ಜೈಪುರ: ರಾಜಸ್ಥಾನ ರಾಜಕೀಯ ಬೆಳವಣಿಗೆ ಬಹಳಷ್ಟು ಕುತೂಹಲ ಕೆರಳಿಸಿದ್ದು, ಸಚಿನ್ ಪೈಲಟ್ ಬಣದ ಅನರ್ಹತೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ನಿರ್ಣಯವಾಗಲು ಇನ್ನೂ ಕೆಲವು ದಿನಗಳಿವೆ. ಏತನ್ಮಧ್ಯೆ ದಿನದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಅಶೋಕ್​ ಗೆಹ್ಲೋಟ್ ತಮ್ಮ ಬಲ ಪ್ರದರ್ಶನಕ್ಕೆ ಹೊರಟಿದ್ದು, ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನ ತಲುಪಿದ್ದಾರೆ.
ತಮ್ಮ ಜತೆಗಿರುವ ಶಾಸಕರನ್ನು ಪರೇಡ್ ಮಾಡಿಸಿ ತಮಗೆ ಬಹುಮತವಿದೆ ಎಂಬುದನ್ನು ಸಾಬೀತು ಮಾಡಲು ತೆರಳಿದ್ದಾರೆ. ಅಲ್ಲದೆ, ವಿಶ್ವಾಸ ಮತ ಸಾಬೀತುಪಡಿಸಲು ವಿಶೇಷ ಅಧಿವೇಶನಕ್ಕೂ ಅವಕಾಶ ನೀಡುವಂತೆ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಕೋರಿದ್ದಾರೆ. ಈ ಬಗ್ಗೆ ರಾಜ್ಯಪಾಲರು ಇನ್ನೂ ತೀರ್ಮಾನ ಪ್ರಕಟಿಸಿಲ್ಲ.
ಇದನ್ನೂ ಓದಿ:ಸಚಿನ್ ಪೈಲಟ್​ ಅನರ್ಹತೆ ಪ್ರಕರಣ: ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ
ಇದಕ್ಕೂ ಮುನ್ನ ಜೈಪುರದ ಹೋಟೆಲ್ ಫೇರ್​ಮೋಂಟ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿರಿಯ ನಾಯಕ ಅಜೆಯ್ ಮಾಕೆನ್ ಜತೆಗಿದ್ದರು. ಈ ಸಭೆಯ ಬಳಿಕ ರಾಜ್ಯಪಾಲರ ಬಳಿಗೆ ತೆರಳುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಅಲ್ಲದೆ, ವಿಧಾನಸಭೆ ಅಧಿವೇಶನ ನಡೆಸುವುದಕ್ಕೆ ಅನುಮತಿ ನೀಡದೇ ಹೋದರೆ ದೇಶಾದ್ಯಂತ ಇರುವ ಜನ ಬಂದು ರಾಜಭವನಕ್ಕೆ ಮುತ್ತಿಗೆ ಹಾಕಿದರೆ ಮುಂದಾಗುವ ಯಾವುದೇ ಪರಿಣಾಮಕ್ಕೂ ತಾವು ಹೊಣೆಗಾರರಲ್ಲ ಎಂದು ಎಚ್ಚರಿಸಿದ ಘಟನೆಯೂ ನಡೆಯಿತು. (ಏಜೆನ್ಸೀಸ್)
#WATCH: "We are going to the Governor to request him to not come under pressure (and call Assembly session)… varna fir ho sakta hai ki pure pradesh ki janta agar Raj Bhawan ko gherne ke liye aagai, to hamari zimmedari nahi hogi," says Rajasthan CM Ashok Gehlothttps://t.co/2UaH94tTrBpic.twitter.com/ODEq7PZGei
— ANI (@ANI)July 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
