ನವದೆಹಲಿ:ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್​ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ಕೋವಿಡ್ 19 ಕಾರಣಕ್ಕೆ ಮುಂದೂಡುವಂತೆ ಕೆಲವು ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಮುಂದೂಡಲ್ಪಡಬಹುದೇನೋ ಎಂಬ ಆಸೆ ಅನೇಕರಲ್ಲಿ ಇತ್ತು. ಆದರೆ, ಡೌಟೇ ಬೇಡ ಅಕ್ಟೋಬರ್ 4ಕ್ಕೇ ನಡೆಯಲಿದೆ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ.
ಸಿವಿಲ್ ಸರ್ವೀಶ್​ ಪರೀಕ್ಷಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಾದ ಎ.ಎಂ.ಖಾನ್​ವಿಲ್ಕರ್, ಬಿ.ಆರ್.ಗವಾಯಿ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ, ಪರೀಕ್ಷೆ ಮುಂದೂಡಲು ನಿರಾಕರಿಸಿತು. ಕೋವಿಡ್ 19, ಕೆಲವು ಕಡೆ ಪ್ರವಾಹ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗದು. ಈ ವರ್ಷದ ಪರೀಕ್ಷೆಯನ್ನು ಮುಂದಿನ ವರ್ಷದ ಪರೀಕ್ಷೆ ಜತೆಗೆ ಸೇರಿಸಿ ಮಾಡುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ:ಮಾಸ್ಕ್‌ ಧರಿಸದೇ ಇದ್ದರೆ 1000 ರೂ. ದಂಡ; ಗ್ರಾಮೀಣ ಭಾಗದಲ್ಲಿ 500 ರೂ. ಫೈನ್!
ಪರೀಕ್ಷೆ ನಡೆಸುವುದಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದೂಡಲಾಗದು ಎಂದು ನ್ಯಾಯಪೀಠಕ್ಕೆ ಕಳೆದ ವಿಚಾರಣೆ ವೇಳೆ ಯುಪಿಎಸ್​ಸಿ ಸ್ಪಷ್ಟಪಡಿಸಿತ್ತು. ಅದೇ ಸಂದರ್ಭದಲ್ಲಿ, ಯಾಕೆ ಪರೀಕ್ಷೆ ಮುಂದೂಡಲಾಗದು ಎಂಬುದಕ್ಕೆ ಸಕಾರಣಗಳ ಅಫಿಡವಿಟ್ ಸಲ್ಲಿಸುವುದಕ್ಕೆ ಯುಪಿಎಸ್​ಸಿಗೆ ನ್ಯಾಯಪೀಠ ಸೂಚಿಸಿತ್ತು. ಅದನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ ಈ ತೀರ್ಪು ನೀಡಿದೆ. (ಏಜೆನ್ಸೀಸ್)
ಕೋವಿಡ್ 19 ಕಾರಣಕ್ಕೆ ಸಿವಿಲ್ ಸರ್ವೀಸ್ ಎಕ್ಸಾಂ ಮುಂದೂಡಲಾಗದು: ಸುಪ್ರೀಂಗೆ ಯುಪಿಎಸ್​ಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
