ನವದೆಹಲಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ, ಸಮಗ್ರ ಪುನಾರಚನೆ ಚರ್ಚೆಯ ಇನ್ನಷ್ಟು ಕುತೂಹಲಗಳು ಗರಿಗೆದರಿವೆ. ಮೂರ್ನಾಲ್ಕು ದಿನಗಳಲ್ಲಿ ಹೈಕಮಾಂಡ್ ತನ್ನ ತೀರ್ಮಾನ ತಿಳಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರೂ, ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅನಿವಾರ್ಯವಾದಲ್ಲಿ ಸಂಪುಟ ವಿಸ್ತರಣೆ/ಪುನಾರಚನೆ ದೂರದ ಮಾತೆಂದೇ ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅಮಿತ್ ಷಾ ಭೇಟಿ ನಂತರ ಏನಾದರೂ ಆಗಬಹುದೆಂಬ ಬೊಮ್ಮಾಯಿ ಅವರ ಹೇಳಿಕೆ ಬಿಜೆಪಿ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಈ ನಡುವೆ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಬಿಬಿಎಂಪಿ, ಸ್ಥಳೀಯ ಪಂಚಾಯತ್ ಚುನಾವಣೆಗಳನ್ನು ಮುಂದಿಟ್ಟುಕೊಂಡು ವಿಸ್ತರಣೆ ಅಥವಾ ಪುನಾರಚನೆ ನಡೆಸಿದಲ್ಲಿ ಆಗುವ ಸಾಧಕ/ಬಾಧಕಗಳ ಬಗ್ಗೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರರೊಂದಿಗೆ ರ್ಚಚಿಸಿ ತೀರ್ಮಾನ ಮಾಡೋಣ ಎಂದು ಷಾ ಅವರು ಹೇಳಿ ಕಳುಹಿಸಿದ್ದಾರೆಂದು ಗೊತ್ತಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಸಲು ಸಿಎಂ ಬೊಮ್ಮಾಯಿ ಕೂಡ ಉತ್ಸುಕರಾಗಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂಬ ಅನಿಸಿಕೆಯನ್ನು ತಮ್ಮ ಆಪ್ತರೊಂದಿಗೂ ಹಂಚಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಯಾರಿಗೇ ಅಧಿಕಾರ ನೀಡಿದರೂ, ಅದು ಮತ್ತೊಂದು ವರ್ಗದಲ್ಲಿ ಅಸಮಾಧಾನ ಸೃಷ್ಟಿಸಲಿದೆ. ಹೀಗಾಗಿ, ಯಥಾಸ್ಥಿತಿ ಕಾಯ್ದುಕೊಳ್ಳುವುದೇ ಬೊಮ್ಮಾಯಿ ಅಭಿಪ್ರಾಯವಾಗಿದೆ. ಆದರೆ, ಅಮಿತ್ ಷಾ ಮುಂದೆ ಅವರು ಇದೇ ಅಭಿಪ್ರಾಯ ಮುಂದಿಟ್ಟರೋ ಅಥವಾ ಇಲ್ಲವೋ ಎಂಬುದು ಸದ್ಯಕ್ಕೆ ನಿಗೂಢ.
