ಜೈಪುರ: ‘ಸಾರ್ವಜನಿಕರೇ ದಯವಿಟ್ಟು ಸಹಕರಿಸಿ.. ಕರೊನಾ ಚಿಕಿತ್ಸೆ ಕುರಿತು ಯಾವ ವೈದ್ಯರಿಗೂ ಸರಿಯಾಗಿ ತಿಳಿದಿಲ್ಲ. ಕೋವಿಡ್​-19 ಗುಣಪಡಿಸುವ ಔಷಧ ಅಥವಾ ಬರದಂತೆ ತಡೆಯುವ ಲಸಿಕೆ ಇನ್ನೂ ಯಾರೂ ಕಂಡು ಹಿಡಿದಿಲ್ಲ’ ಎಂಬುದಾಗಿ ಮುಖ್ಯಮಂತ್ರಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ರಾಜ್ಯದ ಜನರಲ್ಲಿ​ ಇಂಥದ್ದೊಂದು ವಿನಂತಿ ಮಾಡಿಕೊಂಡಿದ್ದಾರೆ. ತುಂಬ ಕಂಪನಿಗಳು ಕರೊನಾ ಔಷಧ ಕಂಡುಹಿಡಿಯಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಿವೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸಿ ಓಡಾಡಲು ಆರಂಭಿಸಿದರೆ ಕೋವಿಡ್​ ಸೋಂಕನ್ನು ತಡೆಯಬಹುದು ಎಂದು ರಾಜಸ್ಥಾನದ ಹಲವು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರೆಲ್ಲರೂ ಮಾಸ್ಕ್​ ಧರಿಸಿಯೇ ಓಡಾಡಬೇಕು ಎಂದು ಗೆಹ್ಲೋಟ್​ ಕೋರಿಕೊಂಡಿದ್ದಾರೆ.
ಇದನ್ನೂ ಓದಿ:ಕರೊನಾ ಬುಲೆಟಿನ್​: ಸೋಂಕಿತರ ಸಂಖ್ಯೆ 7.5 ಲಕ್ಷದತ್ತ…
ಹಲವು ಸೋಂಕಿತರು ಈಗ ಗುಣವಾಗಿದ್ದಾರೆ. ಆದರೆ ಆ ಬಳಿಕ ಬೇರೆ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ವೈರಸ್​ ಕೂಡ ತನ್ನ ಸ್ವಭಾವ ಬದಲಿಸುತ್ತಿದೆ. ಹೀಗಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ವಿನಂತಿಸಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಈ ಪರೀಕ್ಷೆಯಲ್ಲಿ ಐದೇ ನಿಮಿಷದೊಳಗೆ ಕರೊನಾ ಸೋಂಕು ಪತ್ತೆ ಆಗುತ್ತೆ..!!!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
