ಪಣಜಿ:ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಇಲ್ಲಿನ ನಾಗರಿಕರ ಗುಂಪೊಂದು 130 ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣ ಬಳಿದು ಅವು ವಾಹನ ಚಾಲಕರಿಗೆ ಕಾಣುವಂತೆ ಮಾಡಿವೆ.
ನಾಗರಿಕರ ಈ ಕೆಲಸವನ್ನು ಕೇಂದ್ರ ಸಚಿವ ನಿತಿನ್​ ಗಡ್ಕರಿ ಶ್ಲಾಘಿಸಿ ಟ್ವೀಟ್​ ಮಾಡಿದ್ದಾರೆ. ನಾಗರಿಕರ ಈ ಗುಂಪು ಈ ಕೆಲಸಕ್ಕಾಗಿ #RostoGoa ಎಂಬ ಅಭಿಯಾನವನ್ನು ಆರಂಭಿಸಿದೆ.
ಅಭಿಯಾನದ ಸಂಚಾಲಕಿ ಸೆಸಿಲ್ ರೊಡ್ರಿಗಸ್, “ಇಲ್ಲಿನ ರಸ್ತೆ ಉಬ್ಬುಗಳು ಕಪ್ಪಾಗಿ, ಕಾಣದಂತಾಗಿದ್ದವು. ಇದರಿಂದ ಅಪಘಾತಗಳಾಗುತ್ತಿದ್ದವು. ಈ ಅಭಿಯಾನವನ್ನು ನಾವು ತಾಲಿಗಾವೊ ಕ್ಷೇತ್ರದಿಂದ ಆರಂಭಿಸಿದ್ದೆವು. ಈಗ ಅಭಿಯಾನವನ್ನು ಸಾವಿರಾರು ಪ್ರವಾಸಿಗರು ಬರುವ ಕಲ್ಲಂಗೂಟ್ ಮತ್ತು ಬಾಗಾ ಪ್ರದೇಶಗಳಲ್ಲೂ ನಡೆಸಲಾಗಿದೆ” ಎಂದರು.
ಮೊದಲು ಕೆಲವೇ ಮಂದಿಗಳಿಂದ ಆರಂಭಿಸಿದ ಈ ಅಭಿಯಾನಕ್ಕೆ ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಸಮಾನ ಮನಸ್ಕರು ಬಂದು ಸೇರಿಕೊಂಡಿದ್ದಾರೆ. ಈ ಮೊದಲು ನಾನು ರಸ್ತೆ ಉಬ್ಬು ಕಾಣದಂತಾಗಿ ಅಪಘಾತಕ್ಕೆ ಈಡಾಗಿದ್ದೆ ಆಗಿನಿಂದ ಈ ಅಭಿಯಾನ ಆರಂಭಿಸಿದ್ದೇನೆ ಎಂದು ಮಾಹಿತಿ ನೀಡಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಅಭಿಯಾನದ ಬಗ್ಗೆ ಟ್ವೀಟ್​ ಮಾಡಿದ್ದು, ತಂಡದ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸೆಸಿಲ್ ರೊಡ್ರಿಗಸ್, ಸೀಮಾ ಚಿಮುಲ್ಕರ್​ ಮತ್ತು ಪ್ರಕಾಶ್​ ಮಳನಿ ಅವರ ಗುಂಪಿನ ಈ ಕಾರ್ಯವು ಉತ್ತಮವಾಗಿದೆ. ಇದರಿಂದ ವಾಹನ ಚಾಲಕರಿಗೆ ರಸ್ತೆ ಉಬ್ಬುಗಳು ಗೋಚರಿಸುತ್ತಲಿದ್ದು, ಅಪಘಾತಗಳು ಕಡಿಮೆಯಾಗಿವೆ ಎಂದು ಸಚಿವ ಗಡ್ಕರಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × five =
Remember me
