ನವದೆಹಲಿ:ಕ್ಷಿಪ್ರವಾಗಿರುವ ಹವಾಮಾನ ವೈಪರೀತ್ಯ ತಡೆಗೆ ‘ಹೈಸ್ಪೀಡ್’ನಲ್ಲಿ ಬಲಿಷ್ಠ ಕಾರ್ಯಾನುಷ್ಠಾನ ಬೃಹತ್ ಪ್ರಮಾಣದಲ್ಲಿ ನಡೆಯಬೇಕಾದ ತುರ್ತು ಸಂದರ್ಭ ಈಗ ಎದುರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಅಮೆರಿಕ ಆಯೋಜಿಸಿದ್ದ ಎರಡು ದಿನಗಳ ವರ್ಚುವಲ್ ಕ್ಲೈಮೇಟ್ ಶೃಂಗದ ಮೊದಲ ದಿನವಾದ ಗುರುವಾರ ಮಾತನಾಡಿದ ಅವರು, ಸವಾಲನ್ನು ಎದುರಿಸುವುದಕ್ಕೆ ಭಾರತ ಈಗಾಗಲೇ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡುತ್ತಲಿದೆ. ಸುಸ್ಥಿರ ಜೀವನಶೈಲಿ, ‘ಬ್ಯಾಕ್ ಟು ಬೇಸಿಕ್ಸ್’ ಎಂಬ ಮಾರ್ಗದರ್ಶಕ ತತ್ತ್ವಶಾಸ್ತ್ರಗಳು ಕೋವಿಡ್-19 ನಂತರದ ಅವಧಿಯಲ್ಲಿ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಬೇಕು ಎಂದು ಪ್ರಧಾನಿ ಹೇಳಿದರು.
ಭಾರತ ಮತ್ತು ಅಮೆರಿಕ ಕ್ಲೈಮ್ಯಾಟ್, ಶುದ್ಧ ಇಂಧನ ಕಾರ್ಯಸೂಚಿ 2030ರ ಪಾಲುದಾರಿಕೆಗೆ ನಾನು ಮತ್ತು ಅಧ್ಯಕ್ಷ ಬೈಡೆನ್ ಚಾಲನೆ ನೀಡುತ್ತಿದ್ದೇವೆ. ನಾವು ಒಟ್ಟಾಗಿ ಹೂಡಿಕೆಗಳನ್ನು ಒಗ್ಗೂಡಿಸಲು ನೆರವಾಗುತ್ತೇವೆ, ಕ್ಲೀನ್ ಟೆಕ್ನಾಲಜಿಯನ್ನು ಪ್ರದರ್ಶಿಸುತ್ತೇವೆ ಮತ್ತು ಹಸಿರು ಪಾಲುದಾರಿಕೆಗೆ ಚಾಲನೆ ನೀಡುತ್ತೇವೆ.
ಅಭಿವೃದ್ಧಿ ಸವಾಲುಗಳ ಹೊರತಾಗಿಯೂ ಭಾರತ, ಪರಿಶುದ್ಧ ಇಂಧನ, ಇಂಧನ ಕಾರ್ಯಕ್ಷಮತೆ, ಅರಣ್ಯೀಕರಣ ಮತ್ತು ಜೀವ ವೈವಿಧ್ಯ ಉಳಿಸಿ ಬೆಳೆಸುವ ಬಗ್ಗೆ ಅನೇಕ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಮಾನವೀಯತೆಗಾಗಿ ಹವಾಮಾನ ವೈಪರೀತ್ಯವನ್ನು ಎದುರಿಸಲು, ಸದೃಢವಾದ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಅಂತಹ ಕ್ರಮಗಳನ್ನು ಜಾಗತಿಕವಾಗಿ ಹೈಸ್ಪೀಡ್​ನಲ್ಲಿ ಮತ್ತು ಬೃಹತ್ ಪ್ರಮಾಣದಲ್ಲಿ ಕಾರ್ಯಗತಗೊಳಿಸಬೇಕು. ನಾವು ಭಾರತದಲ್ಲಿ ನಮ್ಮ ಪಾಲಿನ ಕೆಲಸಗಳನ್ನು ಮಾಡಲಾರಂಭಿಸಿದ್ದೇವೆ.
ಹವಾಮಾನ ಹೊಣೆಗಾರಿಕೆಯುಳ್ಳ ರಾಷ್ಟ್ರವಾಗಿ ಭಾರತವು, ತನ್ನಲ್ಲಿ ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ರಚಿಸುವುದಕ್ಕೆ ಪಾಲುದಾರರನ್ನು ಆಹ್ವಾನಿಸುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಇತರೆ ರಾಷ್ಟ್ರಗಳಿಗೂ ಅಂದರೆ ಯಾರಿಗೆ ಗ್ರೀನ್ ಫೈನಾನ್ಸ್ ಮತ್ತು ಕ್ಲೀನ್ ಟೆಕ್ನಾಲಜಿಗಳು ಕಡಿಮೆ ಖರ್ಚುವೆಚ್ಚದಲ್ಲಿ ಬೇಕಾಗಿದೆಯೋ ಅವುಗಳಿಗೆ ನೆರವಾಗುವಂತಹದ್ದಾಗಿದೆ ಎಂದು ಪ್ರಧಾನಿ ಹೇಳಿದರು.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಾಲನೆ: 40 ದೇಶಗಳ ಜಾಗತಿಕ ನಾಯಕರು ಪಾಲ್ಗೊಳ್ಳುತ್ತಿರುವ ವರ್ಚುವಲ್ ಕ್ಲೈಮ್ಯಾಟ್ ಶೃಂಗಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಚಾಲನೆ ನೀಡಿದರು. ಶೃಂಗದಲ್ಲಿ ಹವಾಮಾನ ವೈಪರೀತ್ಯ ತಡೆಗೆ ಮಾದರಿ ಕ್ರಮ ತೆಗೆದುಕೊಳ್ಳುವ ವಿಚಾರ ಮಂಡನೆ ನಡೆಯುತ್ತಿದೆ.
ಕೋಟ್ಸ್​
ನಮ್ಮ ಗ್ರಹವನ್ನು ರಕ್ಷಿಸುವುದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರ್ಚಚಿಸುವುದಕ್ಕೆ ಇದು ಮಹತ್ವದ ಕ್ಷಣವಾಗಿದೆ. ನಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಅಪಾಯದ ಕ್ಷಣವೂ ಹೌದು ಅವಕಾಶವೂ ಹೌದು. ಸರಿಯಾದ ರೀತಿಯಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಲ್ಲಿದೆ.
| ಜೋ ಬೈಡೆನ್ ಅಮೆರಿಕದ ಅಧ್ಯಕ್ಷ
ಚೀನಾ 2030ರೊಳಗೆ ಗರಿಷ್ಠ ಕಾರ್ಬನ್ ಎಮಿಷನ್ ಅನ್ನು ನಿಯಂತ್ರಿಸಿ, 2060ರೊಳಗೆ ಕಾರ್ಬನ್ ನ್ಯೂಟ್ರಾಲಿಟಿಯನ್ನು ಸಾಧಿಸಲಿದೆ. ಹಸಿರು ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ಉತ್ಪಾದಕತೆಯನ್ನು ಹೆಚ್ಚಿಸಲು ಪರಿಸರದಲ್ಲಿ ಸುಧಾರಣೆ ತರುವವರಿದ್ದೇವೆ.
| ಕ್ಸಿ ಜಿನ್ ಪಿಂಗ್ ಚೀನಾ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
