಲ್ಲಿ ಕಾರ್ಯನಿರ್ವಹಿಸಿದ್ದು ಜೆರೂಸಲೇಂನ ರಾಯಭಾರ ಕಚೇರಿಯಲ್ಲಿ ಅಸಿಸ್ಟೆಂಟ್ ಡೆಪ್ಯುಟಿ ಛೀಫ್ ಆಫ್ ಮಿಷನ್ ಮತ್ತು ಛೀಫ್ ಆಫ್ ದಿ ಪ್ಯಾಲೆಸ್ತೇನಿಯನ್ ಅಫೇರ್ಸ್ ಯೂನಿಟ್ ನಲ್ಲಿ.
ಹಾಡ್ಜಸ್‌ಅವರು 2000ರಲ್ಲಿ ವಿದೇಶಾಂಗ ಸೇವೆಗೆ ಸೇರಿಕೊಂಡರು. ಅವರುಜೆರೂಸಲೇಂ, ಹನೊಯ್, ವಿಯೆಟ್ನಾಂ, ಮತ್ತು ಅಕ್ಕ್ರಾ, ಘಾನಾದಲ್ಲಿ ಪಬ್ಲಿಕ್ ಅಫೇರ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಅಲ್ಲದೆ ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ ಲೆಂಡ್ ಮತ್ತು ಲಿಷೆನ್ ಸ್ಟೀನ್ ಗಳಲ್ಲಿ ಆಫೀಸ್ ಆಫ್ ದಿ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ದುಡಿದಿದ್ದಾರೆ. ಸುವಾ, ಫಿಜಿ ಮತ್ತು ಫ್ರಾಂಕ್ ಫರ್ಟ್, ಜರ್ಮನಿಗಳಲ್ಲೂ ಕೆಲಸ ಮಾಡಿದ್ದಾರೆ.
ಶ್ರೀಲಂಕಾದ 13ನೇ ತಿದ್ದುಪಡಿ; ಅನುಷ್ಠಾನಕ್ಕೆ ಭಾರತದ ಒತ್ತಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
