ದರ್ಭಾಂಗ್​:ಕೋಚಿಂಗ್​ ಸೆಂಟರ್​ನ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಕತ್ತು ಸೀಳಿರುವ ಘಟನೆ ಬಿಹಾರದ ದರ್ಭಾಂಗದಲ್ಲಿ ನಡೆದಿದೆ.
ಇದನ್ನೂ ಓದಿ:ಇಬ್ಬರು ಮಕ್ಕಳ ತಂದೆ, ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾದ..
ಸಂತ್ರಸ್ತ ವಿದ್ಯಾರ್ಥಿನಿಯ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಮಲಿಕ್‌ಪುರ ಗ್ರಾಮದ ನಿವಾಸಿ ಕಿಶನ್‌ ಶರ್ಮಾ ಕೋಚಿಂಗ್‌ ಸಂಸ್ಥೆ ನಡೆಸುತ್ತಿದ್ದು, ಆತ ಬಳಿ ಮಲಿಕ್‌ಪುರ ಸೇರಿದಂತೆ ಸಮೀಪದ ಗ್ರಾಮಗಳ ವಿದ್ಯಾರ್ಥಿಗಳು ಟ್ಯೂಷನ್‌ಗೆ ಬರುತ್ತಿದ್ದರು. ಶನಿವಾರದಂದು 16 ವರ್ಷದ ಸಂತ್ರಸ್ತ ವಿದ್ಯಾರ್ಥಿನಿ ಸಹ ಕೋಚಿಂಗ್ ಕ್ಲಾಸ್​ಗೆ ಬಂದಿದ್ದಳು.ಆದರೆ ತರಗತಿ ಮುಗಿದ ನಂತರ ಆತ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಎಲ್ಲ ವಿದ್ಯಾರ್ಥಿಗಳಿಗೆ ಹೊರಡುವಂತೆ ತಿಳಿಸಿದ್ದಾನೆ. ಎಲ್ಲರೂ ಹೋದ ಬಳಿಕ ಆರೋಪಿ ಶಿಕ್ಷಕ ಆಕೆಯೊಂದಿಗೆ ಅಶ್ಲೀಲ ಕೃತ್ಯಗಳನ್ನು ಎಸಗತೊಡಗಲು ಮುಂದಾಗಿದ್ದು ಆಕೆ ಇದನ್ನು ವಿರೋಧಿಸಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಆರೋಪಿಯು ವಿದ್ಯಾರ್ಥಿನಿಯ ಕತ್ತು ಸೀಳಿ ದ್ವಿಚಕ್ರವಾಹನ ಚಲಾಯಿಸಿಕೊಂಡು ಹೋಗಿದ್ದಾನೆ.
ಇದನ್ನೂ ಓದಿ:VIDEO| ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕಾಗಿ 7,200 ವಜ್ರಗಳೊಂದಿಗೆ ವಿಶೇಷ ಭಾವಚಿತ್ರ ತಯಾರಿಸಿದ ಸೂರತ್ ವಾಸ್ತುಶಿಲ್ಪಿ..ಶಿಕ್ಷಕಿ ಈ ರೀತಿ ಗಲಿಬಿಲಿಯಾಗಿರುವುದನ್ನು ಕಂಡು ಸುತ್ತಮುತ್ತಲಿನವರಿಗೆ ಅನುಮಾನ ಬಂದು ಕೋಚಿಂಗ್‌ನಲ್ಲಿ ಇಣುಕಿ ನೋಡಿದಾಗ ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಯಾರೋ ಬಾಲಕಿಯ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಇದರೊಂದಿಗೆ ಆರೋಪಿ ಶಿಕ್ಷಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 8 =
Remember me
