ತೆಲಂಗಾಣ:ಕೊವಿಡ್​-19 ಸೋಂಕಿಗೆ ಒಳಗಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಪತ್ರಕರ್ತನಿಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರ ಪುತ್ರಿ ಕೆ.ಕವಿತಾ ಸಹಾಯ ಮಾಡಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ಕೊವಿಡ್​-19 ಸೋಂಕಿಗೆ ಒಳಗಾಗಿದ್ದ. ತೆಲಂಗಾಣದ ಜಂಗಾಂವ್ ಜಿಲ್ಲೆಯ ಮಚುಪಹಾದ್ ಗ್ರಾಮದ ನಿವಾಸಿ ಈತ. ಪತ್ರಕರ್ತನಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಮನೆಯವರನ್ನೆಲ್ಲ ಐಸೋಲೇಟ್​ ಮಾಡಲಾಗಿತ್ತು. ಆ ಊರಿನವರಂತೂ ಪತ್ರಕರ್ತನ ಮನೆಯ ಬಳಿಯೂ ಸುಳಿಯುತ್ತಿರಲಿಲ್ಲ. ಹೊರಗಿನವರಿಗೂ ಅಲ್ಲಿಗೆ ಪ್ರವೇಶ ನಿಷೇಧಿಸಿದ್ದರು. ಇದರಿಂದ ಪತ್ರಕರ್ತನ ಕುಟುಂಬದವರಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದೂ ಕಷ್ಟವಾಗಿತ್ತು.
ಬೇರೆ ಏನೂ ತೋಚದ ಪತ್ರಕರ್ತ ಟ್ವಿಟರ್​ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದು. ಹಾಗೇ ಟಿಆರ್​ಎಸ್​ ನಾಯಕಿ, ಸಂಸದೆ ಕವಿತಾ ಅವರನ್ನೂ ಟ್ಯಾಗ್​ ಮಾಡಿದ್ದರು.ಇದನ್ನೂ ಓದಿ:VIDEO: ಸರ್ಫಿಂಗ್​ ಆಡಲು ಹೋಗಿದ್ದ ಕರೊನಾ ಸೋಂಕಿತಳನ್ನು ಬೆನ್ನಟ್ಟಿದ ಪೊಲೀಸರು; ಆಕೆ ಮಾಡಿದ್ದೇನು?
ಪತ್ರಕರ್ತ ಟ್ವೀಟ್​ ಮಾಡಿದ ಒಂದೇ ತಾಸಿನಲ್ಲಿ ಅವರ ಮನೆಗೆ ಅಗತ್ಯ ವಸ್ತುಗಳೆಲ್ಲ ಬಂದಿವೆ. ಅಷ್ಟೇ ಅಲ್ಲ, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ತೆಲಂಗಾಣ ಮೀಡಿಯಾ ಅಸೋಸಿಯೇಟ್​​ನ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದಾರೆ. ಕೊವಿಡ್​-19 ಸೋಂಕಿತ ಪತ್ರಕರ್ತರಿಗೆ ನೆರವಾಗಿ ಎಂದೂ ಸೂಚಿಸಿದ್ದಾರೆ.
ಕೆ.ಕವಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕರೊನಾ ಲಾಕ್​ಡೌನ್​ ಸಮಯದಲ್ಲಿ ಹಲವರಿಗೆ ಸಹಾಯ ಹಸ್ತ ಚಾಚಿದ್ದಾರೆ. ವಲಸೆ ಕಾರ್ಮಿಕರು ಅವರ ಊರುಗಳಿಗೆ ಸೇರಲೂ ಸಾರಿಗೆ ವ್ಯವಸ್ಥೆ ಮಾಡಿದ್ದರು.(ಏಜೆನ್ಸೀಸ್​)
ಈ ಭಯಾನಕ ಘಟನೆ ಕೇರಳದಲ್ಲಿ ನಡೆಯಿತಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
