ಬೆಂಗಳೂರು:ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಸಖತ್​ ಆಕ್ಟಿವ್​ ಆಗಿವೆ. ತಮ್ಮದೆ ಆಗಿರುವ ರೀತಿಯಲ್ಲಿ ಪ್ರಚಾರ ಮಾಡಲು ಸಕಲ ತಯಾರಿಯನ್ನು ಪಕ್ಷಗಳು ನಡೆಸುತ್ತಿವೆ. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ.‌ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.
ಈ ಬಟ್ಟೆಯಲ್ಲಿ 3 ಡಿಸೈನ್ ಗಳು ಜನರನ್ನ ಸೆಳೆಯುತ್ತಿವೆ. ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.‌ ಮೋದಿ ಬಟ್ಟೆಗೆ ಫುಲ್ ಡಿಮ್ಯಾಂಡ್ ಬಂದಿದೆ.‌ ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.
ಡಿಜಿಟಲ್ ಪ್ರಿಂಟ್ ಇರುವ ಮೋದಿ ಬಟ್ಟೆಗೂ ಡಿಮ್ಯಾಂಡ್ ಇದ್ದು, ಜುಬ್ಬಾ, ವಾಸ್ ಕೋಟ್​ಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ.ವ್ಯಾಪಾರಸ್ಥರು ಜನರು ಡಿಮ್ಯಾಂಡ್ ಮಾಡುತ್ತಿರುವ ಮೋದಿ ಫೋಟೋ ಇರುವ ಬಟ್ಟೆಯನ್ನ‌ ಅಹಮದಬಾದ್, ಬಾಂಬೆ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳುತ್ತಿದ್ದಾರೆ.‌
ನಾವು ಮೋದಿ ಫ್ಯಾನ್. ಅವರ ಫೋಟೋ ಇರುವ ಬಟ್ಟೆಗಳನ್ನ ತೆಗೆದುಕೊಳ್ಳುವುದಕ್ಕೆ ಚಿತ್ರದುರ್ಗ, ಬೆಳಗಾವಿ ಭಾಗದಿಂದ ಬೆಂಗಳೂರಿಗೆ ಬಂದಿದ್ದೀವಿ. ಅವರ ಫೋಟೋ ಇರುವ ವೇಸ್ ಕೋಟ್ ಹಾಕಿ ಕಾರ್ಯಕ್ರಮಗಳಿಗೆ ಹೋಗ್ತಿವಿ.‌ ನಮಗೆ ತುಂಬ ಖುಷಿಯಾಗುತ್ತೆ ಅಂತ ಮೋದಿ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ, ಅಡ್ವಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪತ್ರಕರ್ತ ನಿಖಿಲ್​ ವಾಗ್ಲೆ ಕಾರಿನ ಮೇಲೆ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
