ಕೊಟ್ಟಾಯಂ:ಮದುವೆಯ ಮೂಲಕ ತಮ್ಮ ಶ್ರೀಮಂತಿಕೆ ಪ್ರದರ್ಶಿಸುವವರ ನಡುವೆ ಸರ್ಕಾರಿ ಅಧಿಕಾರಿಗಳಿಬ್ಬರು 20 ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡು ಸರಳವಾಗಿ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪ್​ ರ್ಯಾಂಕಿಂಗ್​ ಪಡೆದ ಆರ್ಯಾ ಆರ್​ ನಾಯರ್​ ಮತ್ತು ಅಹಮದಾಬಾದ್​ನ ಭಾರತೀಯ ಅಂಚೆ ಸೇವೆ (ಐಪಿಒಎಸ್​)ಯ ಸೂಪರಿಂಟೆಂಡೆಂಟ್​ ಆಗಿರುವ ಶಿವಂ ತ್ಯಾಗಿ ಸರಳ ವಿವಾಹವಾಗಿದ್ದಾರೆ.
ಪಂಪಾಡಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆಯಂತೆ ವಿವಾಹ ನೆರವೇರಿತು. ಆಡಂಬರದ ಮದುವೆಯನ್ನು ತಪ್ಪಿಸುವ ಮೂಲಕ, ಕೊಟ್ಟಾಯಂನ ವಝೂರ್‌ನಲ್ಲಿರುವ ಮಕ್ಕಳ ಮನೆ ‘ಪುಣ್ಯಂ’ನಲ್ಲಿ 20 ಮಕ್ಕಳ ಶೈಕ್ಷಣಿಕ ವೆಚ್ಚದ ಜವಾಬ್ದಾರಿ ತೆಗೆದುಕೊಳ್ಳಲು ನವದಂಪತಿ ಇದೇ ಸಂದರ್ಭದಲ್ಲಿ ನಿರ್ಧರಿಸಿದರು.
ಕೊಟ್ಟಾಯಂ ಮೂಲದ ಆರ್ಯಾ, ಪ್ರಸ್ತುತ ನಾಗಪುರದಲ್ಲಿ ಭಾರತೀಯ ಕಂದಾಯ ಸೇವೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಅವರು UPSC ನಾಗರಿಕ ಸೇವಾ ಪರೀಕ್ಷೆ-2020 ರಲ್ಲಿ 113 ನೇ ರ್ಯಾಂಕ್ ಗಳಿಸಿದ್ದಾರೆ. ಭಾರತೀಯ ಅಂಚೆ ಸೇವಾ ಸೂಪರಿಂಟೆಂಡೆಂಟ್ ಆಗಿರುವ ಶಿವಂ ತ್ಯಾಗಿ ದೆಹಲಿಯ ಮೂಲದವರು.(ಏಜೆನ್ಸೀಸ್​)
ಬಿಜೆಪಿಗೆ ಸೋಲುವ ಭಯ ಹೊಕ್ಕಿದೆ ಆದ್ದರಿಂದಲೇ ಮೋದಿ, ಷಾ ಕರೆಸುತ್ತಿದ್ದಾರೆ: ಸಿದ್ದರಾಮಯ್ಯ ತಿರುಗೇಟು

ಜ.2ರಂದು ಮದುವೆಯಾಗಿ ಒಂದು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ್ದ ಯೋಧ ಕಾಶ್ಮೀರದಲ್ಲಿ ನಿಧನ

ನವಾಜುದ್ದೀನ್​ ಸಿದ್ದಿಕಿ ಮೇಲೆ ಕಿರುಕುಳ ಆರೋಪ ಹೊರಿಸಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eleven =
Remember me
