ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಜನ್ಮದಿನ ಸಂಭ್ರಮ (ಜನನ: 1950, ಸೆ.17). ಗುಜರಾತ್ ಮುಖ್ಯಮಂತ್ರಿಯಾಗಿ ದೀರ್ಘಕಾಲ ಆಡಳಿತ ನಡೆಸಿದ ಅವರು, ನಂತರದಲ್ಲಿ ಪ್ರಧಾನಿ ಹುದ್ದೆಗೇರಿದರು. 2019ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಪಡೆಯುವುದರೊಂದಿಗೆ ಮೋದಿ ಎರಡನೇ ಬಾರಿಗೆ ಪ್ರಧಾನಿಯಾದರು. ಮೋದಿಯವರ ವಿಶಿಷ್ಟ ಪರಿಕಲ್ಪನೆಗಳು, ಜನರೊಂದಿಗೆ ಸಂವಾದಿಸುವ ಅವರ ಮನೋಭೂಮಿಕೆಯನ್ನು ಕಟ್ಟಿಕೊಡುವ ಬರಹಗಳು ಇಲ್ಲಿವೆ.
|ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಜನ್ಮದಿನದ ಹಾರ್ದಿಕ ಶುಭಾಶಯಗಳು!
ಖ್ಯಾತ ಸಂಗೀತಗಾರ್ತಿ ಸುಧಾ ರಘುನಾಥನ್ ಅವರು ವಿಮಾನ ನಿಲ್ದಾಣದಲ್ಲಿ ತಮಗಾದ ಅಚ್ಚರಿ ಮತ್ತು ಸಂತಸವನ್ನು ಇತ್ತೀಚೆಗೆ ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದನ್ನು ಗಮನಿಸಿದೆ. ಅವರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕಲಾವಿದೆ. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಅದೇ ಮೊದಲ ಬಾರಿ ಅವರ ಹೆಸರನ್ನು ಕೇಳಿರಲೂ ಸಾಕು. ಆದರೆ, ಆ ಅಧಿಕಾರಿ ಈ ಖ್ಯಾತ ಕಲಾವಿದೆಯನ್ನು ಗುರ್ತಿಸುವಂತಾಗಿದ್ದು ಅವರಿಗೆ ಸಂದ ಪದ್ಮಭೂಷಣ ಪ್ರಶಸ್ತಿಯಿಂದ. ಹೀಗೆ ಇಂತಹ ಪ್ರತಿಷಿ ್ಠ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಿ ಪ್ರಶಸ್ತಿ ಪುರಸ್ಕೃತರಿಗೂ ಸಲ್ಲಬೇಕಾದ ಗೌರವವನ್ನು ಸಲ್ಲಿಸುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇಂದು ಇಡೀ ದೇಶದ ಜನರು ಹೆಮ್ಮೆಪಡುತ್ತಿದ್ದಾರೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ.
ಸಾಧಕರಿಗೆ ಟಾನಿಕ್:ಮೋದಿ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದು ಬಿಜೆಪಿ ಕಾರ್ಯಕರ್ತರು ಮಾತ್ರ ಹೇಳುವ ಮಾತಾಗಿ ಉಳಿದಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇಂತಹ ಒಂದಲ್ಲ ಒಂದು ಅನುಭವವಾಗುವಂತೆ ಮೋದಿ ತಮ್ಮ ನೀತಿ-ನಿಲುವು ಮತ್ತು ನಡವಳಿಕೆಯಲ್ಲಿ ವರ್ತಿಸಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೊಷಣೆ ಬರೀ ಪ್ರಾಸಬದ್ಧ ಮಾತಾಗಿ ಉಳಿದಿಲ್ಲ. ಮೋದಿಯವರು ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಹಂಚಿಕೊಳ್ಳುವ ಬಹುತೇಕ ವಿಷಯಗಳು ದೇಶದ ಯಾವುದೋ ಮೂಲೆಯಲ್ಲಿ ಪ್ರಚಾರವಿಲ್ಲದೇ ತಪಸ್ಸಿನಂತೆ ಸಾಧನೆಯಲ್ಲಿ ತೊಡಗಿರುವವರನ್ನು ಗುರ್ತಿಸುವ ಜೊತೆಗೆ ಅದೆಷ್ಟೋ ಎಲೆಮರೆಯ ಕಾಯಿಯಂತಿರುವ ಸಾಧಕರಿಗೆ ನೀಡಿದ ಟಾನಿಕ್​ನಂತೆ ಪ್ರಭಾವ ಬೀರುತ್ತಿದೆ.
