ಲಖನೌ, ಉತ್ತರಪ್ರದೇಶ:ದೇಶಾದ್ಯಂತ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ತಮ್ಮ ರಾಜ್ಯದ ಜನತೆಗೆ ಇದೀಗ ಸಿಎಂ ಯೋಗಿ ಆದಿತ್ಯನಾಥ್​ ಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ:ತೆಲಂಗಾಣದಲ್ಲಿ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಅಬ್ಬರದ ಭಾಷಣ
ಹಬ್ಬದ ಸಂದರ್ಭದಲ್ಲಿ ಯುಪಿ ಹೌಸಿಂಗ್ ಬೋರ್ಡ್ ಅಯೋಧ್ಯೆಯಲ್ಲಿ ಮಠಗಳು, ದೇವಾಲಯಗಳು, ಅತಿಥಿ ಗೃಹಗಳು ಮತ್ತು ಇತರ ವಾಣಿಜ್ಯ ಸಂಕೀರ್ಣಗಳಿಗೆ ಭೂಮಿ ಹಂಚಿಕೆಗಾಗಿ ನೋಂದಣಿಯನ್ನು ಪ್ರಾರಂಭಿಸಿದೆ. ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯೊಂದಿಗೆ, ಅಯೋಧ್ಯೆಯಲ್ಲಿ ಯಾತ್ರಾರ್ಥಿಗಳ ಹರಿವು ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಯುಪಿ ಸರ್ಕಾರ ನಿರೀಕ್ಷಿಸಿದೆ. ಈ ಹಿನ್ನಲೆ ಈ ಯೋಜನೆ ಮುನ್ನೆಲೆಗೆ ತರಲಾಗಿದೆ ಎಂದು ಹೇಳಿದ್ದಾರೆ.
ಹೌಸಿಂಗ್ ಬೋರ್ಡ್ ನವ್ಯ ಅಯೋಧ್ಯೆ ಹೆಸರಿನಲ್ಲಿ ಹೊಸ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಮಂಡಳಿಯಿಂದ ಅಯೋಧ್ಯೆಯ ಮಾಜಾ, ಬರ್ಹತಾ, ತರುವಾ ಮತ್ತು ಶಹನವಾಜ್‌ಪುರ ಗ್ರಾಮಗಳಲ್ಲಿ ಖರೀದಿಸಿದ 1,854 ಎಕರೆ ಭೂಮಿಯಲ್ಲಿ ಹೊಸ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್​ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್​ ಕ್ಯಾಪ್ಟನ್​
ಭೂಮಿ ಹಂಚಿಕೆಗಾಗಿ ನೋಂದಣಿ:ಮಠಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ 40 ನಿವೇಶನಗಳ ಹಂಚಿಕೆಗೆ ನೋಂದಣಿಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಈ ಪೈಕಿ 28 ನಿವೇಶನಗಳನ್ನು ಮಠಗಳಿಗೆ ಹಾಗೂ 12 ವಾಣಿಜ್ಯ ಸಂಕೀರ್ಣಗಳಿಗೆ ಮೀಸಲಿಡಲಾಗಿದ್ದು, ನೋಂದಣಿ ಪ್ರಕ್ರಿಯೆಯು ನವೆಂಬರ್ 24 ರಂದು ಮುಕ್ತಾಯಗೊಳ್ಳಲಿದೆ ಎಂದು ಗೃಹ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮರುದಿನ ಅಂತಿಮ ಹಂಚಿಕೆಗಾಗಿ ಲಾಟರಿ ಮಾಡಲಾಗುವುದು. ಮಠಗಳಿಗೆ ಪ್ಲಾಟ್‌ಗಳ ದರವನ್ನು ಪ್ರತಿ ಚದರ ಮೀಟರ್‌ಗೆ 50 ರೂ.ನಿಂದ 55,000 ರೂ.ವರೆಗೆ ನಿಗದಿಪಡಿಸಲಾಗಿದೆ ಮತ್ತು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ವಾಣಿಜ್ಯ ಸಂಕೀರ್ಣಗಳ ಬಿಡ್ಡಿಂಗ್ ಕೂಡ ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಂಜಾರ ಸಂಸ್ಕೃತಿ ಕುರಿತ ಭಾಯ್​ ಚಿತ್ರದಲ್ಲಿ ಯುವ ಮತ್ತು ಪೂಜಾ
ಇದಲ್ಲದೆ, ಅಯೋಧ್ಯೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಟೌನ್‌ಶಿಪ್‌ನಲ್ಲಿ ಅತಿಥಿ ಗೃಹಗಳಿಗಾಗಿ ವಸತಿ ಮಂಡಳಿಯು ಪ್ಲಾಟ್‌ಗಳನ್ನು ಸಹ ಅಭಿವೃದ್ಧಿಪಡಿಸಿದೆ. ಅಯೋಧ್ಯೆಯಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲು ಬಯಸುವ ರಾಜ್ಯಗಳಿಗೆ ಈ ಪ್ಲಾಟ್‌ಗಳನ್ನು ಹಂಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಪಿ ಸರ್ಕಾರವು ಅಯೋಧ್ಯೆಯಲ್ಲಿ ಅತಿಥಿ ಗೃಹಕ್ಕಾಗಿ ರಾಜ್ಯಗಳು ಮತ್ತು ಇತರ ದೇಶಗಳಿಗೆ ಭೂಮಿಯನ್ನು ನೀಡಿದೆ. ಇಲ್ಲಿಯವರೆಗೆ ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಿಂ, ಆಸಂ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳು ಅತಿಥಿ ಗೃಹದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿವೆ. ಮಂಡಳಿಯು ಈಗಾಗಲೇ ಅತಿಥಿ ಗೃಹಕ್ಕಾಗಿ ಗುಜರಾತ್ ರಾಜ್ಯಕ್ಕೆ 6000 ಚದರ ಮೀಟರ್ ಭೂಮಿಯನ್ನು ಮಂಜೂರು ಮಾಡಿದೆ. ಶ್ರೀಲಂಕಾ, ನೇಪಾಳ ಮತ್ತು ದಕ್ಷಿಣ ಕೊರಿಯಾ ಕೂಡ ಅಯೋಧ್ಯೆಯಲ್ಲಿ ತಮ್ಮದೇ ಆದ ಅತಿಥಿ ಗೃಹವನ್ನು ಹೊಂದಲು ಉದ್ದೇಶಿಸಿವೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಟಾಲಿವುಡ್​ಗೆ ನಟಿ ರುಕ್ಮಿಣಿ ವಸಂತ್?; ಈ ನಟನೊಂದಿಗೆ ನಟಿಸಲಿದ್ದಾರೆ ‘ಸಪ್ತಸಾಗರದಾಚೆ ಎಲ್ಲೋ’ ಬೆಡಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
