ಅಮರಾವತಿ:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯವಾಡ ಮತ್ತು ಅಮರಾವತಿ ಪ್ರದೇಶಗಳು ಜಲಾವೃತವಾಗಿವೆ.
ಇದನ್ನೂ ಓದಿ:ಮತ್ತೆ ಟ್ರೋಲ್ ಆದ ಪಾಕ್​ ತಂಡ! ಟೆಸ್ಟ್‌ನಲ್ಲಿ ಬಾಂಗ್ಲಾ ವಿರುದ್ಧ ಪ್ರದರ್ಶನ ಹೀಗಿತ್ತು ನೋಡಿ..
ಪ್ರವಾಹದ ತೀವ್ರತೆ ಹೆಚ್ಚಾದ ಪರಿಣಾಮ ಸಾವು, ನೋವು ಕಂಡುಬರುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಜೆಸಿಬಿಯಲ್ಲಿ ತೆರಳಿ ಜನರ ಕಷ್ಟ ಆಲಿಸಿ, ಅಧಿಕಾರಿಗಳಿಗೆ ಸ್ಥಳದಲ್ಲೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಂತೆ ಸೂಚಿಸಿದರು.
ಭಾರೀ ಮಳೆಯಿಂದಾಗಿ ವಿಜಯವಾಡ ಬಹುತೇಕ ಮುಳುಗಡೆಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಕಾಶಂ ಬ್ಯಾರೇಜ್ ಮತ್ತು ಕರಾವಳಿಯ ತಗ್ಗು ಪ್ರದೇಶಗಳು ಪ್ರವಾಹದಿಂದ ಆವೃತವಾಗಿವೆ.
ಜಕ್ಕಂಪುಡಿ, ಯನಮಲಕುದೂರು, ಪಡಮಟ, ರಾಮಲಿಂಗೇಶ್ವರ ನಗರ, ಭವಾನಿಪುರ ಮತ್ತಿತರ ಭಾಗಗಳು ಸಂಪೂರ್ಣ ಜಲಾವೃತವಾಗಿದೆ. ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ರಸ್ತೆಗಳಲ್ಲಿ 8-10 ಅಡಿ ರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಚಂದ್ರಬಾಬು ಯನಮಲಕುದೂರು, ಪಡಮಟ ಪ್ರದೇಶಗಳಿಗೆ ಭೇಟಿ ನೀಡಿದ್ದರು. ರಾಮಲಿಂಗೇಶ್ವರನಗರ, ಜಕ್ಕಂಪುಡಿ ಹಾಗೂ ಭವಾನಿಪುರದಲ್ಲಿ ಪ್ರವಾಹ ಸಂತ್ರಸ್ತರನ್ನು ಜೆಸಿಬಿ ಮೇಲೇರಿ ಭೇಟಿ ಮಾಡಿದ್ದು, ಗಮನ ಸೆಳೆಯಿತು.
ಬಳಿಕ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸೇರಿದ ಪವರ್ ಬೋಟ್‌ನಲ್ಲಿ ಸಂತ್ರಸ್ತರ ಕಷ್ಟ ಕೇಳಲು ಆಗಮಿಸಿದರು. ಇನ್ನೂ ಕೆಲವೆಡೆ ಮೊಣಕಾಲುದ್ದದ ನೀರಿನಲ್ಲಿ ನಡೆದೇ ಹೋಗಿ ಸಂತ್ರಸ್ತರ ಭೇಟಿಯಾದರು.
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ..ಪರಿಷ್ಕರಿಸಿದ ದರ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