ಖಾದಿಗೆ ಮೆರುಗು!:ಮೋದಿಯವರು ಕಳೆದ ಆಗಸ್ಟ್​ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಧ್ವಜವನ್ನು ಮನೆಗಳ ಮೇಲೆ ಹಾರಿಸುವಂತೆ ಜನತೆಗೆ ಕರೆ ನೀಡಿದ್ದನ್ನೇ ಗಮನಿಸಿ! ಕೋಟ್ಯಂತರ ಮಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವುದು ಅತ್ಯಂತ ಸಂಭ್ರಮದ ಸಂಗತಿಯಾಯಿತು. ಜೊತೆಗೆ ಖಾದಿಯಿಂದ ತಯಾರಿಸಿದ ಧ್ವಜಗಳನ್ನು ಖರೀದಿಸುವಂತೆ ಜನರಿಗೆ ನೀಡಿದ ಪೋ›ತ್ಸಾಹದಿಂದ ಖಾದಿ ಉತ್ಪಾದಕರ ಜೀವನಮಟ್ಟ ಸುಧಾರಣೆಗೂ ದಾರಿಯಾಯಿತು. ಹೀಗೆ ಯಾವುದೇ ನಿರ್ಧಾರ ಕೈಗೊಂಡರೂ ಅಂತಿಮವಾಗಿ ಅದರ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು ಎನ್ನುವ ಮೋದಿಯವರ ಚಿಂತನೆ ಆಡಳಿತದ ಹೊಸ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ.
ಏರುಮುಖದಲ್ಲಿ ಆರ್ಥಿಕತೆ:ಸತತ ಎರಡು ವರ್ಷಗಳ ಕೋವಿಡ್ ಹೊಡೆತದ ಹೊರತಾಗಿಯೂ ದೇಶದ ಆರ್ಥಿಕತೆ ಯದ್ವಾತದ್ವ ಹಾನಿಗೆ ಒಳಗಾಗಲಿಲ್ಲ್ಲ ಎಂದರೆ ಯಾವುದೋ ಪವಾಡ ನಡೆದಿಲ್ಲವಷ್ಟೇ? ಕೆಲವು ರಾಷ್ಟ್ರಗಳು ಆರ್ಥಿಕ ಹೊಡೆತದಿಂದ ಸುಧಾರಿಸಲಾಗದಷ್ಟು ನೆಲಕಚ್ಚಿವೆ. ಆದರೆ ಭಾರತದ ಆರ್ಥಿಕತೆಯು ತಾತ್ಕಾಲಿಕ ಹಿನ್ನಡೆಯ ನಂತರ ಪುಟಿದೇಳುವ ಹುರುಪನ್ನು ತೋರಿರುವುದು ಸಾಮಾನ್ಯ ಸಾಧನೆಯಲ್ಲ. ಈಗಿನ ಅಧ್ಯಯನದ ಪ್ರಕಾರ, 2023ರಲ್ಲಿ ಭಾರತದ ಆರ್ಥಿಕತೆಯು ಇಡೀ ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ದಾಖಲಿಸಲಿದೆ. ಕೋವಿಡ್ ನಂತರದ ಆರ್ಥಿಕ ನೋಟವು ಆಶಾದಾಯಕವಾಗಿ ಉಳಿಯುವಂತೆ ಮಾಡಿದ್ದು ಮೋದಿಯವರ ಮುತ್ಸದ್ದಿತನದ ಆಡಳಿತ ಎಂದು ಘಂಟಾಘೋಷವಾಗಿ ಹೇಳಬಹುದು.
