ಮುಂಬೈ:ಜವಳಿ ವ್ಯಾಪಾರಿಯೊಬ್ಬರ ಅವಳಿ-ಜವಳಿ ಮಕ್ಕಳನ್ನು ಅಪಹರಣ ಮಾಡಿ ತನ್ನ ಮಗಳ ಮದುವೆಗೆ ದುಡ್ಡು ಹೊಂಚುವ ಹುನ್ನಾರ ನಡೆಸಿದ್ದ ವಾಹನ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತನ್ನ 24 ವರ್ಷದ ಸೋದರ ಅಳಿಯನೊಂದಿಗೆ ಸೇರಿ ಅಪಹರಣದ ನಾಟಕವಾಡಿದ 42 ವರ್ಷದ ಆರೋಪಿ, ಕೊನೆಗೆ ತಪ್ಪೊಪ್ಪಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.
ಜನವರಿ 25ರಂದು ರಾತ್ರಿ ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ತೊಡಗಿರುವ ಜುಹೂ ನಿವಾಸಿಯೊಬ್ಬರ ವಾಹನ ಚಾಲಕ ಡಿಎನ್​ನಗರ ಪೊಲೀಸ್ ಠಾಣೆಗೆ ಬಂದ. ತನ್ನ ಯಜಮಾನರ ಅವಳಿ-ಜವಳಿ ಗಂಡುಮಕ್ಕಳನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಯಾರೋ ನನಗೆ ಚಾಕು ತೋರಿಸಿ ಬೆದರಿಸಿ ಅಪಹರಿಸಿದ್ದಾರೆ. ತಾನು ಹೇಗೋ ತಪ್ಪಿಸಿಕೊಂಡು ಬಂದು ವಿಷಯ ತಿಳಿಸುತ್ತಿದ್ದೇನೆ ಎಂದು ದೂರು ಸಲ್ಲಿಸಿದ.
ಇದನ್ನೂ ಓದಿ:VIDEO | ಲ್ಯಾಂಡ್ ಕ್ರೂಸರ್ ಚಲಾಯಿಸಿದ ಐದು ವರ್ಷದ ಬಾಲಕ; ಕಾಲೆಟುಕದಿದ್ದರೂ ಕೈಗೆ ಸ್ಟೇರಿಂಗ್​!
10 ವರ್ಷದ ಇಬ್ಬರು ಗಂಡುಮಕ್ಕಳನ್ನು ಅವರ ಫಾರ್ಚೂನರ್ ಕಾರಿನಲ್ಲಿ ಚಾಲಕ ಟೆನ್ನಿಸ್​ ಕ್ಲಾಸಿಗೆಂದು ಸಂಜೆ ಕರೆದುಕೊಂಡುಹೋಗಿದ್ದ. ಅಲ್ಲಿಂದ ಹಿಂದಿರುಗುವಾಗ, ದಾರಿಯಲ್ಲಿ ವ್ಯಕ್ತಿಯೊಬ್ಬ ಕಾರನ್ನು ತಡೆದ. ನಿಲ್ಲಿಸಿದಾಗ ಚಾಕು ತೋರಿಸಿ, ಕಾರನ್ನು ಅಂಧೇರಿ ಕಡೆಗೆ ಓಡಿಸಲು ಹೇಳಿದ. ಮಕ್ಕಳಿಗೆ ನಿದ್ರೆ ಮಾತ್ರೆ ತಿನ್ನಿಸಿ, ಕೈಕಟ್ಟಿದ. ನಂತರ ಒಬ್ಬನನ್ನು ನಿಂತಿದ್ದ ಶಾಲಾ ಬಸ್​ನ ಒಳಗೆ ಕೂಡಿ ಹಾಕಿದ. ನಂತರ ಮತ್ತೊಂದು ಹುಡುಗನ ಸಹಿತ ಜುಹೂ ಪಿವಿಆರ್ ಬಳಿಗೆ ಕರೆದುಕೊಂಡು ಹೋಗಿ ಕಾರು ನಿಲ್ಲಿಸಲು ಹೇಳಿದ. ಅಲ್ಲಿಗೆ ಮೂರು ಬೈಕುಗಳಲ್ಲಿ ಬಂದ ಆರು ಜನ ತನ್ನನ್ನು ಥಳಿಸಿ ಬೆದರಿಸಿದರು. ತಾನು ಹೇಗೋ ತಪ್ಪಿಸಿಕೊಂಡು ಬಂದೆ ಎಂದು ದೂರಿನಲ್ಲಿ ವಿವರಿಸಿದ್ದ.ಚಾಲಕನ ಮೇಲೆ ನಂಬಿಕೆ ಬಾರದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ತನ್ನ ಸೋದರಳಿಯನ ಜತೆ ಸೇರಿ ಅಪಹರಣದ ಪ್ರಹಸನ ಸೃಷ್ಟಿಸಿದ್ದಾಗಿ ಒಪ್ಪಿಕೊಂಡ. ತನ್ನ ಮಗಳ ಮದುವೆಗೆ ಹಣ ಹೊಂದಿಸಲು ಈ ಕೃತ್ಯ ಮಾಡಿರುವುದಾಗಿ ತಿಳಿಸಿದ.
ಇನ್ನು ಅಷ್ಟರಲ್ಲಾಗಲೇ ಮಕ್ಕಳ ತಂದೆಗೆ ಒಂದು ಕೋಟಿ ರೂಪಾಯಿ ಕೇಳಿಕೊಂಡು ಅಪಹರಣಕಾರ ನಾಲ್ಕು ಬಾರಿ ಫೋನ್ ಮಾಡಿದ್ದ. ಒಬ್ಬ ಹುಡುಗ ನಿಲ್ಲಿಸಿದ್ದ ಶಾಲಾ ಬಸ್​​ನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಸಿಕ್ಕಿದ್ದಾನೆ. ಮತ್ತೊಬ್ಬ ಹುಡುಗನನ್ನು ಜುಹೂ ಪಿವಿಆರ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಹುಡುಕಲು ಹೋದಾಗ, ಅವನು ಬಿಡಿಸಿಕೊಂಡು ಹತ್ತಿರದ ಅಂಗಡಿಯ ಸಿಬ್ಬಂದಿಯ ಸಹಾಯ ಕೋರುತ್ತಿದ್ದ ಎನ್ನಲಾಗಿದೆ.(ಏಜೆನ್ಸೀಸ್)
ಯೂಟ್ಯೂಬ್​ನಿಂದ ಹ್ಯಾಕಿಂಗ್​ ಕಲಿತು ಅಪ್ಪನಿಗೇ 10 ಕೋಟಿ ರೂಪಾಯಿ ಬೇಡಿಕೆಯಿಟ್ಟ 11ರ ಪೋರ!

ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
