ನವದೆಹಲಿ:ಜೈಲಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಹದಗೆಡುತ್ತಿದೆ ಮತ್ತು ಅವರ ತೂಕ ವೇಗವಾಗಿ ಕಡಿಮೆಯಾಗುತ್ತಿದೆ. ಮಾರ್ಚ್‌ನಲ್ಲಿ ಬಂಧಿಸಿದ ನಂತರ ಕೇಜ್ರಿವಾಲ್ ಅವರ ತೂಕ 8.5 ಕೆಜಿ ಕಡಿಮೆಯಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದರು. ಅಲ್ಲದೆ  ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಟ್ಟು ಆರೋಗ್ಯಕ್ಕೆ ಹಾನಿ ಮಾಡಲು ಬಿಜೆಪಿ ಪಿತೂರಿ ನಡೆಸುತ್ತಿದೆ. ಅವರು ಮಧುಮೇಹಿಯಾಗಿರುವ ಕಾರಣ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿತ್ತು.
ಇದನ್ನು ಓದಿ:ಸಿಬಿಐ ತನಿಖೆ ರದ್ದುಗೊಳಿಸುವಂತೆ ಡಿಕೆಶಿ​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ; ನ್ಯಾಯಾಲಯ ಹೇಳಿದ್ದೇನು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ 8.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಎಎಪಿ ಹೇಳಿಕೆ ನೀಡಿದ ಒಂದು ದಿನದ ನಂತರ, ಅವರು ಕೇವಲ 2 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಮತ್ತು AIIMS ವೈದ್ಯಕೀಯ ಮಂಡಳಿಯಿಂದ ನಿಯಮಿತ ನಿಗಾ ವಹಿಸಲಾಗಿದೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ. ಎಎಪಿ ಮಂತ್ರಿಗಳು ಮತ್ತು ನಾಯಕರು ಮಾಡಿದ ಆರೋಪಗಳ ಬಗ್ಗೆ ಜೈಲು ಆಡಳಿತವು ದೆಹಲಿ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದಿದೆ. ಅಂತಹ ಕಥೆಯು ಸಾರ್ವಜನಿಕರನ್ನು ಗೊಂದಲಗೊಳಿಸುತ್ತದೆ ಮತ್ತು ದಾರಿ ತಪ್ಪಿಸುತ್ತದೆ ಎಂದು ಹೇಳಿದೆ.
ಕೇಜ್ರಿವಾಲ್ 2024ರ ಏಪ್ರಿಲ್ 1 ರಂದು ಮೊದಲ ಬಾರಿಗೆ ತಿಹಾರ್‌ಗೆ ಬಂದಾಗ ಅವರ ತೂಕ 65 ಕೆ.ಜಿ ಇತ್ತು. ಮೇ 10ರಂದು ಕೇಜ್ರಿವಾಲ್ ತಿಹಾರ್ ಜೈಲನ್ನು ತೊರೆದಾಗ ಅವರ ತೂಕ 64 ಕೆ.ಜಿ. ವಾಸ್ತವವಾಗಿ, ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಕೇಜ್ರಿವಾಲ್‌ಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಮೇ 10 ರಿಂದ ಜೂನ್ 1ರವರೆಗೆ ಪ್ರಚಾರಕ್ಕಾಗಿ ಜಾಮೀನು ಪಡೆದಿದ್ದರು. ಜಾಮೀನು ಅವಧಿ ಮುಗಿದ ಬಳಿಕ ಜೂನ್ 2 ರಂದು ತಿಹಾರ್​ ಜೈಲಿಗೆ ಶರಣಾದಾಗ ಸಿಎಂ ಕೇಜ್ರಿವಾಲ್​​ ಅವರ ತೂಕ 63.5 ಕೆಜಿ ಇತ್ತು ಎಂದು ಜೈಲು ಅಧೀಕ್ಷಕರು ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಅವರ ತೂಕ 61.5 (ಜುಲೈ 14) ಕೆ.ಜಿ. ಇದೆ. ಆದ್ದರಿಂದ, ಪರಿಣಾಮಕಾರಿಯಾಗಿ ಅವರ ತೂಕವು 2 ಕೆಜಿಯಷ್ಟು ಕಡಿಮೆಯಾಗಿದ್ದು ಈ ಮೂಲಕ 8.5 ಕೆ.ಜಿ ತೂಕ ಇಳಿಕೆಯ ಹೇಳಿಕೆಯಲ್ಲಿ ಸತ್ಯಾಂಶ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕಡಿಮೆ ಆಹಾರ ಸೇವನೆ ಅಥವಾ ಕಡಿಮೆ ಕ್ಯಾಲೋರಿ ಸೇವನೆಯಿಂದಲೂ ತೂಕ ಕಡಿಮೆಯಾಗಬಹುದು ಎಂದು ತಿಹಾರ್ ಜೈಲು ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ರತಿದಿನ ತಪಾಸಣೆ ನಡೆಯುತ್ತಿದೆ. ಅಲ್ಲದೆ, ನ್ಯಾಯಾಲಯದ ಆದೇಶದಂತೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ವೈದ್ಯಕೀಯ ಮಂಡಳಿಯ ಸಮಾಲೋಚನೆಯ ಸಮಯದಲ್ಲಿ ಹಾಜರಿದ್ದರು ಎಂದು ತಿಳಿಸಿದರು. (ಏಜೆನ್ಸೀಸ್​​)
ಇಮ್ರಾನ್​ಖಾನ್​ ಪಕ್ಷ ನಿಷೇಧಿಸಲು ನಿರ್ಧರಿಸಿದ ಪಾಕ್​ ಸರ್ಕಾರ; ಹೇಳಿದ ಕಾರಣವೇನು ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 13 =
Remember me
