ಉತ್ತರಪ್ರದೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ, ಕಟ್ಟರ್ ಹಿಂದುತ್ವದ ಕುರಿತ ಹೇಳಿಕೆಗಳ ಮೂಲಕ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಅಂಥದ್ದೇ ಮತ್ತೊಂದು ಹೇಳಿಕೆಯನ್ನು ಅವರು ನೀಡಿದ್ದು ಇದೀಗ ಭಾರಿ ಸದ್ದು ಮಾಡುತ್ತಿದೆ.
ಈ ಸಲ ಅವರು ಅಂತಿಮಯಾತ್ರೆ ಮಟ್ಟದಲ್ಲಿ ಮಾತನಾಡಿದ್ದು, ತಪ್ಪಿತಸ್ಥರು ಸುಧಾರಣೆ ಆಗದಿದ್ದರೆ ಅವರಿಗೆ ಚಟ್ಟ ಕಟ್ಟುವುದು ಖಚಿತ ಎಂಬರ್ಥದಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಯೋಗಿ ಆದಿತ್ಯನಾಥ್​ ಈ ಥರ ಕಟುವಾಗಿ ಮಾತನಾಡಿದ್ದು ಯಾರ ವಿರುದ್ಧ ಎಂಬ ಕುತೂಹಲ ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಅವರು ಲವ್ ಜಿಹಾದ್ ವಿರುದ್ಧ ಗುಡುಗಿದ್ದಾರೆ. ಮದುವೆ ಆಗಲು ಮತಾಂತರ ಆಗಬೇಕಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಅದಾಗ್ಯೂ ಗುರುತು ಮರೆಮಾಚಿ ಹಿಂದೂ ಸೋದರಿಯರ ಜೀವನದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಹೀಗಾಗಿ ಲವ್ ಜಿಹಾದ್ ವಿರುದ್ಧ ಸರ್ಕಾರ ಕಠಿಣವಾದ ಕಾನೂನೊಂದನ್ನು ಮಾಡಲಿದೆ. ಲವ್ ಜಿಹಾದ್​ ನಡೆಸುವವರು ತಿದ್ದಿಕೊಳ್ಳದಿದ್ದರೆ ಅವರ ರಾಮ್​ ನಾಮ್ ಸತ್ಯ ಯಾತ್ರೆ (ಅಂತಿಮಯಾತ್ರೆ) ಶುರುವಾಗುತ್ತದೆ ಎಂದು ಸಿಎಂ ಯೋಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)
#WATCHAllahabad HC said religious conversion isn't necessary for marriage. Govt will also work to curb 'Love-Jihad', we'll make a law. I warn those who conceal identity & play with our sisters' respect, if you don't mend your ways your 'Ram naam satya' journey will begin: UP CMpic.twitter.com/7Ddhz15inS
— ANI UP/Uttarakhand (@ANINewsUP)October 31, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
