ನವದೆಹಲಿ:ಒಂದೊಳ್ಳೆಯ ಸೂರು ಮತ್ತು ಕೆಲಸ ಅದೆಷ್ಟೋ ಜನರಿಗೆ ಗಗನ ಕುಸುಮ. ಆದರೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಎಲ್ಲವೂ ತಾನಾಗಿಯೇ ಒಲಿದುಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ನಾಗರೀಕ ಸೇವಕ ಸಾಕ್ಷಿಯಾಗಿದ್ದಾನೆ. ಸದ್ಯ ಇವರು ಟ್ವಿಟ್ಟರ್​ನಲ್ಲಿ ಹಾಕಿರುವ ಪೋಸ್ಟ್ ಮನಮುಟ್ಟುವಂತಿದೆ.
ಶಿಕ್ಷಣ ಜೀವನವನ್ನು ಬದಲಾಯಿಸುತ್ತದೆ.ಬಡತನದಿಂದ ಹೊರಬನ್ನಿ.ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಉತ್ತಮ ಬದುಕು ಸಿಗುತ್ತದೆ.ಒಂದು ಕಾಲದಲ್ಲಿ ತೆಂಗಿನ ತೋಟದಲ್ಲಿದ್ದ ಪುಟ್ಟ ಮನೆಯಲ್ಲಿ ವಾಸವಾಗಿ ಬಡತನದಲ್ಲಿದ್ದ ವ್ಯಕ್ತಿಯೊಬ್ಬರು ಈಗ ಎರಡು ಅಂತಸ್ತಿನ ಬಂಗಲೆಯಲ್ಲಿ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿ (OSD) ನೆಲ್ಲಯಪ್ಪನ್ ಬಿ. ಎನ್ನುವವರು ತಾವು ಹಿಂದೆ ವಾಸವಿದ್ದ ಗುಡಿಸಲು ಮತ್ತು ಇಂದು ವಾಸವಿರುವ ಬಂಗಲೆಯ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನಟಿ ಅಪರ್ಣಾ ಸಾವಿನ ಕೇಸ್​ಗೆ ಸ್ಫೋಟಕ ತಿರುವು: ನಾದಿನಿ ಜತೆ ಗಂಡನ ಅಕ್ರಮ ಸಂಬಂಧದ ರಹಸ್ಯ ಬಯಲು
“ನನಗೆ 30 ವರ್ಷಗಳಾಗುವ ತನಕ ಪಾಲಕರು ಮತ್ತು 4 ಸಹೊದರರ ಜತೆ ಒಂದೇ ಕೋಣೆಯಿರುವ ಸೋಗೆಯ ಮನೆಯಲ್ಲಿ ವಾಸವಾಗಿದ್ದೇನು. ಶಿಕ್ಷಣ, ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಸ್ಥಿತಿಗೆ ತಲುಪಿರುವುದು ಆಶೀರ್ವಾದ” ಎಂದು ಟ್ವೀಟ್ ಮಾಡಿ ತಾವು ಮೊದಲು ವಾಸವಿದ್ದ ಮನೆ ಹಾಗೂ ಈಗ ವಾಸ್ಥವ್ಯ ಹೂಡಿರುವ ಮನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
I lived in this single room thatched house (coconut leaf roof then) with my Parents & 4 Siblings till I was 30 years old.Blessed to reach today's position through Education, Dedication & Hard Work.pic.twitter.com/hLwFsmXaUl
— Nellayappan B (@nellayappan)September 6, 2023

ಈ ಟ್ವೀಟ್​ಗೆ ‘ನೀವು ತುಂಬಾ ಸ್ಪೂರ್ತಿದಾಯಕ.. ನಿಮ್ಮ ಮನೆ ತುಂಬಾ ಸುಂದರವಾಗಿದೆ’..’ಅಭಿನಂದನೆಗಳು.. ಇಂದು ನೋಡಿದ ಅತ್ಯುತ್ತಮ ಪೋಸ್ಟ್’ ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ. ಲಕ್ಷಗಟ್ಟಲೆ ಕಮೆಂಟ್ಸ್ ಬರುತ್ತಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಬಹಳ ವೈರಲ್ ಆಗುತ್ತಿದೆ.
ನಟಿ ಮಹಾಲಕ್ಷ್ಮಿ ಪತಿಗೆ ಸಂಕಷ್ಟ; 16 ಕೋಟಿ ರೂ. ವಂಚನೆ ಪ್ರಕರಣದಲ್ಲಿ ರವೀಂದರ್ ಚಂದ್ರಶೇಖರನ್ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
