ನವದೆಹಲಿ:ಇತ್ತೀಚಿನ ದಿನಗಳಲ್ಲಿ ಕ್ಲಬ್​ಹೌಸ್ ಆ್ಯಪ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಯಾರಾದರೂ ಯಾರೊಂದಿಗಾದರೂ ಮುಕ್ತವಾಗಿ ಮಾತನಾಡಲು ಅವಕಾಶವಿರುವ ಈ ಆ್ಯಪ್​ ಸಾಕಷ್ಟು ವಿಚಾರಗಳಲ್ಲಿ ಜನತೆಗೆ ಇಷ್ಟವಾಗಿದೆ. ಆದರೆ ಈ ಆ್ಯಪ್​ನಿಂದಾಗಿ ಲಕ್ಷಾಂತರ ಜನರ ಡೇಟಾ ಲೀಕ್​ ಆಗಿದೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ.
ಸೈಬರ್ ಭದ್ರತಾ ತಜ್ಞ ಜಿತೆನ್ ಜೈನ್ ಎನ್ನುವವರು ಈ ವಿಚಾರವಾಗಿ ತಿಳಿಸಿದ್ದಾರೆ. ಕ್ಲಬ್​ಹೌಸ್ ಬಳಸುವವರು ಮಾತ್ರವಲ್ಲ, ಅವರ ಫೋನ್​ನಲ್ಲಿ ಇರುವ ಕಾಂಟಾಕ್ಟ್​ಗಳ ದತ್ತಾಂಶವೂ ಲೀಕ್ ಆಗಿದೆ. ಅದೆಲ್ಲವೂ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕ್ಲಬ್​ಹೌಸ್​ಗೆ ಕಂಟ್ಯಾಕ್ಟ್ ಲಿಸ್ಟ್ ಅಕ್ಸೆಸ್ ಇರುವುದರಿಂದ ಅದರ ಬಳಕೆದಾರರ ಕಾಂಟಾಕ್ಟ್​ನಲ್ಲಿರುವವರಿಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ ಈ ಆರೋಪವನ್ನು ಕ್ಲಬ್​ಹೌಸ್ ಸಂಪೂರ್ಣವಾಗಿ ತಳ್ಳಿ ಹಾಕಿದೆ. ನಾವು ನಮ್ಮ ಗ್ರಾಹಕರ ಸುರಕ್ಷೆತೆಗಾಗಿ ಹೆಚ್ಚಿನ ಗಮನ ನೀಡುತ್ತೇವೆ. ಗ್ರಾಹಕರ ಹೆಸರನ್ನಾಗಲೀ, ಫೋಟೋವನ್ನಾಗಲೀ ಅಥವಾ ಯಾವುದೇ ರೀತಿಯ ದತ್ತಾಂಶವನ್ನು ನಾವು ಸೋರಿಕೆ ಮಾಡುತ್ತಿಲ್ಲ ಎಂದು ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)
ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿಗೆ ಪ್ರಧಾನಿ ಮೆಚ್ಚುಗೆ

ಅಪಘಾತದಿಂದ ನಟಿ ಯಶಿಕಾ ಸ್ಥಿತಿ ಗಂಭೀರ: ಸ್ನೇಹಿತೆಯ ಸಾವು, ಕಾರಿನಲ್ಲಿದ್ರು ಇಬ್ಬರು ಯುವಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
