ಕೊಚ್ಚಿ:ಕೇರಳ ಪೊಲೀಸ್​ ಇಲಾಖೆ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಗ್ಯಾಂಗ್​ರೇಪ್​ ಪ್ರಕರಣದಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಕೊಯಿಕ್ಕೋಡ್​ ಕರಾವಳಿಯ ಇನ್ಸ್​ಪೆಕ್ಟರ್​ ಪಿ.ಆರ್​. ಸುನು ಅವರನ್ನು ಥ್ರಿಕಾಕ್ಕರ ಪೊಲೀಸರು ಬಂಧಿಸಿದ್ದಾರೆ.
ಥ್ರಿಕಾಕ್ಕರ ಮತ್ತು ಕಡವಂತ್ರಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ ಬಳಿಕ ಆರೋಪಿ ಇನ್ಸ್​ಪೆಕ್ಟರ್​ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿದ್ದಾರೆ. ಸಂತ್ರಸ್ತೆಯ ಮನೆಗೆಲಸದಾಕೆ ವಿಜಯಲಕ್ಷ್ಮೀ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾಳೆ.
ಸಂತ್ರಸ್ತ ಮಹಿಳೆಯು ಮಾಜಿ ಸೈನಿಕನಾಗಿದ್ದು, ಸೇನೆಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹಣದ ವಂಚನೆ ಮಾಡಿರುವ ಆರೋಪದಡಿಯಲ್ಲಿ ಜೈಲು ಸೇರಿದ್ದಾನೆ. ಗಂಡನ ಸ್ನೇಹಿತನು ಕೂಡ ಗ್ಯಾಂಗ್​ರೇಪ್​ನ ಪ್ರಮುಖ ಆರೋಪಿಯಾಗಿದ್ದಾನೆ. ಇನ್ಸ್​ಪೆಕ್ಟರ್​ ಸುನು ಈ ಪ್ರಕರಣ 3ನೇ ಆರೋಪಿಯಾಗಿದ್ದಾನೆ. ಕಳೆದ ಮೇ ತಿಂಗಳಿಂದ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಸಂತ್ರಸ್ತೆ ದೂರಿದ್ದಾಳೆ. ಗಂಡನನ್ನು ಜೈಲಿನಿಂದ ಬಿಡುಗಡೆ ಮಾಡುವಾಗಿ ಭರವಸೆ ನೀಡಿ, ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದಾಳೆ.
ಜೀವಕ್ಕೆ ಅಪಾಯವಿರುವ ಕಾರಣದಿಂದಾಗಿ ದೂರು ದಾಖಲಿಸುವುದು ವಿಳಂಬವಾಯಿತು. ಅಲ್ಲದೆ, ಒಂದು ವೇಳೆ ದೂರು ದಾಖಲಿಸಿದರೆ, ಜೈಲಿನಲ್ಲಿರುವ ಗಂಡನಿಗೆ ಮತ್ತಷ್ಟು ಹಿಂಸೆ ಕೊಡಬಹುದು ಎಂಬ ಕಾರಣಕ್ಕೆ ದೂರು ದಾಖಲಿಸಲು ತಡವಾಯಿತು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ದೂರುದಾರೆ ಥ್ರಿಕಾಕ್ಕರದಲ್ಲಿ ವಾಸಿಸುತ್ತಿದ್ದಾಳೆ. ಅನೇಕ ಪ್ರದೇಶಗಳಲ್ಲಿ ಮಾತ್ರವಲ್ಲದೆ ಆಕೆಯ ಮನೆಯಲ್ಲೂ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾಳೆ.
ಇನ್ನು ಇನ್ಸ್​ಪೆಕ್ಟರ್​ ಸುನು ಕರಾಳ ಮುಖ ಮತ್ತಷ್ಟು ಬಯಲಾಗಿದೆ. ಜನರ ಸೇವೆ ಮಾಡುತ್ತೇನೆಂದು ಖಾಕಿ ತೊಟ್ಟಿರುವ ಸುನು, ಓರ್ವ ಗೋಮುಖ ವ್ಯಾಘ್ರ ಎಂಬುದು ಇದೀಗ ಬಯಲಾಗಿದೆ. ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಈ ಸುನು ಪ್ರಮುಖ ಆರೋಪಿಯಾಗಿದ್ದಾನೆ. ತ್ರಿಸ್ಸೂರ್​ನಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಈ ಬಂಧನವಾಗಿದ್ದ. ಮದುವೆಯಾಗುವುದಾಗಿ ನಂಬಿಸಿ ಇಂಜಿನಿಯರ್​ ಪದವೀಧರೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ.
ಸದ್ಯ ಇನ್ಸ್​ಪೆಕ್ಟರ್​ ಸುನು ವಿರುದ್ಧ ಪ್ರಕರಣ ದಾಖಲಾಗಿದ್ದು, ಜೈಲಿನಲ್ಲಿರುವ ಆತನ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
ಕಲ್ಲು ಕ್ವಾರಿ ಕುಸಿದು 8 ಕಾರ್ಮಿಕರು ದುರಂತ ಸಾವು: ಸುಳಿವೇ ಸಿಗದ ನಾಲ್ವರಿಗಾಗಿ ತೀವ್ರ ಶೋಧ

ಶೀಘ್ರದಲ್ಲೇ ಇ-ಕಾಮರ್ಸ್​ ದೈತ್ಯ ಕಂಪನಿ ಅಮೆಜಾನ್​ನಲ್ಲಿ 10 ಸಾವಿರ ಉದ್ಯೋಗ ಕಡಿತ! ಕಾರಣ ಹೀಗಿದೆ…

ಇಲ್ಲಿವೆ ಸ್ಯಾಂಡಲ್​ವುಡ್​ ನಟ-ನಟಿಯರ ಬಾಲ್ಯದ ಫೋಟೋಗಳು; ಇವರೆಲ್ಲಾ ಯಾರೆಂದು ಕಮೆಂಟ್ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 17 =
Remember me
