ಅಹಮದಾಬಾದ್:7 ದಶಕಗಳಿಗೂ ಹೆಚ್ಚು ಕಾಲ ಅನ್ನ ನೀರಿಲ್ಲದೆ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಯೋಗಿ ಪ್ರಲ್ಹಾದ್ ಜಾನಿ (90) ಅಲಿಯಾಸ್ ಚುನರಿವಾಲಾ ಮಾತಾಜಿ ಗುಜರಾತದ ಗಾಂಧಿನಗರ ಜಿಲ್ಲೆಯಲ್ಲಿ ಮಂಗಳವಾರ ನಿಧನರಾಗಿರುವುದಾಗಿ ಅವರ ಶಿಷ್ಯರು ತಿಳಿಸಿದ್ದಾರೆ.ಆಹಾರವಿಲ್ಲದಿದ್ದರೆ ಅಬ್ಬಬ್ಬಾ ಅಂದರೆ ಮೂರ್ನಾಲ್ಕು ದಿನ ಬದುಕಬಹುದು. ನೀರಿಲ್ಲದೆ ಒಂದರ್ಧ ದಿನವೂ ಬದುಕಿರಲ್ಲಿ ಸಾಧ್ಯವಿಲ್ಲ. ಆದರೆ ಒಬ್ಬ ವ್ಯಕ್ತಿ 7 ದಶಕಕ್ಕೂ ಹೆಚ್ಚು ಕಾಲ ಅನ್ನ ನೀರಿಲ್ಲದೆ ಬದುಕುಳಿದ್ದರು ಎಂದರೆ ನಂಬಲಸಾಧ್ಯವಾದರೂ ಇದು ನಿಜ. ಅವರ ಮೇಲೆ ಈಗಾಗಲೇ ವೈದ್ಯಕೀಯ ತಪಾಸಣೆಗಳೂ ನಡೆದಿದ್ದು, ಅವರು ವೈಜ್ಞಾನಿಕ ಲೋಕಕ್ಕೆ ಸವಾಲಾಗಿದ್ದಾರೆ.
ಇದನ್ನೂ ಓದಿ:ಅನ್ನ, ನೀರಿಲ್ಲದೇ ಸುಮಾರು 76 ವರ್ಷ ಬದುಕಿದ್ದ ನಿಗೂಢ ಯೋಗಿ ನಿಧನ
ಅತೀಂದ್ರಿಯ ಶಕ್ತಿ ಸಂಪಾದಿಸಿದ್ದರೆನ್ನಲಾದ ಇವರು ಚುನ್ರಿವಾಲಾ ಮಾತಾಜಿ ಎಂದೇ ಜನಪ್ರಿಯವಾಗಿದ್ದು, ಗುಜರಾತದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದರು. ಅಂಬಾ ದೇವಿ ತಮ್ಮನ್ನು ರಕ್ಷಿಸುತ್ತಿದ್ದು, ತಮಗೆ ಬದುಕಲು ನೀರು ಆಹಾರದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿದ್ದರಂತೆ.1929ರ ಆಗಸ್ಟ್ 13ರಂದು ರಾಜಸ್ಥಾನದ ಮೆಹ್ಸಾನಾ ಜಿಲ್ಲೆಯ ಚರಾಡಾದಲ್ಲಿ ಜನಿಸಿದ ಇವರು ಏಳನೇ ವಯಸ್ಸಿನಲ್ಲೇ ಮನೆ ಬಿಟ್ಟು ಬಂದರಂತೆ.ಅಂಬಾ ದೇವಿಯ ಧರ್ಮನಿಷ್ಠರಾಗಿದ್ದ ಇವರು ಆಧ್ಯಾತ್ಮಿಕ ಅನುಭವ ಸಂಪಾದಿಸಲು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೊರಬಂದು ಅಂಬಾಜಿ ದೇವಸ್ಥಾನದ ಬಳಿ ಒಂದು ಸಣ್ಣ ಗುಹೆಯನ್ನು ನಿರ್ಮಿಸಿ ಅಲ್ಲಿ ವಾಸಿಸುತ್ತಿದ್ದರು.ಅಂಬಾ ಭವಾನಿಯಂತೆ ತಾವೂ ಕೂಡ ಕೆಂಪು ಸೀರೆ, ಹೂ, ಒಡವೆ ಧರಿಸುತ್ತಿದ್ದರಿಂದ ಅವರು ಮಾತಾಜಿ ಎಂದೇ ಪ್ರಸಿದ್ಧರಾದರು.
