ಅಯೋಧ್ಯೆ:ಅಯೋಧ್ಯೆಯ ರಾಮಮಂದಿರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಹೆಸರನ್ನು ಹೇಳಲು ಹಿಂದೇಟು ಹಾಕುತ್ತಿದ್ದವರು ಈಗ ಆಹ್ವಾನ ನೀಡಿದರೆ ಭೇಟಿ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ಡಾ.ಬ್ರೋ; ನ್ಯೂ ಇಯರ್​ನ ಹೊಸ ಹುರುಪಿನೊಂದಿಗೆ ಬ್ರೋ ಈಸ್​​ ಬ್ಯಾಕ್
ವೃಂದಾವನದ ವಾತ್ಸಲ್ಯಗ್ರಾಮದಲ್ಲಿ ಸಾಧ್ವಿ ಋತಂಭರ ಅವರ 60ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹಾಜರಾಗುತ್ತೇವೆ ಎಂದು ಹಲವು ವಿರೋಧ ಪಕ್ಷದ ನಾಯಕರು ತಿಳಿಸಿದ್ದಾರೆ” ಎಂದು ಹೇಳಿದರು.
“ಈ ಹಿಂದೆ ಅಯೋಧ್ಯೆಗೆ ಹೋಗಲು, ಹೆಸರು ಹೇಳಲೂ ಹಿಂದೇಟು ಹಾಕುತ್ತಿದ್ದವರು ಈಗ ಆಹ್ವಾನ ಬಂದರೆ ನಾವೂ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಮೂಲಸೌಕರ್ಯದಲ್ಲಿ ಬದಲಾವಣೆಯಾಗಿದ್ದು, ಈಗ ವಿಶಾಲವಾದ ರಸ್ತೆಗಳು, ಮೇಲ್ದರ್ಜೆಗೇರಿದ ರೈಲು ನಿಲ್ದಾಣ ಮತ್ತು ವಾಯು ಸಂಪರ್ಕವನ್ನು ಅಯೋಧ್ಯೆ ಹೊಂದಿದೆ. ಶೀಘ್ರದಲ್ಲೇ ಜಲಮಾರ್ಗಗಳನ್ನು ಕೂಡ ಹೊಂದಲಿದೆ” ಎಂದರು.
ಇದನ್ನೂ ಓದಿ:VIDEO | ಜಪಾನ್‌ನಲ್ಲಿ ಒಂದೇ ದಿನದಲ್ಲಿ 155 ಕಡೆ ಭೂಕಂಪ, ಇದುವರೆಗೆ 13 ಮಂದಿ ಸಾವು …ಎಚ್ಚರಿಕೆ ನೀಡಿದ ಪ್ರಧಾನಿ
ಭಾರತವನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ಪ್ರತಿಜ್ಞೆ ಮಾಡುವಂತೆ ಕೋರಿದ ಸಿಎಂ, “ದೇಶವನ್ನು ರಕ್ಷಿಸಲು 140 ಕೋಟಿ ಭಾರತೀಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಜಗತ್ತು ಭಾರತದ ಶಕ್ತಿಯನ್ನು ಅರಿತುಕೊಳ್ಳುತ್ತದೆ” ಎಂದರು,(ಏಜೆನ್ಸೀಸ್).
BBKS10: ಪ್ರತಾಪ್‌ ಸಂಕಟ ಪಡುವಂತ ಭವಿಷ್ಯ ಹೇಳಿದ ವಿದ್ಯಾಶಂಕರಾನಂದ ಸ್ವಾಮೀಜಿ! ಅಷ್ಟಕ್ಕೂ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − one =
Remember me
