ಕೊಚ್ಚಿ:ಆಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜ ಕೇರಳದಲ್ಲಿ ಸಿಕ್ಕಾಪಟ್ಟೆ ಫೇಮಸ್​. ಆತನ ಫೇಸ್​ಬುಕ್​ ಪೋಸ್ಟ್​ ಸಾಮಾನ್ಯವಾಗಿ ಅನೇಕರ ಗಮನವನ್ನು ತನ್ನತ್ತ ಸೆಳೆಯುತ್ತದೆ. ನಿನ್ನೆ(ನ.23)ಯಷ್ಟೇ ಅವರು ಶೇರ್​ ಮಾಡಿರುವ ವಿಡಿಯೋ ಮತ್ತು ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಮೂರನೇ ತರಗತಿ ವಿದ್ಯಾರ್ಥಿಯ ಮನಮುಟ್ಟುವ ದೃಶ್ಯವಿದೆ. ತನ್ನ ಉಳಿತಾಯದ ಹಣವನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಭೇಟಿಗೆ ಬಂದ ಬಾಲಕ ನಿಧಿನ್​, ಅನಾಥ ಮಕ್ಕಳಿಗೆ ತನ್ನ ಹಣ ನೀಡುವಂತೆ ಕೇಳಿಕೊಂಡನು. ಬಾಲಕನ ಹೃದಯ ವೈಶಾಲತೆಗೆ ಕರಗಿ ಹೋದ ಜಿಲ್ಲಾಧಿಕಾರಿ ಕೃಷ್ಣ ತೇಜ, ಆತನನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ ಕ್ಷಣ ಮನಕಲಕುವಂತಿತ್ತು.
ತಮ್ಮ ಫೇಸ್​ಬುಕ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಕೃಷ್ಣ ತೇಜ, ನಿನ್ನೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಯ ವೇಳೆ ಬಾಲಕನೊಬ್ಬ ತನ್ನ ಎನ್​ವಲಪ್​ನೊಂದಿಗೆ ನನ್ನ ಬಳಿ ಬಂದ. ಅದೊಂದು ಮನವಿ ಪತ್ರ ಅಂದುಕೊಂಡು ನಾನು ಓಪನ್​ ಮಾಡಿದೆ. ಆದರೆ, ಅದರಲ್ಲಿ ಒಂದಿಷ್ಟು ಹಣ ಇದ್ದಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಂತರ ಬಾಲಕನನ್ನು ಹಣದ ಬಗ್ಗೆ ಪ್ರಶ್ನೆ ಮಾಡಿದಾಗ, ಓಣಂ ಮತ್ತು ವಿಶು ಹಬ್ಬವನ್ನು ಆಚರಿಸದೇ ಸಂಗ್ರಹಿಸಿದ ಹಣ ಎಂದು ಹೇಳಿದನು.
ಆ ಬಾಲಕ ತನ್ನ ಉಳಿತಾಯದ ಹಣವನ್ನು ಅನಾಥ ಮಕ್ಕಳಿಗೆ ಬುಕ್ಸ್​ ಸೇರಿದಂತೆ ಅಧ್ಯಯನ ಸಾಮಾಗ್ರಿಗಳನ್ನು ಕೊಳ್ಳಲು ಸರ್ಕಾರದ ಬಾಲನಿಧಿ ಯೋಜನೆಗೆ ದೇಣಿಗೆ ನೀಡಿದ. ಕೆಲವು ಅನುಭವಗಳು ಅವಿಸ್ಮರಣೀಯ. ಅದರಲ್ಲಿ ಇದೂ ಒಂದಾಗಿತ್ತು. ನಿಧಿನ್ ಮತ್ತು ಅವನ ಹೆತ್ತವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.(ಏಜೆನ್ಸೀಸ್​)
ಎಲ್ಲ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ: ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ

ಸರ್ಕಾರಿ ವಲಯದಲ್ಲೂ ಇಲ್ಲ ಉದ್ಯೋಗ ಭದ್ರತೆ! ರೈಲ್ವೆ ಇಲಾಖೆಯಿಂದ ನೌಕರರಿಗೆ ಬಿಗ್​ ಶಾಕ್

ಕೊನೆಗೂ ತುಳು ಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾದ ಕಾಂತಾರ; ಡಿಸೆಂಬರ್​ನಲ್ಲಿ ತೆರೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + four =
Remember me