ದೂರಾದ ಜನರ ಸಿನಿಕತನ:ಒಂದೆಡೆ ದೇಶದ ಜನರಲ್ಲಿದ್ದ ಸಿನಿಕತನದ ಭಾವವನ್ನು ದೂರ ಮಾಡಿ ಪ್ರಜಾತಂತ್ರ ರಾಷ್ಟ್ರಕ್ಕೆ ಇರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವೂ ಇದೆ ಎನ್ನುವ ನಂಬಿಕೆ ಮೂಡಿಸುತ್ತಾ ಮತ್ತೊಂದೆಡೆ, ಎಲ ್ಲ ಸಹಕಾರದಿಂದ ನಾವು ಸವಾಲನ್ನು ಒಟ್ಟಾಗಿ ಎದುರಿಸಬಲ್ಲೆವು ಎನ್ನುವ ವಿಶ್ವಾಸವನ್ನು ಜನರಲ್ಲೂ ಮೂಡುವಂತೆ ಮಾಡಿದ ಖ್ಯಾತಿ ಮೋದಿಯವರದು. ಹೀಗಾಗಿ ವಿಶ್ವದ ಅನೇಕ ರಾಷ್ಟ್ರಗಳು ತಮ್ಮಲ್ಲಿನ ಸವಾಲುಗಳಿಗೆ ಮೋದಿಯವರಲ್ಲಿ ಪರಿಹಾರ ಸಿಗುವ ನಿರೀಕ್ಷೆಯಲ್ಲಿವೆ. ಇದು ಮೋದಿಯವರ ಕರ್ತವ್ಯನಿಷ್ಠೆ ಮತ್ತು ದೇಶ ಕಾರ್ಯದಲ್ಲಿ ಅವಿರತ ಶ್ರಮಿಸುವ ಮನೋಭಾವದಿಂದಾಗಿ ಗಳಿಸಿದ ನಂಬಿಕೆ. ಓರ್ವ ನೇತಾರ ಶ್ರಮಿಸಿದರೆ ಹೇಗೆ ಇಡೀ ವಿಶ್ವವನ್ನು ಭಾರತದತ್ತ ಸೆಳೆಯಬಹುದು ಎನ್ನುವುದನ್ನು ಮೋದಿ ಪ್ರದರ್ಶಿಸಿದ್ದಾರೆ. ಇನ್ನು ಇಡೀ ದೇಶದ ಜನರು ಮೋದಿಯವರಿಗೆ ಸಾಥ್ ನೀಡಿದರೆ ದೇಶದ ಪ್ರತಿಷ್ಠೆ ಎಷ್ಟು ಎತ್ತರಕ್ಕೆ ಏರಬಹುದು ಊಹಿಸಿಕೊಳ್ಳಿ!