ಕ್ಷೇತ್ರ ಮರುವಿಂಗಡಣೆ ನೆಪವೊಡ್ಡಿ ಚುನಾವಣೆಗಳನ್ನು ಮುಂದಕ್ಕೆ ಹಾಕುವುದನ್ನು ಒಪ್ಪಲಾಗದು ಎಂದು ಮಧ್ಯಪ್ರದೇಶದ ಕೇಸ್​ವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕಕ್ಕೆ ಅನ್ವಯವಾಗುತ್ತದೋ ಇಲ್ಲವೋ? ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜ್ಯಕ್ಕೆ ಹೇಗೆ ನೆರವಾಗಬಹುದು ಎಂಬ ಬಗ್ಗೆಯೂ ಸಿಎಂ ಅವರು ಷಾ ಅವರ ಅಭಿಪ್ರಾಯ ಕೇಳಿದ್ದಾರೆನ್ನಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಮಧ್ಯಪ್ರದೇಶ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಮತ್ತೆ ನ್ಯಾಯಾಂಗದ ಮುಂದೆ ವಿಚಾರಣೆಯಾಗಲಿದೆ. ಹೀಗಾಗಿ, ಸದ್ಯಕ್ಕೆ ರಾಜ್ಯ ಸರ್ಕಾರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲೂಬಹುದು. ಆದರೆ, ರಾಜ್ಯ ಚುನಾವಣಾ ಆಯೋಗ ತೆಗೆದುಕೊಳ್ಳಲಿರುವ ನಿಲುವು ಇಲ್ಲಿ ಮುಖ್ಯವಾಗಲಿದೆ ಎಂದು ಇಬ್ಬರೂ ನಾಯಕರು ರ್ಚಚಿಸಿದ್ದಾರೆ. ಈ ಕಾರಣಕ್ಕಾಗಿಯೇ, ವರಿಷ್ಠರು ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಸೇರಿ ಸಮಗ್ರ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ತೀರ್ಮಾನ ಮಾಡಬಹುದು ಎನ್ನಲಾಗಿದೆ.
ಸದ್ಯದ ಸನ್ನಿವೇಶದಲ್ಲಿ ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬಿಜೆಪಿ ನಾಯಕರಲ್ಲಿ ಯಾವುದೇ ಆಸಕ್ತಿಯಿಲ್ಲ. ಬೆಂಗಳೂರಿನಲ್ಲಿ ಕೆಲ ಶಾಸಕರ ಬಗ್ಗೆಯೂ ಸ್ಥಳೀಯ ಮಟ್ಟದಲ್ಲಿ ಭಾರೀ ಅಸಮಾಧಾನ ಸೃಷ್ಟಿಯಾಗಿರುವುದರಿಂದ ಕಾರ್ಪೆರೇಷನ್ ಚುನಾವಣೆಯಲ್ಲಿ ಪಕ್ಷದ ಮೇಲೆ ಅದು ದುಷ್ಪರಿಣಾಮ ಬೀರಲಿದೆ. ಹೀಗಾಗಿ, ಚುನಾವಣೆ ನಡೆಯದಂತೆ ನೋಡಿಕೊಳ್ಳಲು ಪಕ್ಷ ಪ್ರಯತ್ನಿಸಲಿದೆ ಎಂದು ಮುಖಂಡರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಪಟ್ಟಿ ಚರ್ಚೆಯಾಗಿಲ್ಲ:ಸಚಿವ ಸಂಪುಟ ವಿಸ್ತರಣೆ ತೀರ್ವನವಾದ ಮೇಲೆ ಅದರ ಸ್ವರೂಪ ಗೊತ್ತಾಗಲಿದೆ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರು ಚರ್ಚೆಯಾಗಿಲ್ಲ. ಹೆಸರುಗಳನ್ನು ತೀರ್ಮಾನ ಮಾಡುವ ಸಂದರ್ಭ ಬರಲಿಲ್ಲ. ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಗೆ ಬಂದಾಗಲೂ ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೆವು. ಅಮಿತ್ ಷಾ ಮತ್ತು ನಡ್ಡಾ ಸೇರಿ ಒಂದು ತೀರ್ಮಾನ ಮಾಡಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಮಧ್ಯಪ್ರದೇಶ ಕೇಸ್​ನಲ್ಲಿ ಸವೋಚ್ಛ ನ್ಯಾಯಾಲಯ ಕೊಟ್ಟ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ತನ್ನ ಕಾನೂನು ಸಲಹೆಗಾರರೊಂದಿಗೆ ಮಾತನಾಡುವುದಾಗಿ ತಿಳಿಸಿದೆ. ಆಯೋಗ ಸರ್ಕಾರಕ್ಕೆ ಏನು ತಿಳಿಸುತ್ತದೋ ಅಂತೆಯೇ ನಮ್ಮ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಯೂರಿಯಾ ಕೊರತೆ ಆಗದು:ಕರ್ನಾಟಕಕ್ಕೆ ಯೂರಿಯಾ ಮತ್ತು ಡಿಎಪಿ ಕೊರತೆಯಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸೂಕ್ ಮಾಂಡವೀಯ ಆಶ್ವಾಸನೆ ನೀಡಿದ್ದಾರೆ. ನಮಗೆ ಮುಂಗಾರಿನಲ್ಲಿ ಡಿಎಪಿ ಮತ್ತು ಯೂರಿಯಾ ಅಗತ್ಯವೂ ಇದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳಾಗುತ್ತವೆ. ಹಾಲಿ ಸ್ಥಿತಿ-ಗತಿಗಳನ್ನು ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಿಸಲಾಗಿದೆ. ಮುಂದಿನ ಒಂದು ವಾರ ಬಹಳ ಮುಖ್ಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ದೊಡ್ಡ ಪ್ರಮಾಣದ ಚುನಾವಣೆ ಇರುವುದರಿಂದ ಅದರ ಪರಿಣಾಮಗಳೇನು ಎಂದು ಅಧ್ಯಯನ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ.
|ಬಸವರಾಜ ಬೊಮ್ಮಾಯಿಸಿಎಂ
ಸಹಜವಾಗಿಲ್ಲದ ಭೇಟಿ:ಅಮಿತ್ ಷಾ, ಬೊಮ್ಮಾಯಿ ಭೇಟಿ ಸಹಜವಾಗಿರಲಿಲ್ಲವೆಂದು ಮೂಲಗಳು ಹೇಳುತ್ತವೆ. 10 ನಿಮಿಷವಷ್ಟೇ ಚರ್ಚೆ ನಡೆದಿದೆ. ನಾವು 2-3 ದಿನಗಳಲ್ಲಿ ಹೇಳುತ್ತೇವೆ ಎಂದಷ್ಟೇ ಷಾ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಯಾವಾಗ ಏನು ಬೇಕಾದರೂ ಆಗಬಹುದು:ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವಾಗ ಎನೂ ಬೇಕಾದರೂ ಆಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ರಾಜಕೀಯ ಸ್ಥಿತಿಗತಿ, ಸಚಿವ ಸಂಪುಟದ ಬಗ್ಗೆ ರ್ಚಚಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಸವೋಚ್ಚ ನ್ಯಾಯಾಲಯದ ಆದೇಶದ ಪರಿಣಾಮಗಳೇನು? ಚುನಾವಣಾ ಆಯೋಗದ ನಿರ್ಧಾರ ಸೇರಿ ಇವೆಲ್ಲವುಗಳ ಬಗ್ಗೆ ಹೈಕಮಾಂಡ್ ತನ್ನ ತೀರ್ಮಾನ ತಿಳಿಸಲಿದೆ. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೂ ರ್ಚಚಿಸಿ ಮುಂದಿನ 2-3 ದಿನಗಳಲ್ಲಿ ವರಿಷ್ಠರು ನಮಗೆ ಮಾಹಿತಿ ನೀಡಲಿದ್ದಾರೆ. ಮುಂಬರಲಿರುವ ರಾಜ್ಯಸಭಾ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ ಎಂದರು.
ಸ್ವಚ್ಛತಾ ಅಭಿಯಾನಕ್ಕೂ ಕೊಂಕು ನುಡಿದ ಪಂಚಾಯತ್ ಅಧ್ಯಕ್ಷ; ಲಾರಿ ಕಳಿಸೋಕೂ ಸಿದ್ಧ ಅಂದ ನಟ ಅನಿರುದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
