ಸ್ಟಾರ್ಟಪ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಜನರು ಹೊಸ ಉದ್ಯಮಗಳನ್ನ ಕಂಡುಕೊಳ್ಳುತ್ತಿರುತ್ತಾರೆ. ಅದರಲ್ಲಿ ಬಟ್ಟೆಗಳ ವಿಚಾರಕ್ಕೆ ಬಂದ್ರೆ ಸಾಕು, ನಿಮಗೆ ಕೊಂಡುಕೊಳ್ಳಲು ಬೇಕಾದಷ್ಟು ಆಯ್ಕೆಗಳಿವೆ. ಯಾಕಂದ್ರೆ ಬೆಂಗಳೂರಿನಲ್ಲಿ ನೀವು ಯಾವುದೇ ಸ್ಟ್ರೀಟ್​​​ಗಳಿಗೆ ಕಾಲಿಟ್ರೂ ಸಹ ಬಟ್ಟೆ ಅಂಗಡಿಗಳು ಇರೋದಂತೂ ಫಿಕ್ಸ್.
ಈ ನಡುವೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಮಾಲ್​, ಸ್ಟ್ರೀಟ್​​ ಎಲ್ಲಿ ಹೋದರೂ ಎಲ್ಲಾ ವರ್ಗದ ಜನರು ಕೊಳ್ಳುವಂತಹ ಬಟ್ಟೆಗಳು ನಿಮಗೆ ಬೇಕಾದ ದರದಲ್ಲಿ ಸಿಗುತ್ತಿದೆ. ಬಟ್ಟೆ ಅಂಗಡಿ ಮಾಲೀಕರು ವ್ಯಾಪಾರವಿಲ್ಲದೆ ಕೆಲವೊಮ್ಮೆ ಚಿಂತೆ ಮಾಡುತ್ತಾರೆ. ಇನ್ನು ಆನ್ಲೈನ್​​​ನಲ್ಲಿ ಆರ್ಡರ್​​ ಮಾಡಿದ್ರಂತೂ ನಿಮ್ಮ ಮನೆ ಬಾಗಿಲಿಗೆಯೇ ಬಟ್ಟೆಗಳು ಬಂದು ಬೀಳುತ್ತೆ.
ಬೆಂಗಳೂರಿನಲ್ಲೊಂದು ಮೊಬೈಲ್​ ಬಟ್ಟೆ ಶಾಪ್..!ಇದೀಗ ತಳ್ಳುವ ತರಕಾರಿ ಗಾಡಿ , ಮೊಬೈಲ್​ ಕ್ಯಾಂಟೀನ್​​ ರೀತಿಯಲ್ಲಿ ಜನರು ಬಟ್ಟೆ ಮಾರೋಕೆ ಪ್ರಾರಂಭಿಸಿದ್ದಾರೆ. ಟ್ರಾನ್ಸ್​​ಪರೆಂಟ್​​ ಗ್ಲಾಸ್​​ ಫಿನಿಶಿಂಗ್​​ ಇರುವ ಟ್ರಕ್​​ ಒಂದರಲ್ಲಿ ಬಟ್ಟೆ ಮಾರುತ್ತಿರುವ ದೃಶ್ಯವೊಂದು ಬೆಂಗಳೂರಿನಲ್ಲಿ ಕಂಡು ಬಂದಿದೆ. @HaramiParindey ಎಂಬ ಎಕ್ಸ್​ ಖಾತೆಯಲ್ಲಿ ಟ್ರಕ್​ನಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವ ಫೋಟೋವೊಂದನ್ನ ಹಂಚಿಕೊಳ್ಳಲಾಗಿದೆ. ಸದ್ಯ ಈ ಫುಡ್​​​ ಟ್ರಕ್​ ನೋಡಿದ್ವಿ, ಆದ್ರೆ ಬಟ್ಟೆ ಟ್ರಕ್​ ಕಂಡು ಅಚ್ಚರಿಯಾಯ್ತು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
In another episode of "WTF Bangalore," spotted this truck while going to the mandir with my wife.pic.twitter.com/pUpCQuiczk
ದೊಡ್ಡ ಮಾಲ್‌ಗಳಲ್ಲಿ ಶೋರೂಮ್‌ಗಳು ಏನೇ ಮಾಡಿದ್ರು, ಈ ರೀತಿ ಟ್ರಕ್​ನಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವ ವ್ಯಕ್ತಿಯ ಪ್ರಯತ್ನ ಶ್ಲಾಘನೀಯ ಅನ್ನೋದು ಖುಷಿಯ ವಿಚಾರ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಬಟ್ಟೆ ಮಾರಾಟ ಮಾಡುವ ಟ್ರಕ್​​​ ಹೌದಾ ಅಲ್ವಾ?… ಇಸ್ತ್ರಿ ಅಂಗಡಿಯಂತೆ ಕಾಣಿಸುತ್ತಿದೆ ಎಂದೂ ಹೇಳಿದ್ದಾರೆ.
ಸದ್ಯ ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​ ಆಗಿದ್ದು, ಸೆಲೆಬ್ರಿಟಿಗಳು ತಮ್ಮ ವ್ಯಾನಿಟಿ ವ್ಯಾನ್‌ಗಳಂತೆ ಪರಿಗಣಿಸುತ್ತಾರೆ. ಆದ್ರೆ ಈ ದೃಶ್ಯವಂತೂ ಒಂದು ಬಾರಿ ನೋಡುಗರ ಹುಬ್ಬೇರಿಸಿದೆ.
@HaramiPrindey ಎಂಬ ಎಕ್ಸ್​ ಖಾತೆಯಲ್ಲಿ ಈ ಪೋಟೋವನ್ನ ಹಂಚಿಕೊಳ್ಳಲಾಗಿದ್ದು, ನನ್ನ ಹೆಂಡತಿಯೊಂದಿಗೆ ಮಂದಿರಕ್ಕೆ ಹೋಗುತ್ತಿರುವಾಗ ಈ ಟ್ರಕ್ ದಾರಿ ಬದಿಯಲ್ಲಿ ಕಾಣ ಸಿಕ್ಕಿದೆ ಎಂದು ಬರೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