ಸಮಾಜದ ಎಲ್ಲಾ ಸ್ತರದ ಜನರಿಗೂ ಈ ಸರ್ಕಾರ ತಮಗಾಗಿ ಅಸ್ತಿತ್ವದಲ್ಲಿದೆ ಎನ್ನುವ ನಂಬಿಕೆಯನ್ನು ದೃಢಗೊಳಿಸಿದ್ದು ಮೋದಿಯವರು. ಬರೀ ಘೋಷಣೆಯಿಂದ ಸಮಾಜದಲ್ಲಿನ ಬಡತನವನ್ನು ನಿವಾರಿಸುವುದು ಸಾಧ್ಯವಾಗದು ಎನ್ನುವ ಸ್ಪಷ್ಟತೆ ಅವರಿಗಿದೆ. ಆದ್ದರಿಂದ ಸರ್ಕಾರದ ಯೋಜನೆ ರೂಪಿಸುವಾಗಲೇ ಅದರ ಫಲಾನುಭವಿಗಳು ಯಾರು ಎನ್ನುವುದನ್ನು ಗುರ್ತಿಸುವುದು ಹಾಗೂ ಫಲಾನುಭವಿ ಹೆಸರಲ್ಲಿ ಬೇರೆಯವರು ಅದರ ದುರ್ಲಾಭ ಪಡೆಯದಂತೆ ಮಾಡುವುದು ಮುಖ್ಯ ಎಂದು ಅವರು ಯೋಚಿಸಿದರು. ಅದರ ಫಲವಾಗಿ ಸರ್ಕಾರಿ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನ ದೊರೆಯುವಂತೆ ಮಾಡುವ ವ್ಯವಸ್ಥೆ (ಡಿಬಿಟಿ) ಜಾರಿಗೆ ಬಂತು. ಇದರ ಪರಿಣಾಮವಾಗಿ ಸರ್ಕಾರದ ಕೋಟ್ಯಂತರ ರೂಪಾಯಿಗಳ ಉಳಿತಾಯ ಸಾಧ್ಯವಾಗಿದೆ. ಈ ಹಣ ಮತ್ತದೇ ಕಲ್ಯಾಣ ಕಾರ್ಯಗಳಿಗೆ ಸದ್ಬಳಕೆ ಸಾಧ್ಯವಾಗುವಂತೆ ಮಾಡಿದ ಮೋದಿಯವರ ಆಡಳಿತಕ್ಕೆ ಮೆಚ್ಚುಗೆ ಸೂಚಿಸದೇ ಇರಲು ಸಾಧ್ಯವೇ?
ಕೊಡುಗೆ ನೀಡೋಣ:ಮೋದಿಯವರ ಜನ್ಮದಿನದ ಸಂದರ್ಭದಲಿ ್ಲ ದೇಶಾದ್ಯಂತ ಹಮ್ಮಿಕೊಂಡಿರುವ ಸೇವಾಕಾರ್ಯಗಳಲ್ಲಿ ಎಲ್ಲರನ್ನೂ ತೊಡಗಿಸೋಣ; ಅವರ ಜನ್ಮದಿನದ ದ್ಯೋತಕವಾಗಿ ಸಮಾಜಕ್ಕೆ ನಾವೆಲ್ಲರೂ ಸೇರಿ ಕೊಡುಗೆ ನೀಡೋಣ.
ಯಶಸ್ವಿ ನಾಯಕತ್ವ:ದೇಶ ಸ್ವಾತಂತ್ರ್ಯ ಗಳಿಸಿ 75 ವರ್ಷಗಳ ನಂತರವಾದರೂ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ದಿನಗಳು ನಿಶ್ಚಿತವಾಗಿಯೂ ನಮಗಿದೆ ಎನ್ನುವ ಭರವಸೆಯನ್ನು ಜನರಲ್ಲಿ ಮೂಡಿಸಿದ ಯಶಸ್ವಿ ನಾಯಕತ್ವ ಮೋದಿ ಯವರದು. ಆದ್ದರಿಂದಲೇ ಇಂದು ಇಡೀ ವಿಶ್ವ ಭಾರತದತ್ತ ನೋಡುವಂತಾಗಿದೆ. ದೇಶದ ನಾಯಕತ್ವವು ದಕ್ಷತೆಯಿಂದ ಕಾರ್ಯಮಗ್ನವಾದರೆ ಎಂತಹ ಸವಾಲಿಗೂ ಸೆಡ್ಡು ಹೊಡೆಯಬಹುದು ಎನ್ನುವುದನ್ನು ಮೋದಿಯವರು ಕೋವಿಡ್ ಸಂದರ್ಭದಲ್ಲಿ ಜಗತ್ತಿಗೇ ತೋರಿಸಿಕೊಟ್ಟರು. ಕೋವಿಡ್ ಲಸಿಕೆಯನ್ನು ದೇಶೀಯವಾಗಿ ತಯಾರಿಸಲು ಉತ್ತೇಜನ ನೀಡಿದ್ದಷ್ಟೇ ಅಲ್ಲ; 100ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಲಸಿಕೆ ಗುಣಮಟ್ಟಕ್ಕೆ ತಲೆಬಾಗುವಂತೆ ಮಾಡಿದರು. ಇದು ನಮ್ಮ ಹೆಮ್ಮೆಯ ಪ್ರಧಾನಿ ವಿಶ್ವಕ್ಕೆ ನೀಡಿದ ಅಪೂರ್ವ ಕೊಡುಗೆ.
