ಕೇರಳದ ಕೋಯಿಕ್ಕೋಡ್​​ನ ಕರಿಪ್ಪೂರ್​ ವಿಮಾನ ನಿಲ್ದಾಣದ ರನ್​ವೇದಲ್ಲಿ ಏರ್​ ಇಂಡಿಯಾ ವಿಮಾನ ಅಪಘಾತವಾಗಿ 18 ಮಂದಿ ಮೃತಪಟ್ಟಿದ್ದು, 140ಕ್ಕೂ ಅಧಿಕ ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ತೆರಳಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಸಿಬ್ಬಂದಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ಈ ಏರ್​ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರಲ್ಲಿ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ರಕ್ಷಣೆಗೆ ಹೋಗಿದ್ದ ಸಿಐಎಸ್​ಎಫ್​ ತಂಡದವರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಏರ್​ ಇಂಡಿಯಾ ವಿಮಾನ ಅಪಘಾತವಾದ ಬಳಿಕ ಅದರಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಸಿದ ಎಲ್ಲರೂ ಕ್ವಾರಂಟೈನ್​ಗೆ ಹೋಗಿ ಎಂದು ಕೇರಳ ಆರೋಗ್ಯ ಇಲಾಖೆಯೇ ಸೂಚಿಸಿತ್ತು. ಕರೊನಾ ವೈರಸ್​ ತಡೆಯಬೇಕೆಂದರೆ ಇದು ಅನಿವಾರ್ಯ ಎಂದು ಹೇಳಿತ್ತು.ಶುಕ್ರವಾರ ರಾತ್ರಿ ದುಬೈನಿಂದ ಬಂದ ವಿಮಾನ ರನ್​ವೇದಲ್ಲಿ ಜಾರಿ ಕಮರಿಗೆ ಬಿದ್ದು ಎರಡು ಹೋಳಾಗಿದೆ. ಈ ಅಪಘಾತದ ಸಂದರ್ಭದಲ್ಲಿ ಮೊದಲು ರಕ್ಷಣೆಗೆ ಧಾವಿಸಿದ್ದು ಸಿಐಎಸ್​ಎಫ್ ಸಿಬ್ಬಂದಿ.ಇದನ್ನೂ ಓದಿ:ಅಭಿಷೇಕ್​ ಬಚ್ಚನ್​ ಕೋವಿಡ್​ ವರದಿ ನೆಗೆಟಿವ್​; ಶೀಘ್ರದಲ್ಲಿ ಮನೆ ಸೇರಲಿದ್ದಾರೆ ಜೂ. ಬಚ್ಚನ್
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಸಿಸ್ಟೆಂಟ್​ ಸಬ್ ಇನ್ಸ್​ಪೆಕ್ಟರ್​ ಅಜಿತ್​ ಸಿಂಗ್​ ಅವರು ರನ್ ವೇ ಬಳಿಯೇ ಗಸ್ತು ತಿರುಗುತ್ತಿದ್ದರು.  35 ಅಡಿ ಆಳದ ಕಮರಿಗೆ ವಿಮಾನ ಬೀಳುತ್ತಿದ್ದಂತೆ ಸಿಐಎಸ್ಎಫ್​ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ವಿಮಾನದಲ್ಲಿದ್ದ ಒಂದಿಬ್ಬರಲ್ಲಿ ಕರೊನಾ ಇರುವುದು ನಂತರ ದೃಢಪಟ್ಟಿದೆ. ಹಾಗಾಗಿ ನಮ್ಮ ಸಿಬ್ಬಂದಿಯನ್ನು ನಾವು ಕ್ವಾರಂಟೈನ್​ ಆಗಲು ಸೂಚಿಸಿದ್ದೇವೆ ಎಂದು ಸಿಐಎಸ್ಎಫ್​ ಸ್ಪೆಶಲ್​ ಜನರಲ್​ ಎಂ.ಎ.ಗಣಪತಿ ತಿಳಿಸಿದ್ದಾರೆ.
ಈ ಏರ್​ಪೋರ್ಟ್​ ಇರುವ ಕೊಂಡೊಟ್ಟಿಯಲ್ಲಿ ಕರೊನಾ ಪ್ರಮಾಣ ಹೆಚ್ಚಾಗಿದೆ. ಇದನ್ನು ಕಂಟೇನ್​ಮೆಂಟ್​ ಝೋನ್​ ಎಂದು ಈಗಾಗಲೇ ಗುರುತಿಸಲಾಗಿದೆ. (ಏಜೆನ್ಸೀಸ್​)
ಏಳೇ ದಿನಕ್ಕೆ ತಿಂಗಳ ಕೋಟಾ ಮೀರಿದ ಮಹಾಮಳೆ; ನಲುಗಿದ ಮುಂಬೈ; ಇನ್ನೆರಡು ದಿನವೂ ಕಾದಿದೆ ಅಪಾಯ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 1 =
Remember me
