ಜೈಪುರ:ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್​ ನಡುವಿನ ವಿರೋಧ ಮುಂದುವರಿದಿದೆ.ಇಂದು ಸುದ್ದಿಗೋಷ್ಠಿ ನಡೆಸಿದ ಅಶೋಕ್​ ಗೆಹ್ಲೋಟ್​ ಅವರು, ಸಚಿನ್​ ಪೈಲಟ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸಚಿನ್​ ಪೈಲಟ್​ರನ್ನು ರಾಜಸ್ಥಾನದ ಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರಿಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದ್ದರೂ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬ ಯೂಸ್​​ಲೆಸ್​ ಎಂದು ಅಶೋಕ್​ ಗೆಹ್ಲೋಟ್​ ಖಾರವಾಗಿ ಆರೋಪಿಸಿದ್ದಾರೆ.
ಸಚಿನ್​ ಪೈಲಟ್​ ಆಟವಾಡಿದ್ದಾರೆ. ಈ ಸರ್ಕಾರವನ್ನು ಕೆಡವಲು ಪಿತೂರಿ ನಡೆಯುತ್ತಿದೆ. ಅವರ ಮುಖದಲ್ಲಿ ಮುಗ್ಧತೆ ಕಾಣಬಹುದು..ಅವರು ಇಂಗ್ಲಿಷ್​, ಹಿಂದಿ ಭಾಷೆಗಳನ್ನು ಚೆನ್ನಾಗಿ ಮಾತನಾಡಬಹುದು. ಮಾಧ್ಯಮದವರನ್ನೂ ಮರುಳು ಮಾಡಬಹುದು. ಆದರೆ ಈ ರಾಜ್ಯಕ್ಕೇನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್​ಎಸ್​ ನಿಮಿಟ್ಸ್​
ಪಕ್ಷಕ್ಕಾಗಿ ನೀವೆಷ್ಟು ಕೆಲಸ ಮಾಡಿದಿರಿ? ಏನು ಮಾಡುತ್ತಿದ್ದೀರಿ ಎಂದು ಒಂದು ದಿನಕ್ಕೂ ನಾವ್ಯಾರೂ ಸಚಿನ್​ ಅವರನ್ನು ಪ್ರಶ್ನಿಸಿರಲಿಲ್ಲ. ಕಳೆದ ಏಳುವರ್ಷಗಳಿಂದ ಸಚಿನ್​ ಪೈಲಟ್​ ಅವರು ರಾಜ್ಯದ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು. ಒಂದು ದಿನವೂ ಕಿರಿಯರಾಗಲಿ, ಹಿರಿಯ ಮುಖಂಡರಾಗಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಅಪಸ್ವರ ಎತ್ತಲಿಲ್ಲ. ಅವರಿಗೆ ಎಲ್ಲರೂ ಬೆಂಬಲ ನೀಡುತ್ತಲೇ ಬಂದಿದ್ದೆವು. ಆದರೂ ಪಕ್ಷವನ್ನು ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)
ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + six =
Remember me
