ಅಹ್ಮದಾಬಾದ್​:ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಭಾರತದಿಂದ ಕಳೆದವರ್ಷವೇ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ ಆತ ಕೆರಿಬಿಯನ್​ ಸಮುದ್ರದ ಬಳಿ ‘ಕೈಲಾಸ’ವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾದವನಾದ ನಿತ್ಯಾನಂದನ ಬಂಧನಕ್ಕೆ ಅಹ್ಮದಾಬಾದ್​ ಪೊಲೀಸರೂ ಪ್ರಯತ್ನ ಮಾಡುತ್ತಿದ್ದಾರೆ.
ಹಾಗೇ ಈ ವರ್ಷದ ಜನವರಿಯಲ್ಲಿ ನಿತ್ಯಾನಂದನ ಗುಜರಾತ್​​ನಲ್ಲಿರುವ ಆಶ್ರಮದಿಂದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದರು. ಅವರಿಬ್ಬರೂ ಆಶ್ರಮದಿಂದ ಹೋಗಿದ್ದೆಲ್ಲಿಗೆ ಎಂಬುದೇ ಗೊತ್ತಾಗಿರಲಿಲ್ಲ. ಆದರೆ ಇದೀಗ ಮೂಲಗಳ ಪ್ರಕಾರ ಯುವತಿಯರಿಬ್ಬರೂ ನಿತ್ಯಾನಂದನ ಕೈಲಾಸ ಸೇರಿಕೊಂಡು, ಅಲ್ಲಿ ಚಟ್ನಿ ಸಂಗೀತ (Chutney Music)ವನ್ನು ಅಭ್ಯಾಸ ಮಾಡುತ್ತಿದ್ದಾರಂತೆ.
Chutney Music ಎಂಬುದು ಇಂಡೋ-ಕೆರಿಬಿಯನ್​ ಪ್ರಕಾರದ ಒಂದು ಸಂಗೀತ. ದಕ್ಷಿಣ ಕೆರೆಬಿಯನ್​ನಲ್ಲಿ ಚಾಲ್ತಿಯಲ್ಲಿದ್ದು, ಟ್ರೆನಿಡಾಡ್​, ಗಯಾನಾ ಸೇರಿ ಹಲವು ಕಡೆ ಜನಪ್ರಿಯ ಸಂಗೀತವಾಗಿದೆ. ಭೋಜಪುರಿ ಮತ್ತು ಕೆರಿಬಿಯನ್​ ಶೈಲಿಯ ರಾಗಗಳ ಸಂಯೋಜನೆಯಿಂದ ಹೊರಹೊಮ್ಮಿದ ಚಟ್ನಿ ಸಂಗೀತ ಮೊದಲು ಬೆಳಕಿಗೆ ಬಂದಿದ್ದು 20ನೇ ಶತಮಾನದಲ್ಲಿ.ಇದನ್ನೂ ಓದಿ:ದೇಶದೊಳಗಿನ ಉಗ್ರರು ಇವರು..ಅಪ್ಪ-ಅಮ್ಮನ ಎದುರೇ ಪೊಲೀಸ್​ ಪೇದೆಯನ್ನು ಬರ್ಬರವಾಗಿ ಕೊಂದರು…
ಇದೀಗ ನಿತ್ಯಾನಂದನ ಗುಜರಾತ್​ನ ಆಶ್ರಮದಿಂದ ಪರಾರಿಯಾದ ಯುವತಿಯರು ಆತನ ಕೆರಿಬಿಯನ್​ ಕೈಲಾಸ ಸೇರಿಕೊಂಡು ಇದೇ ಚಟ್ನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆಂದು ಅಹ್ಮದ್​ಬಾದ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಮಾಧ್ಯಮವೊಂದು ವರದಿ ಮಾಡಿದೆ.
ಯುವತಿಯರಿಬ್ಬರೂ ಅಕ್ಕ-ತಂಗಿ. 2015ರಿಂದ ಅಹ್ಮದಾಬಾದ್​ನಲ್ಲಿರುವ ನಿತ್ಯಾನಂದನ ಆಶ್ರಮದಲ್ಲಿ ವಾಸವಾಗಿದ್ದರು. ಅವನೊಟ್ಟಿಗೆ ಅನೇಕ ದೇಶಗಳಿಗೂ ಹೋಗಿ ಬಂದಿದ್ದರು.  ಕೆರಿಬಿಯನ್​ಲ್ಲಿರುವ ಕೈಲಾಸ ಎಂಬಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ ಈ ಇಬ್ಬರೂ ಯುವತಿಯರು ನೃತ್ಯ ಪ್ರದರ್ಶನ ಮಾಡುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್​ ಅಧಿಕಾರಿಯೋರ್ವರೇ ಹೇಳಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ:ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ
ನಿತ್ಯಾನಂದನ ಬಂಧನಕ್ಕೆ ಇಂಟರ್​ಪೋಲ್​ ಇನ್ನೂ ರೆಡ್​ ಕಾರ್ನರ್​ ನೋಟಿಸ್ ಕೊಟ್ಟಿಲ್ಲ. ಇದೀಗ ಆ ಇಬ್ಬರು ಹುಡುಗಿಯರನ್ನೂ ಕರೆತರಲು ಕೆಲವು ನಿಯಮಗಳು ಅಡ್ಡಿಯಾಗುತ್ತವೆ ಎಂದಿದ್ದಾರೆ.ನಿತ್ಯಾನಂದನ ಆಶ್ರಮದಲ್ಲಿದ್ದ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ದೂರು ದಾಖಲಿಸಿದ್ದರು. (ಎಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
