ನೋಯ್ದಾ:ಕುಟುಂಬ ಸದಸ್ಯರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಮಾರಾಮಾರಿ ನಡೆದ ಘಟನೆ ನೋಯ್ಡಾದ ಮಾಲ್​ನಲ್ಲಿ ನಡೆದಿದೆ.ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುಟುಂಬದ ಸದಸ್ಯರು ತಮ್ಮ ಬಿಲ್‌ನಿಂದ ಸೇವಾ ಶುಲ್ಕವನ್ನು ತೆಗೆದುಹಾಕುವಂತೆ ಸಿಬ್ಬಂದಿಗೆ ಮನವಿ ಮಾಡಿದ ನಂತರ, ರೆಸ್ಟೋರೆಂಟ್ ಸಿಬ್ಬಂದಿ ಇದನ್ನು ನಿರಾಕರಿಸಿದ್ದಾರೆ. ಇದು ಮಾತಿನ ಚಕಮಕಿಗೆ ಕಾರಣವಾಯಿತು. ಕೊನೆಗೆ ವಾದ ವಿವಾದವು ನಿಯಂತ್ರಣವನ್ನು ಕಳೆದುಕೊಂಡಿದ್ದು, ರೆಸ್ಟೋರೆಂಟ್ ಸಿಬ್ಬಂದಿ ಕುಟುಂಬದ ಸದಸ್ಯರನ್ನು ಮನಬಂದಂತೆ ಮೌಖಿಕವಾಗಿ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.
https://twitter.com/gharkekalesh/status/1670478724461109248
ಈ ಕುರಿತು ಸುನೀತಾ ಎಂಬ ಮಹಿಳೆ ರೆಸ್ಟೋರೆಂಟ್‌ ವಿರುದ್ಧ ಆರೋಪಿಸಿದ್ದು, ಇಂದು ನಾವು ನನ್ನ ಕುಟುಂಬದೊಂದಿಗೆ ನೋಯ್ಡಾದ ಸೆಕ್ಟರ್-75 ರ ಸ್ಪೆಕ್ಟಮ್ ಮಾಲ್‌ನಲ್ಲಿರುವ ರೆಸ್ಟೋರೆಂಟ್‌ಗೆ ಭೇಟಿ ನೀಡಿ ನಾವು ಕೆಲವು ತಿನಿಸುಗಳನ್ನು ಆರ್ಡರ್​ ಮಾಡಿದ್ದೇವು. ಆದರೆ ರೆಸ್ಟೋರೆಂಟ್‌ ಸಿಬ್ಬಂದಿ ಅದರಲ್ಲಿ ಕೆಲವುಗಳನ್ನು ಬಿಟ್ಟು ಬೇರೆ ತಿನಿಸು ಮಾತ್ರ ನೀಡಿದ್ದರು ಎಂದು ಹೇಳಿದ್ದಾಳೆ.ಅಲ್ಲದೇ, ಊಟವಾದ ಬಳಿಕ ನಾವು ಬಿಲ್ ಕೇಳಿದ್ದೇವು. ಈ ವೇಳೆ ನಾವು ಸೇವಾ ಶುಲ್ಕವನ್ನು ತೆಗೆದು ಹಾಕುವಂತೆ ಹೇಳಿದಾಗ ಸೇವಾ ಶುಲ್ಕವನ್ನು ತೆಗೆದು ಹಾಕಲು ನಿರಾಕರಿಸಿದರು. ಆಗ ಸಿಬ್ಬಂದಿ ಮತ್ತು ನಮ್ಮ ನಡುವೆ ವಾಗ್ವಾದ ನಡೆದಿದ್ದು, ಕೊನೆಗೆ ರೆಸ್ಟೋರೆಂಟ್​ ಸಿಬ್ಬಂದಿ ನಮ್ಮ ಕುಟುಂಬಸ್ಥರನ್ನು ಹೊಡೆಯಲು ಪ್ರಾರಂಭಿಸಿ ನನ್ನ ಸಹೋದರನ ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾಳೆ. ಆದರೆ ರೆಸ್ಟೋರೆಂಟ್​ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 4 =
Remember me