ಇದನ್ನೂ ಓದಿ:ಕೋವಿಡ್-19 ನಂತರದ ವಿಮಾನಯಾನ ಹೀಗಿತ್ತು ನೋಡಿ….!
ಪ್ರತಿದಿನ ಬೆಳಗ್ಗೆ 4 ಗಂಟೆಗೇ ಏಳುತ್ತಿದ್ದ ಮಾತಾಜಿ ಬಹಳಷ್ಟು ಸಮಯವನ್ನು ಧ್ಯಾನ, ಪೂಜೆಗಳಲ್ಲಿಯೇ ಕಳೆಯುತ್ತಿದ್ದರು. ಅವರು ತಿನ್ನದಿದ್ದರೂ, ಕುಡಿಯದಿದ್ದರೂ ಅಂಬಾ ಭವಾನಿ ತಾಯಿಯೇ ಅವರ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತಿದ್ದುದ್ದಾಗಿ ಹೇಳುತ್ತಿದ್ದರು ಜಾನಿ.ಆಹಾರ ಅಥವಾ ನೀರಿಲ್ಲದೆ ಅವರು ಬದುಕುತ್ತಿರುವ ಸಂಗತಿ ತೀವ್ರ ಕುತೂಹಲ ಕೆರಳಿಸಿತ್ತು. ವಿಜ್ಞಾನಿಗಳು ಅವರನ್ನು 2003 ಮತ್ತು 2010 ರಲ್ಲಿ ಪರೀಕ್ಷಿಸಿದ್ದರು.2010ರಲ್ಲಿ ಡಿಆರ್​ಡಿಒ ವ್ಯಾಪ್ತಿಯಲ್ಲಿರುವ ಡಿಐಪಿಎಎಸ್ ಸಂಸ್ಥೆಯ ವಿಜ್ಞಾನಿಗಳು ಮತ್ತು ವೈದ್ಯರು ಹದಿನೈದು ದಿನಗಳ ಕಾಲ ವೀಕ್ಷಣಾ ಅಧ್ಯಯನವನ್ನು ನಡೆಸಿದರು. ಆಹಾರ ಅಥವಾ ನೀರಿಲ್ಲದೆ ಬದುಕುಳಿದಿರುವ  ಜಾನಿ ಅವರು ಹಸಿವು ಮತ್ತು ಬಾಯಾರಿಕೆಯನ್ನು ನಿರ್ಬಂದಿಸುವ ಕಠಿಣ ಅಭ್ಯಾಸ ಮಾಡಿಕೊಂಡಿದ್ದು, ಅದೇ ಅವರಿಗೆ ಸಹಜ ಅಭ್ಯಾಸವಾಗಿ ಮುಂದುವರೆದಿದೆ ಎಂದು ವೈದ್ಯರು ಹೇಳಿದ್ದರು. ಆಸ್ಟ್ರಿಯಾ, ಜರ್ಮನಿ, ಇಟಲಿಯಲ್ಲೂ ಕೂಡ ಇವರ ಅತಿಂದ್ರಿಯ ಶಕ್ತಿ ಕುರಿತು ಸುದ್ದಿ ಪ್ರಸಾರಗೊಂಡಿದ್ದವು.  ಆದರೆ ವೈದ್ಯರಾಗಲಿ, ವಿಜ್ಞಾನಿಗಳಾಗಲಿ ಇಂದಿಗೂ ಯೋಗಿ ಜಾನಿಯ ಜೀವನ ಶೈಲಿಯ ಬಗ್ಗೆ ನಿಖರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಿಲ್ಲ.
ವಲಸೆ ಕಾರ್ಮಿಕರಿಗೆ ಸಿಕ್ತು ನೆರವು; ಸೋನು ಸೂದ್​ಗೆ ಬಂತು ಪ್ರಶಂಸೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
