ಕಾಸರಗೋಡು: ಕೇರಳದ ಬೋರ್ಡ್ ಎಕ್ಸಾಂ ಬರೆದ 10ನೇ ತರಗತಿ ವಿದ್ಯಾರ್ಥಿನಿಗೂ ಕರೊನಾ ಸೋಂಕು ಧೃಡಪಟ್ಟಿದೆ. ಆಕೆ ತನ್ನ ತಂದೆಯ ಜತೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಳು. ಈ ತಿಂಗಳು ಪತ್ತೆಯಾದ ಪಾಸಿಟಿವ್​ ಕೇಸ್​ಗಳ ಪೈಕಿ ಈ ವಿದ್ಯಾರ್ಥಿನಿಯದ್ದೂ ಒಂದು.
ಕಾಸರಗೋಡಿನ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕಳೆದ ವಾರ ತಂದೆಯ ಜತೆಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ಈ ವಿದ್ಯಾರ್ಥಿನಿಯ ತಂದೆ ಮಾರ್ಚ್ 17ರಂದು ವಿದೇಶದಿಂದ ಆಗಮಿಸಿದ್ದರು. ಅವರಿಗೂ ಸೋಂಕು ಧೃಡಪಟ್ಟಿದ್ದು, ಜತೆಗೆ ಕುಟುಂಬದ ಇತರೆ ಇಬ್ಬರು ಸದಸ್ಯರಿಗೂ ಸೋಂಕು ತಗುಲಿದೆ. ಎಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಜತೆಗೆ ಸಂಪರ್ಕಕ್ಕೆ ಪರೀಕ್ಷೆ ದಿನ ಯಾರೆಲ್ಲ ಬಂದಿದ್ದರು ಎಂಬುದನ್ನು ಗುರುತಿಸಲಾಗುತ್ತಿದ್ದು, ಅವರಿಗೂ ಈಗ ಕ್ವಾರಂಟೈನ್ ಇರುವಂತೆ ಸೂಚಿಸಲಾಗುತ್ತದೆ. ಮಾರ್ಚ್ 19ರಂದು ಪರೀಕ್ಷೆ ಬರೆದ ಸಂದರ್ಭದಲ್ಲಿ ಕನಿಷ್ಠ 19 ವಿದ್ಯಾರ್ಥಿಗಳು ಆಕೆಯ ಸಂಪರ್ಕಕ್ಕೆ ಬಂದಿದ್ದು, ಅವರ ಪತ್ತೆಗೆ ಪ್ರಯತ್ನ ನಡೆದಿದೆ. ಕೇರಳದಲ್ಲಿ ಸೋಂಕು ಪೀಡಿತರ ಸಂಖ್ಯೆ 160ರ ಗಡಿ ದಾಟಿದೆ. (ಏಜೆನ್ಸೀಸ್)
ಹೋಮ್ ಕ್ವಾರಂಟೈನ್ ಏನು?..ಎತ್ತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
