ತ್ರಿಸ್ಸೂರ್​:ಫ್ರೆಂಡ್ಸ್​ ನೆರವಿನಿಂದ ಹೈಸ್ಕೂಲ್​ ಸಹಪಾಠಿಗಳಿಬ್ಬರು 35 ವರ್ಷಗಳ ಬಳಿಕ ಮದುವೆಯಾಗಿರುವ ವಿನೂತನ ಪ್ರಸಂಗ ಕೇರಳದಲ್ಲಿ ನಡೆದಿದೆ.
ಅಂದಹಾಗೆ ಆ ನವಜೋಡಿಯ ಹೆಸರು ಹರಿದಾಸನ್​ ಮತ್ತು ಸುಮತಿ. ಇವರಿಬ್ಬರು 1986-87ನೇ ಬ್ಯಾಚ್​ನ ಹೈಸ್ಕೂಲ್​ ವಿದ್ಯಾರ್ಥಿಗಳಾಗಿದ್ದರು. ಈ ಸಮಯದಲ್ಲಿ ಹರಿದಾಸನ್ ಕಾಂಗ್ರೆಸ್​ ವಿದ್ಯಾರ್ಥಿ ಘಟಕ ಕೇರಳ ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ಸುಮತಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತೆಯಾಗಿದ್ದರು.
ಪ್ರಸ್ತುತ ಹರಿದಾಸನ್​ ಕಲಾಮಂದಂಳಂನ ತಿಮಿಲಾ ಪರಿಣಿತರಾಗಿದ್ದಾರೆ. ಸುಮತಿ ಸಿಪಿಎಂ ಪನ್ನಿತ್ತಡಂ ಶಾಖೆಯ ಸದಸ್ಯೆ, ಮಹಿಳಾ ಸಂಘದ ಕಾರ್ಯಕರ್ತೆ ಮತ್ತು ಚೋವನ್ನೂರು ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿದ್ದಾರೆ. ಮೊನ್ನೆ (ನ.14)ಯಷ್ಟೇ ಇಬ್ಬರು ಮದುವೆಯಾದರು.
ಥನಲ್’ ಹೆಸರಿನ ಮರತಮ್ಮಕೂಡು ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ಇಬ್ಬರನ್ನು ಒಂದುಗೂಡಿಸಿದೆ. ಮೂರು ವರ್ಷಗಳ ಹಿಂದೆ ಪುನರ್ಮಿಲನದ ಸಂದರ್ಭದಲ್ಲಿ ಇವರಿಬ್ಬರು ಅವಿವಾಹಿತರು ಮತ್ತು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಸಹಪಾಠಿಗಳು ಗಮನಿಸಿದರು. ತಿಂಗಳ ಹಿಂದೆ ಅವರ ಮಾಜಿ ಕ್ಲಾಸ್ ಲೀಡರ್ ಸತೀಶನ್ ಅವರು ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಬಹುದೇ ಎಂದು ಕೇಳಿದರು. ಈ ಸಲಹೆಯನ್ನು ಅವರ ಸಹಪಾಠಿಗಳು ಸಹ ಬೆಂಬಲಿಸಿದರು. ಆದರೆ ಇಬ್ಬರೂ ಯೋಚಿಸದ ಕಾರಣ ನಿರಾಕರಿಸಿದರು. ಆದರೂ ಅವರ ಸ್ನೇಹಿತರು ಒಪ್ಪಿಸುವ ಪ್ರಯತ್ನ ಬಿಡಲಿಲ್ಲ. ಅಂತಿಮವಾಗಿ ಕುನ್ನಬತುಕಾವು ದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಆಶೀರ್ವಾದದೊಂದಿಗೆ ಸೋಮವಾರ (ನ.14) ವಿವಾಹವಾದರು.
ಮದುವೆ ಬಗ್ಗೆ ಮಾತನಾಡಿರುವ ಸುಮತಿ, ಇದನ್ನು ಎಂದೂ ನಿರೀಕ್ಷಿಸಿರಲಿಲ್ಲ. ನಾವು ಒಟ್ಟಿಗೆ ಅಧ್ಯಯನ ಮಾಡಿದ್ದರಿಂದ ನಾವು ಪರಸ್ಪರ ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ರಾಜಕೀಯ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಅವುಗಳನ್ನು ಒಟ್ಟಿಗೆ ಸೇರಿಸುವುದಿಲ್ಲ ಎಂದಿದ್ದಾರೆ.
ನಾನು ಮದುವೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಆದರೆ ನಾನು ಒಂಟಿಯಾಗಿರುವ ಬಗ್ಗೆ ದುಃಖಿತನಾಗಿದ್ದೆ. ಈಗ ಸ್ನೇಹಿತರು ಮತ್ತು ಕುಟುಂಬದವರ ನೆರವಿನಿಂದ ನನಗೆ ಓರ್ವ ಒಡನಾಡಿ ಸಿಕ್ಕಿದ್ದಾಳೆ ಎಂದು ಹರಿದಾಸನ್ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗ್ಳೂರಿನಾಚೆಗೂ ಐಟಿ ವಿಸ್ತಾರ: 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ, 5 ಬಿಲಿಯನ್ ಡಾಲರ್ ರಫ್ತು

ಸರ್ಕಾರಿ ಕಾರ್ನರ್: ವೃಂದ ಬದಲಾವಣೆ ಅವಕಾಶ

ಸ್ವಾತಿ ಮುತ್ತಿನ ಮಳೆ ಹನಿಯೇ ಪ್ಯಾಕಪ್; ರಮ್ಯಾ ನಿರ್ಮಾಣದ ಮೊದಲ ಚಿತ್ರದ ಶೂಟಿಂಗ್ ಪೂರ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 9 =
Remember me
