ನವದೆಹಲಿ:ದೇಶದಲ್ಲಿ ಹೆಚ್ಚೆಚ್ಚು ಜನರಿಗೆ ಕರೊನಾ ಸೋಂಕು ತಗುಲುತ್ತಿದೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಬೆಡ್​ಗಳ ಕೊರತೆ ನೆಪ ಹೇಳಿ, ಕರೊನಾ ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ.
ಅದರಲ್ಲೂ ದೆಹಲಿಯಲ್ಲಿ ಈ ಆರೋಪ ಹೆಚ್ಚಾಗಿಯೇ ಕೇಳಿಬರುತ್ತಿದೆ. ಹಲವು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬೆಡ್​ ಇಲ್ಲ, ವೆಂಟಿಲೇಟರ್​ ಇಲ್ಲವೆಂಬ ನೆಪ ಹೇಳಿ, ಸೋಂಕಿತರನ್ನು ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.ಹೀಗಿರುವಾಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು, ಸಮಸ್ಯೆ ತಮ್ಮ ಗಮನಕ್ಕೆ ಬಂದಿದೆ. ಬೆಡ್​​ಗಳ ವಿಚಾರದಲ್ಲಿ ಬ್ಲ್ಯಾಕ್​ ಮಾರ್ಕೆಟಿಂಗ್​ ಮಾಡುತ್ತಿರುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಇದನ್ನೂ ಓದಿ:VIDEO| ಕ್ವಾರಂಟೈನ್ ಸೀಲ್​ ತಂದ ಫಜೀತಿ: ಮೆಜೆಸ್ಟಿಕ್​ನಲ್ಲಿ ಪರದಾಡಿದ ಯುವತಿ…!
ನಾವು ದೆಹಲಿಯಲ್ಲಿ ಆಸ್ಪತ್ರೆಗಳನ್ನು ಕಟ್ಟಿದ್ದು, ಕಟ್ಟಲು ಅವಕಾಶ ನೀಡಿದ್ದು ಹಣ ಮಾಡಲು ಅಲ್ಲ. ಜನರಿಗೆ ಉತ್ತಮ ಸೇವೆ ನೀಡಲು. ಈ ಕರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳು ರೋಗಿಗಳಿಗೆ ಧನಾತ್ಮಕವಾಗಿ ಸ್ಪಂದಿಸುತ್ತಿವೆ.
ಆದರೆ ಮೂರರಿಂದ ನಾಲ್ಕು ಆಸ್ಪತ್ರೆಗಳು ಬೇರೆ ಪಕ್ಷಗಳ ಖಾತೆಗಳಂತೆ ಕೆಲಸ ಮಾಡುತ್ತಿವೆ. ಕರೊನಾ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅಂತಹ ಆಸ್ಪತ್ರೆಗಳಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ.
ಇತರ ಪಕ್ಷಗಳ ಮುಖಂಡರ ಪ್ರಭಾವವನ್ನು ಬಳಸಿಕೊಂಡು ಆಸ್ಪತ್ರೆ ಬೆಡ್​ಗಳ ಬ್ಲ್ಯಾಕ್​ ಮಾರ್ಕೆಟಿಂಗ್​ ಮಾಡಬಹುದು ಎಂದು ಅವರು ಭಾವಿಸಿಕೊಂಡಿದ್ದರೆ ಅದನ್ನು ಮನಸಿಂದ ತೆಗೆದುಹಾಕಿಬಿಡಿ. ನಿಮ್ಮನ್ನು ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅರವಿಂದ್​ ಕೇಜ್ರಿವಾಲ್​ ಅವರು ಆನ್​ಲೈನ್​ ಸುದ್ದಿಗೋಷ್ಠಿ ಮೂಲಕ ಖಡಕ್​ ವಾರ್ನ್​ ಮಾಡಿದ್ದಾರೆ.ಇದನ್ನೂ ಓದಿ:ಇನ್ನು2-3 ದಿನಗಳಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮಹಾರಾಷ್ಟ್ರ…! ದಾಖಲೆ ಬರೆಯುವತ್ತ ಸಾಗಿದೆ ಈ ರಾಜ್ಯ
ಇವತ್ತಿನವರೆಗೆ ದೆಹಲಿಯ ಯಾವುದೇ ಆಸ್ಪತ್ರೆಗಳಲ್ಲಿ ಬೆಡ್​​ಗಳ ಕೊರತೆ ಉಂಟಾಗಿಲ್ಲ. ಒಟ್ಟು 8,645 ಬೆಡ್​ಗಳಿವೆ. ಅದರಲ್ಲಿ 4,038ರಲ್ಲಿ ರೋಗಿಗಳು ತುಂಬಿದ್ದಾರೆ. ಉಳಿದ 4607 ಬೆಡ್​ಗಳು ಖಾಲಿ ಇವೆ. ಖಾಲಿ ಬೆಡ್​ಗಳನ್ನು ಹೊಂದಿರುವ ಆಸ್ಪತ್ರೆಗಳು, ಅದರಲ್ಲೂ ಖಾಸಗಿ ಆಸ್ಪತ್ರೆಗಳು ಕೊವಿಡ್​-19 ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಇನ್ನು ಸ್ವಲ್ಪ ದಿನಗಳಲ್ಲಿ ಇಂಥದ್ದಕ್ಕೆಲ್ಲ ಇತಿಶ್ರೀ ಹಾಡುತ್ತೇವೆ ಎಂದು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಬೆಡ್​ಗಳ ಬ್ಲ್ಯಾಕ್​ ಮಾರ್ಕೆಟಿಂಗ್​ ತಡೆಗಟ್ಟುವ ಸಲುವಾಗಿ ದೆಹಲಿ ಸರ್ಕಾರ ಮೊಬೈಲ್​ ಆ್ಯಪ್​ ಬಿಡುಗಡೆ ಮಾಡಿದೆ. ಅದರಲ್ಲಿ ಎಲ್ಲ ಆಸ್ಪತ್ರೆಗಳೂ ತಮ್ಮಲ್ಲಿರುವ ಸೌಕರ್ಯದ ಬಗ್ಗೆ ಮಾಹಿತಿಯನ್ನು ಅಪ್​​ಡೇಟ್​ ಮಾಡಬೇಕು. ದಿನದಲ್ಲಿ ಎರಡು ಬಾರಿ, ಅಂದರೆ ಬೆಳಗ್ಗೆ ಮತ್ತು ಸಂಜೆ ಅಪ್ಲೋಡ್ ಮಾಡಿ, ಪಾರದರ್ಶಕವಾಗಿರಬೇಕು ಎಂದಿದ್ದಾರೆ (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
