ನವದೆಹಲಿ:ಕರೊನಾ ವೈರಸ್​ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸೆಕ್ಷನ್​ 144 ವಿಧಿಸಿ ನಿರ್ಬಂಧ ಹೇರಿದ್ದರೂ ಅದನ್ನು ಉಲ್ಲಂಘನೆ ಮಾಡಿ ಧಾರ್ಮಿಕ ಸಮಾವೇಶ ನಡೆಸಿದ್ದ ತಬ್ಲಿಘಿ ಜಮಾತ್​ನ ಧರ್ಮಗುರು, ಪ್ರಮುಖ ಬೋಧಕ ಮೌಲಾನಾ ಸಾದ್​ ಅವರು ಮಾತನಾಡಿದ್ದಾರೆನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಮುಸ್ಲಿಮರ ಒಗ್ಗಟ್ಟನ್ನು ಮುರಿಯುವುದಕ್ಕೋಸ್ಕರ ಈ ಕರೊನಾ ವೈರಸ್​ ಭಯ ಹುಟ್ಟಿಸಲಾಗಿದೆ. ಇದಕ್ಕೆಲ್ಲ ಹೆದರಬೇಡಿ. ಲಾಕ್​ಡೌನ್​ ಇದ್ದರೂ ಸರಿ, ನಿಜಾಮುದ್ದೀನ್​ ಮರ್ಕಜ್​ ಮಸೀದಿಯಲ್ಲಿ ನಡೆದಂತಹ ಧಾರ್ಮಿಕ ಸಭೆಗಳನ್ನು ಉಳಿದ ಕಡೆಗೂ ನಡೆಸಲಾಗುವುದು. ಅದರಲ್ಲೂ ಎಲ್ಲರೂ ಪಾಲ್ಗೊಳ್ಳಿ ಎಂದು ಮೌಲಾನಾ ಹೇಳಿದ್ದನ್ನು ಈ ಆಡಿಯೋದಲ್ಲಿ ಕೇಳಬಹುದು ಎನ್ನಲಾಗಿದೆ.
ಸರ್ಕಾರಿ ಆದೇಶ ಉಲ್ಲಂಘನೆ ಮಾಡಿ ಸಭೆ ನಡೆಸಿ, ಕರೊನಾ ವೈರಸ್ ಹರಡಲು ಕಾರಣವಾಗಿರುವ ತಬ್ಲಿಘಿ ಜಮಾತ್​ ಮತ್ತು ಅದರ ಪ್ರಮುಖ ಧರ್ಮಗುರು ಮೌಲಾನಾ ಸಾದ್​ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪೊಲೀಸರು ಈಗಾಗಲೇ ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ ಮೌಲಾನಾ ನಾಪತ್ತೆಯಾಗಿದ್ದಾನೆ. ಟ್ರೇಸ್​ ಮಾಡುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ.
ಏನಿದೆ ಆಡಿಯೋ ಟೇಪ್​ನಲ್ಲಿ:‘ಮುಸ್ಲಿಮರ ಏಕತೆಯನ್ನು ಒಡೆಯಲು ಮತ್ತು ನಮ್ಮ ಧರ್ಮಾಚರಣೆಯನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ನಮ್ಮ ಬಳಿ ಗುಂಪುಗೂಡಬೇಡಿ, ಒಟ್ಟಾಗಿ ನಮಾಜ್​ ಮಾಡಬೇಡಿ, ಸಭೆ ನಡೆಸಬೇಡಿ ಎನ್ನುತ್ತಾರೆ. ಅದಕ್ಕೆ ಕರೊನಾ ಸೋಂಕಿನ ನೆಪ ಹೇಳುತ್ತಾರೆ. ಮುಸ್ಲಿಂ ಸಮುದಾಯದವರು ಒಗ್ಗಟ್ಟಾಗಿರುವುದು ಇಷ್ಟವಿಲ್ಲ. ನಾವೇನಾದರೂ ಕರೊನಾ ವೈರಸ್​ಗೆ ಹೆದರಿ ನಮ್ಮ ಒಗ್ಗಟ್ಟನ್ನು ಮುರಿದುಕೊಂಡರೆ ನಮಗೆ ನಷ್ಟ. ಸಾಂಕ್ರಾಮಿಕ ಕಾಯಿಲೆ ಕಡಿಮೆಯಾಗಬಹುದು. ಆದರೆ ಮುಸ್ಲಿಮರ ಸಂಕಷ್ಟ ಕೊನೆಯಾಗುವುದಿಲ್ಲ.
ಕಾಯಿಲೆಗೆ ಹೆದರಿ ಭೇಟಿಯಾಗುವುದನ್ನು ನಿಲ್ಲಿಸಿದರೆ ನಮ್ಮ ಮಧ್ಯೆ ಆತ್ಮೀಯತೆ ನಶಿಸುತ್ತದೆ. ಒಂದೇ ತಟ್ಟೆಯಲ್ಲಿ ಊಟ ಮಾಡುವ ಸ್ನೇಹ ಕಳಚುತ್ತದೆ. ಕರೊನಾ ವೈರಸ್​ ಹೆಸರಲ್ಲಿ ನಮ್ಮನ್ನು ನಿರ್ಬಂಧಿಸುವುದೇ ಉದ್ದೇಶ..’ ಎಂಬ ಸಾರಾಂಶವನ್ನು ಈ ಆಡಿಯೋ ಒಳಗೊಂಡಿದೆ.
ಮೌಲಾನಾ ಪತ್ತೆ ಕಾರ್ಯ ನಡೆಯುತ್ತಿದ್ದು, ಅದರೊಂದಿಗೆ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ದೇಶದೊಳಗಿನ, ವಿದೇಶಿ ಪ್ರಜೆಗಳನ್ನೂ ಹುಡುಕಲಾಗುತ್ತಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
