ನೋಯ್ಡಾ:ವಿದ್ಯಾರ್ಥಿಗಳಿಬ್ಬರು ತರಗತಿಯೊಳಗೆ ತಮ್ಮ ಶಿಕ್ಷಕರು ಪಾಠ ಮಾಡುತ್ತಿದ್ದರೆ, ಇತ್ತ ಇವರಿಬ್ಬರು ಪರಸ್ಪರ ಚುಂಬಿಸುವುದರಲ್ಲಿ ಮೈಮರೆತಿದ್ದಾರೆ. ಕ್ಲಾಸ್​ನಲ್ಲಿ ಯುವಕ ಮತ್ತು ಯುವತಿ ಕಿಸ್​ ಮಾಡುತ್ತಿರುವ ದೃಶ್ಯವನ್ನು ಅಲ್ಲೇ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಮಾಜಿ ಪತ್ನಿ ನತಾಶಾಗೆ ಮೋಸ ಮಾಡಿದ್ದೇ ಹಾರ್ದಿಕ್ ಪಾಂಡ್ಯ! ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು, ಕಷ್ಟಪಟ್ಟು ತಮ್ಮ ಮಕ್ಕಳು ಓದಿ, ವಿದ್ಯಾವಂತರಾಗಲಿ ಎಂದು ಫೀಸ್​ ಕಟ್ಟಿ, ಕಳುಹಿಸಿದರೆ, ಇವರು ಹೀಗೆಲ್ಲಾ ಮಾಡುವುದು ಎಷ್ಟು ಸರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶಾಕಿಂಗ್ ವಿಡಿಯೋ ವ್ಯಾಪಕವಾಗಿ ಹರಿದಾಡಿದ್ದು, ಮೇಲ್ನೋಟಕ್ಕೆ ಇದು ನೋಯ್ಡಾದ ಶಾಲೆ ಎಂದು ಹೇಳಲಾಗಿದೆ. ತರಗತಿಯಲ್ಲಿ ಶಿಕ್ಷಕರು ಭೋದನೆ ಮಾಡುತ್ತಿದ್ದರೆ, ಇತ್ತ ಇಬ್ಬರು ಪರಸ್ಪರ ತುಟಿಗೆ ಚುಂಬಿಸುವ ಮೂಲಕ ರೊಮ್ಯಾನ್ಸ್​ನಲ್ಲಿ ಮುಳುಗಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಕೆಲವರು ವಿಡಿಯೋ ನೋಡಿ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಇದಕ್ಕೆಲ್ಲಾ ಕಾರಣ ಬಾಲಿವುಡ್ ಸಿನಿಮಾಗಳು ಹಾಗೂ ವೆಬ್​ ಸೀರಿಸ್​ಗಳು ಎಂದು ಕಿಡಿಕಾರಿದ್ದಾರೆ. ಆಯಾ ಚಿತ್ರನಟರು ತಮ್ಮ ಫಿಲಂಗಳಲ್ಲಿ ಕಿಸ್ ಮಾಡುವುದೇ ಇಂತಹ ಘಟನೆಗಳಿಗೆ ಕಾರಣ. ಈ ರೀತಿಯ ಸಿನಿಮಾಗಳನ್ನು ನೋಡಿ ಪ್ರಭಾವಿತರಾಗುವ ವಿದ್ಯಾರ್ಥಿಗಳು, ಸಿನಿ ಶೈಲಿಯಲ್ಲೇ ಚುಂಬಿಸಲು ಮುಂದಾಗುತ್ತಾರೆ. ಯಾವಾಗ ಬಾಲಿವುಡ್​ನವರು ಇದನ್ನು ನಿಲ್ಲಿಸುತ್ತಾರೋ ಆಗ ಇದಕ್ಕೆ ಒಂದು ಫುಲ್​ಸ್ಟಾಪ್ ಸಿಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಕಷ್ಟದ ದಿನಗಳಲ್ಲಿ ಇದೊಂದು ಚಿತ್ರವನ್ನು ಪದೇ ಪದೇ ನೋಡ್ತಿದ್ದೆ: ವಿಜಯ್ ಸೇತುಪತಿ ಹೇಳಿದ ಆ ಸಿನಿಮಾ ಯಾರದ್ದು?
ಇನ್ನು ಕೆಲವರು, ಈ ವಿಡಿಯೋ ನೋಡಿದ ಅವರ ಪೋಷಕರು ಎಷ್ಟು ಬೇಸರಕ್ಕೊಳಗಾಗಬಹುದು. ಇಂಥವರಿಗೆ ವಿದ್ಯಾಭ್ಯಾಸ ಕೊಡಿಸುವುದನ್ನು ನಿಲ್ಲಿಸಬೇಕು. ಇವರ ಓದಿಗೆ ಹಣ ಸುರಿಯುವುದನ್ನು ಮೊದಲು ನಿಲ್ಲಿಸಿ, ಮದುವೆ ಮಾಡಿಸುವುದು ಒಳಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಇರೋದು 4 ಜನ, 4 ಬಲ್ಬ್​, 4 ಫ್ಯಾನ್​… 20 ಲಕ್ಷ ರೂ. ಕರೆಂಟ್ ಬಿಲ್​ ಪಡೆದ ಕುಟುಂಬ ಕಂಗಾಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + 14 =
Remember me
