ಪಂಜಾಬ್:ಯಾರಾದ್ರೂ ನಿಮ್ಮ ಹತ್ತಿರ ಲಂಚ ಕೇಳಿದಾಗ ಇಲ್ಲ ಎಂದು ಹೇಳಬೇಡಿ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸಾರ್ವಜನಿಕರಿಗೆ ಒಂದು ಉಪಾಯ ಹೇಳಿದ್ದಾರೆ.
ಪಂಜಾಬ್​​ನಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಭಗವಂತ್ ಮಾನ್​ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭ್ರಷ್ಟಾಚಾರ ತಡೆ ಸಂಬಂಧ ಸಹಾಯವಾಣಿ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಕೂಡಾ ಮಾತನಾಡಿದ್ದಾರೆ.
ಲಂಚ ಕೇಳುವರಿಗೆ ಇಲ್ಲ ಎನ್ನದೆ ಹಣ ನೀಡಿ, ಅವರಿಗೆ ಹಣ ನೀಡಿದ ಸಂಭಾಷಣೆ ಅಥವಾ ಅದರ ರೆಕಾರ್ಡ್ ಮಾಡಿಕೊಳ್ಳಿ. ಬಳಿಕ, ಆಡಿಯೋ/ವಿಡಿಯೋ ವನ್ನು ನೇರವಾಗಿ ಸಿಎಂ ಅವರ ವಾಟ್ಸಾಪ್​ ಸಂಖ್ಯೆಗೆ ರವಾನಿಸಿ ಎಂದಿದ್ದಾರೆ. ಭ್ರಷ್ಟರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಂಜಾಬ್​ ಜನತೆಗೆ ನಾವು ಭರವಸೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಿನಿಂದಲೂ ಭಗವಂತ್ ಮಾನ್ ಜನಸ್ನೇಹಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಮಾರ್ಚ್​​ 23ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್​​ ಸಿಂಗ್​ ‘ಶಹೀದ್ ದಿವಸ್’​​ ಅಂಗವಾಗಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸುವುದಾಗಿ ಮಾನ್​ ಘೋಷಣೆ ಮಾಡಿದ್ದಾರೆ.
‘2021 ವಿಶ್ವ ಸುಂದರಿ’ ಕಿರೀಟಕ್ಕೆ ಮುತ್ತಿಟ್ಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eighteen =
Remember me
