ಚೆನ್ನೈ:ಪಾಯಸದ ವಿಚಾರಕ್ಕೆ ನಿಶ್ಚಿತಾರ್ಥ ಸಮಾರಂಭದಲ್ಲಿ ವಧು ಮತ್ತು ವರನ ಸಂಬಂಧಿಕರು ಕಿತ್ತಾಡಿಕೊಂಡಿರುವ ಘಟನೆ ತಮಿಳುನಾಡಿನ ಮೈಲಾಡುತೊರೈ ಜಿಲ್ಲೆಯ ಸಿರ್ಕಾಜಿಯಲ್ಲಿ ನಡೆದಿದೆ.
ಸಿರ್ಕಾಜಿಯ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ಬಳಿಕ ಸಂಬಂಧಿಕರು ಊಟಕ್ಕೆ ಕುಳಿತಿದ್ದರು. ಈ ವೇಳೆ ಅನ್ನ ತಿಂದು ಮುಗಿಸುವ ಮುನ್ನವೇ ಪಾಯಸ ಬಡಿಸಿದ್ದು, ವರನ ಸಂಬಂಧಿಕರಿಗೆ ಇಷ್ಟವಾಗಲಿಲ್ಲ. ಅಲ್ಲದೆ, ಪಾಯಸದ ರುಚಿ ಬಗ್ಗೆಯೂ ಅಸಮಾಧಾನವಿತ್ತು. ಈ ಬಗ್ಗೆ ವಧುವಿನ ಕಡೆಯವರನ್ನು ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು.
ಇದನ್ನೂ ಓದಿ:ಅಸೂಯೆಗೆ ಮೆಡಿಸಿನ್​ ಇಲ್ಲ: ಬಿಜೆಪಿ, ಜೆಡಿಎಸ್​ಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಟಾಂಗ್​
ವಾಗ್ವಾದದ ನಡುವೆ ತಾಳ್ಮೆ ಕಳೆದುಕೊಂಡ ವರನ ಸಂಬಂಧಿಕರು ಪಾಯಸವನ್ನು ವಧುವಿನ ಸಂಬಂಧಿಕರತ್ತ ಎರಚಿದರು. ಇದರಿಂದ ವಧುವಿನ ಕಡೆಯವರು ಆಕ್ರೋಶಗೊಂಡರು. ನಂತರ ಎರಡು ಕಡೆಯವರು ಕಲ್ಯಾಣ ಮಂಟಪದಲ್ಲೇ ಬಡಿದಾಡಿಕೊಂಡರು. ಊಟದ ಹಾಲ್​ನಲ್ಲಿದ್ದ ಪೀಠೋಪಕರಣಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.
ಗಲಾಟೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿರ್ಕಾಜಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಣ್ಣಗಾಗಿಸಿದರು. ಆದರೆ, ಗಲಾಟೆಗೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಗಲಾಟೆ ಸಂಬಂಧ ಯಾರೂ ದೂರು ನೀಡದೇ ಇರುವುದರಿಂದ ಯಾವುದೇ ದೂರು ದಾಖಲಾಗಿಲ್ಲ.(ಏಜೆನ್ಸೀಸ್​)
ಮಾಜಿ ಸಚಿವರ ಮನೆಯಲ್ಲೇ ರಾಜಾರೋಷವಾಗಿ ಕಳ್ಳತನ!

VIDEO| ಯುವತಿಯನ್ನು ಹೊತ್ತುಕೊಂಡು ಅಗ್ನಿಕುಂಡ ಸುತ್ತಿಸಿ ಬಲವಂತವಾಗಿ ಮದುವೆಯಾದ!

ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ಸರ್ಕಾರ? ಪ್ರೊ|ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಜತೆ ಸಿಎಂ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
