ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಾತ್ರವಲ್ಲ, ನಾಳೆ ಅವರು ಅಮಿತ್​ ಷಾ, ರಾಜನಾಥ್ ಸಿಂಗ್​ ಅವರಲ್ಲದೆ ಕೇಂದ್ರದ ಇತರ ಕೆಲವು ಸಚಿವರನ್ನೂ ಭೇಟಿಯಾಗಲಿರುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ರಾಷ್ಟ್ರಮಟ್ಟದಲ್ಲಿ ಕುತೂಹಲ ಕೆರಳಿಸಿದೆ.
ಪ್ರಧಾನಿಯವರನ್ನು ಭೇಟಿಯಾಗಿ ಹೊರಬಂದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಏನು ಚರ್ಚೆ ಮಾಡಿದ್ದೇನೆ ಎಂಬುದಾಗಿ ನಾಳೆ ಹೇಳುವುದಾಗಿ ಎನ್ನುವ ಮೂಲಕ ಮಾತುಕತೆಯ ಕುರಿತು ಮತ್ತಷ್ಟು ಕೌತುಕ ಉಂಟಾಗುವಂತೆ ಮಾಡಿದ್ದಾರೆ. ಕರ್ನಾಟಕದ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದಷ್ಟೇ ಹೇಳಿದ ಅವರು, ಇವತ್ತು ಕೆಲವು ಕೇಂದ್ರ ಸಚಿವರು ಕರ್ನಾಟಕ ಭವನಕ್ಕೆ ಬರುತ್ತಾರೆ, ಅವರೊಂದಿಗೂ ಮಾತುಕತೆ ನಡೆಸುತ್ತೇನೆ. ಆರು ತಿಂಗಳ ಬಳಿಕ ದೆಹಲಿಗೆ ಬಂದಿದ್ದೇನೆ, ಹೊಸ ಸಚಿವರನ್ನು ಊಟಕ್ಕಾಗಿ ಕರ್ನಾಟಕ ಭವನಕ್ಕೆ ಕರೆದಿದ್ದೇನೆ ಎಂದರು.
ಇದನ್ನೂ ಓದಿ:ಏಸ್​ ವಾಹನ, ಗೂಡ್ಸ್​ ವೆಹಿಕಲ್​ ಮಧ್ಯೆ ಅಪಘಾತ: ಮೂವರು ಸ್ಥಳದಲ್ಲೇ ಸಾವು..
ಇನ್ನು ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ, ನೀವೇ ಹೇಳಬೇಕು ಎಂದು ನಕ್ಕು ಸುಮ್ಮನಾದರು. ಮೇಕೆದಾಟು ವಿಚಾರವಾಗಿ ಮಾತನಾಡಲಿರುವುದಾಗಿ ಪಿಎಂ ಭೇಟಿಗೂ ಮೊದಲೇ ಹೇಳಿದ್ದ ಬಿಎಸ್​ವೈ, ನಾಳೆ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಬಹುದು ಎಂಬ ನಿರೀಕ್ಷೆಯೂ ಉಂಟಾಗಿದೆ.
ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್​ಗೆ ಕಳಿಸಿ…

ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿದೆ ವ್ಯಾಪಾರ-ವಹಿವಾಟು ಅವಕಾಶ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + 16 =
Remember me