ಅಭಿವೃದ್ಧಿ ಮಾದರಿ:ಅಭಿವೃದ್ಧಿ ವಿಚಾರಕ್ಕೆ ಬಂದರೆ, ರಾಜ್ಯಗಳ ಏಳಿಗೆಯಲ್ಲೇ ದೇಶದ ಏಳಿಗೆ ಸಾಧ್ಯ ಎನ್ನುವುದರಲ್ಲಿ ಭರವಸೆ ಇಟ್ಟವರು ಮೋದಿ. ಹೀಗಾಗಿ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರಗಳು ಹೇಗೆ ಅಭಿವೃದ್ಧಿಗೆ ವೇಗ ನೀಡಬಹುದು ಎನ್ನುವುದನ್ನು ಪ್ರತ್ಯಕ್ಷ ಸಾಧಿಸಿದ್ದಾರೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಅಭಿವೃದ್ಧಿಯ ಪಥದಲಿ ್ಲ ವೇಗ ವಾಗಿ ಸಾಗುವ ವಾತಾವರಣ ಸೃಷ್ಟಿಯಾ ಗಿದೆ. ಅನುದಾನ ನೀಡಿಕೆಯಲ್ಲಿ ನ್ಯಾಯ ಒದಗಿಸುವ ಜತೆಗೆ ಪ್ರಧಾನಿಯವರು ಅನುದಾನದ ಸಂಪೂರ್ಣ ಸದ್ಬಳಕೆ ಖಾತ್ರಿ ಪಡಿಸಿಕೊಳ್ಳುವ ವ್ಯವಸ್ಥೆಗೆ ಚಾಲನೆ ನೀಡಿರುವುದು ಗಮನಾರ್ಹ.
ಅಂತಃಸತ್ವ, ಛಲದ ಫಲ:ಮೋದಿ ಅವರಿಗೆ ಇಂತಹ ಆಡಳಿತ ವನ್ನು ಕಲ್ಪಿಸಿಕೊಳ್ಳುವುದು ಹೇಗೆ ಸಾಧ್ಯವಾಯಿತು ಎನ್ನುವ ಕುತೂಹಲ ಎಲ್ಲರಂತೆಯೇ ನನಗೂ ಇದೆ. ಆದರೆ, ಗುಜರಾತಿನ ಮುಖ್ಯಮಂತ್ರಿಯಾಗಿ ಗಳಿಸಿದ ಅನುಭವವು ಅವರಿಗೆ ಪ್ರಧಾನಿ ಹುದ್ದೆಯನ್ನು ದಕ್ಷತೆಯಿಂದ ನಿಭಾಯಿಸುವ ಶಕ್ತಿಯನ್ನು ನೀಡಿದೆ ಎನ್ನುವುದು ನನ್ನ ದೃಢವಾದ ನಂಬಿಕೆ. ಅವರಲಿ ್ಲ ಅಂತಃಸತ್ವ, ಸಾಧಿಸುವ ಛಲವು ಅವರನ್ನು ಹತ್ತಿರದಿಂದ ಗಮನಿಸುವ ಯಾರಿಗಾದರೂ ಸ್ಪೂರ್ತಿ ತುಂಬಬಲ್ಲದು. ಅವರ ದೂರದರ್ಶಿತ್ವದ ಚಿಂತನೆಯನ್ನು ಅನುಸರಿಸಿದರೆ ಅವರಂತೆಯೇ ಆದರ್ಶ ಆಡಳಿತವನ್ನು ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಬಹುದು ಎನ್ನುವ ನಂಬಿಕೆ ನನ್ನದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
